ಆಲ್-ಇಮ್ರಾನ್ · 26/200
ಅನುವಾದ ಉಚ್ಚಾರಣೆ — ಸೂರಾ ಆಲ್-ಇಮ್ರಾನ್
قُلِ اللَّهُمَّ مَالِكَ الْمُلْكِ تُؤْتِي الْمُلْكَ مَن تَشَاءُ وَتَنزِعُ الْمُلْكَ مِمَّن تَشَاءُ وَتُعِزُّ مَن تَشَاءُ وَتُذِلُّ مَن تَشَاءُ ۖ بِيَدِكَ الْخَيْرُ ۖ إِنَّكَ عَلَىٰ كُلِّ شَيْءٍ قَدِيرٌ ۝٢٦
Qulil laahumma Maalikal Mulki tu`til mulka man tashaaa`u wa tanzi`ulmulka mimman tashhaaa`u wa tu`izzu man tashaaa`u wa tuzillu man tashaaa`u biyadikal khairu innaka `alaa kulli shai`in Qadeer
📖 ಕನ್ನಡ ಅರ್ಥ
ಓ ಪೈಗಂಬರರೇ ಹೇಳಿರಿ; ಓ ಅಲ್ಲಾಹ್ ಸರ್ವಾಧಿಪತ್ಯದ ಒಡೆಯನೇ, ನೀನಿಚ್ಛಿಸುವವರಿಗೆ ಅಧಿಪತ್ಯವನ್ನು ನೀಡುವೆ ನೀನಿಚ್ಛಿಸುವವರಿಂದ ಅಧಿಪತ್ಯವನ್ನು ಕಸಿದುಕೊಳ್ಳುವೆ ನೀನಿಚ್ಛಿಸುವವರಿಗೆ ಸನ್ಮಾನ ಪ್ರತಾಪವನ್ನು ನೀಡುವೆ ಮತ್ತು ನೀನಿಚ್ಛಿಸುವವರಿಗೆ ನಿಂದ್ಯತೆಯನ್ನೀಡುವೆ. ನಿನ್ನ ಕೈಯಲ್ಲೇ ಸಕಲ ಒಳಿತುಗಳಿವೆ. ನಿಸ್ಸಂಶಯವಾಗಿಯು ನೀನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿರುವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 24-28 — ಸೂರಾ ಆಲ್-ಇಮ್ರಾನ್

