ಅರ್-ರೂಮ್ · 48/60
ಅನುವಾದ ಉಚ್ಚಾರಣೆ — ಸೂರಾ ಅರ್-ರೂಮ್
اللَّهُ الَّذِي يُرْسِلُ الرِّيَاحَ فَتُثِيرُ سَحَابًا فَيَبْسُطُهُ فِي السَّمَاءِ كَيْفَ يَشَاءُ وَيَجْعَلُهُ كِسَفًا فَتَرَى الْوَدْقَ يَخْرُجُ مِنْ خِلَالِهِ ۖ فَإِذَا أَصَابَ بِهِ مَن يَشَاءُ مِنْ عِبَادِهِ إِذَا هُمْ يَسْتَبْشِرُونَ ۝٤٨
Allaahul lazee yursilur riyaaha fatuseeru sahaaban fa yabsutuhoo fis samaaa`i kaifa yashaaa`u wa yaj`aluhoo kisafan fataral wadqa yakhruju min khilaalihee fa izaaa asaaba bihee mai yashaaa`u min `ibaadiheee izaa hum yastabshiroon
📖 ಕನ್ನಡ ಅರ್ಥ
ಅಲ್ಲಾಹನು ಮಾರುತಗಳನ್ನು ಕಳುಹಿಸುತ್ತಾನೆ. ಅವುಗಳು ಮೋಡಗಳನ್ನು ಹೊತ್ತುಕೊಳ್ಳುತ್ತವೆ. ಅನಂತರ ಅಲ್ಲಾಹನು ತನ್ನಇಚ್ಛೆಯ ಪ್ರಕಾರ ಅವುಗಳನ್ನು ಆಕಾಶದಲ್ಲಿ ಹಬ್ಬಿಸುತ್ತಾನೆ ಮತ್ತು ಅವುಗಳನ್ನು ತುಣುಕು ತುಣುಕುಗಳನ್ನಾಗಿ ಮಾಡುತ್ತಾನೆ. ಅನಂತರ ನೀವು ಅವುಗಳಿಂದ ಮಳೆ ಹನಿಗಳು ಹೊರಬರುವುದನ್ನು ಕಾಣುವಿರಿ ಮತ್ತು ಅಲ್ಲಾಹನು ಇಚ್ಛಿಸುವ ತನ್ನ ದಾಸರ ಮೇಲೆ ಅದನ್ನು ವರ್ಷಿಸಿದಾಗ ಅವರು ಹರ್ಷಗೊಳ್ಳುವರು.

🎧 ಆಲಿಸಿ


📜 ಆಯತ್ 