24ذَٰلِكَ بِأَنَّهُمْ قَالُوا لَن تَمَسَّنَا النَّارُ إِلَّا أَيَّامًا مَّعْدُودَاتٍ ۖ وَغَرَّهُمْ فِي دِينِهِم مَّا كَانُوا يَفْتَرُونَ
(ಇವರ ಈ ವರ್ತನೆ) ಎಣಿಕೆಯ ಕೆಲವು ದಿನಗಳ ಹೊರತು ನರಕಾಗ್ನಿಯು ನಮ್ಮನ್ನು ಖಂಡಿತ ಸ್ಪರ್ಶಿಸದು ಎಂಬ ಅವರ ಹೇಳಿಕೆಯೇ ಇದಕ್ಕಿರುವ ಕಾರಣವಾಗಿದೆ. ಧರ್ಮದ ವಿಷಯದಲ್ಲಿ ಅವರ ಸ್ವರಚಿತವಾದಗಳು ಅವರನ್ನು ಮೋಸಕ್ಕೊಳಗಾಗಿಸಿವೆ.
25فَكَيْفَ إِذَا جَمَعْنَاهُمْ لِيَوْمٍ لَّا رَيْبَ فِيهِ وَوُفِّيَتْ كُلُّ نَفْسٍ مَّا كَسَبَتْ وَهُمْ لَا يُظْلَمُونَ
ಒಂದು ದಿನವನ್ನು ಎದುರಿಸಲು ನಾವು ಅವರನ್ನು ಒಟ್ಟುಗೂಡಿಸಿದಾಗ ಆಕ್ರೋಶದ ಅವಸ್ಥೆಯು ಏನಾಗಬಹುದು? ಆ ದಿನದ ಆಗಮನದಲ್ಲಿ ಯಾವುದೇ ಸಂದೇಹವಿಲ್ಲ. ಅಂದು ಪ್ರತಿಯೊಬ್ಬನಿಗೂ ಅವನು ಮಾಡಿರುವುದನ್ನು ಪರಿಪೂರ್ಣವಾಗಿ ನೀಡಲಾಗುವುದು. ಅವರೊಂದಿಗೆ ಅನ್ಯಾಯವೆಸಗಲಾಗದು.
26قُلِ اللَّهُمَّ مَالِكَ الْمُلْكِ تُؤْتِي الْمُلْكَ مَن تَشَاءُ وَتَنزِعُ الْمُلْكَ مِمَّن تَشَاءُ وَتُعِزُّ مَن تَشَاءُ وَتُذِلُّ مَن تَشَاءُ ۖ بِيَدِكَ الْخَيْرُ ۖ إِنَّكَ عَلَىٰ كُلِّ شَيْءٍ قَدِيرٌ
ಓ ಪೈಗಂಬರರೇ ಹೇಳಿರಿ; ಓ ಅಲ್ಲಾಹ್ ಸರ್ವಾಧಿಪತ್ಯದ ಒಡೆಯನೇ, ನೀನಿಚ್ಛಿಸುವವರಿಗೆ ಅಧಿಪತ್ಯವನ್ನು ನೀಡುವೆ ನೀನಿಚ್ಛಿಸುವವರಿಂದ ಅಧಿಪತ್ಯವನ್ನು ಕಸಿದುಕೊಳ್ಳುವೆ ನೀನಿಚ್ಛಿಸುವವರಿಗೆ ಸನ್ಮಾನ ಪ್ರತಾಪವನ್ನು ನೀಡುವೆ ಮತ್ತು ನೀನಿಚ್ಛಿಸುವವರಿಗೆ ನಿಂದ್ಯತೆಯನ್ನೀಡುವೆ. ನಿನ್ನ ಕೈಯಲ್ಲೇ ಸಕಲ ಒಳಿತುಗಳಿವೆ. ನಿಸ್ಸಂಶಯವಾಗಿಯು ನೀನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿರುವೆ.
27تُولِجُ اللَّيْلَ فِي النَّهَارِ وَتُولِجُ النَّهَارَ فِي اللَّيْلِ ۖ وَتُخْرِجُ الْحَيَّ مِنَ الْمَيِّتِ وَتُخْرِجُ الْمَيِّتَ مِنَ الْحَيِّ ۖ وَتَرْزُقُ مَن تَشَاءُ بِغَيْرِ حِسَابٍ
ನೀನೇ ರಾತ್ರಿಯನ್ನು ಹಗಲಿನೊಳಗೆ ಮತ್ತು ಹಗಲನ್ನು ರಾತ್ರಿಯೊಳಗೆ ಪ್ರವೇಶಗೊಳಿಸುವೆ. ನೀನು ನಿರ್ಜೀವಿಯಿಂದ ಜೀವಿಯನ್ನು ಹೊರತರುವೆ ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತರುವೆ. ನೀನಿಚ್ಛಿಸುವವರಿಗೆ ಲೆಕ್ಕವಿಲ್ಲದ ಅನ್ನಾಧಾರ ನೀಡುವವನು ನೀನೆ ಆಗಿರುವೆ.
28لَّا يَتَّخِذِ الْمُؤْمِنُونَ الْكَافِرِينَ أَوْلِيَاءَ مِن دُونِ الْمُؤْمِنِينَ ۖ وَمَن يَفْعَلْ ذَٰلِكَ فَلَيْسَ مِنَ اللَّهِ فِي شَيْءٍ إِلَّا أَن تَتَّقُوا مِنْهُمْ تُقَاةً ۗ وَيُحَذِّرُكُمُ اللَّهُ نَفْسَهُ ۗ وَإِلَى اللَّهِ الْمَصِيرُ
ಸತ್ಯವಿಶ್ವಾಸಿಗಳು ಸತ್ಯವಿಶ್ವಾಸಿಗಳ ವಿರುದ್ಧ ಸತ್ಯನಿಷೇಧಿಗಳನ್ನು ಮಿತ್ರರನ್ನಾಗಿ ಮಾಡಿಕೊಳ್ಳಬಾರದು ಮತ್ತು ಯಾರು ಹಾಗೆ ಮಾಡುತ್ತಾನೋ ಅವನಿಗೆ ಅಲ್ಲಾಹನೊಡನೆ ಯಾವ ಸಂಬAಧವಿಲ್ಲ. ಆದರೆ ಅವರ ಕೆಡುಕಿನಿಂದ ಹೇಗಾದರೂ ರಕ್ಷಣೆ ಪಡೆಯುವ ಉದ್ದೇಶವಿದ್ದರೆ ಬೇರೆ ವಿಚಾರ ಮತ್ತು ಅಲ್ಲಾಹನು ತನ್ನ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತಾನೆ ಮತ್ತು ಅಲ್ಲಾಹನೆಡೆಗೇ ಮರಳುವಿಕೆಯಿರುವುದು.
ಆಲ್-ಇಮ್ರಾನ್ಕುರಾನ್ ಸೂಚಿ
200ಆಯತ್
MedinanRevelation
26ಆಯತ್

ಅನುವಾದ — ಆಲ್-ಇಮ್ರಾನ್ 26

ಸೂರಾ ಆಲ್-ಇಮ್ರಾನ್ ಆಯತ್ 26 - ಓದಿ, ಆಲಿಸಿ, ಅನುವಾದ, ಕನ್ನಡ : ಓ ಪೈಗಂಬರರೇ ಹೇಳಿರಿ; ಓ ಅಲ್ಲಾಹ್ ಸರ್ವಾಧಿಪತ್ಯದ ಒಡೆಯನೇ, ನೀನಿಚ್ಛಿಸುವವರಿಗೆ ಅಧಿಪತ್ಯವನ್ನು ನೀಡುವೆ…

ಸೂರಾ ಆಯತ್ 26/200 — ಸೂರಾ ಆಲ್-ಇಮ್ರಾನ್ آل عمران (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಆಲ್-ಇಮ್ರಾನ್ ಆಲಿಸಿ, ಸೂರಾ ಆಲ್-ಇಮ್ರಾನ್ ಅನುವಾದ, ಸೂರಾ ಆಲ್-ಇಮ್ರಾನ್ mp3, ಸೂರಾ ಆಲ್-ಇಮ್ರಾನ್ pdf. ಆಯತ್ 24–28. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers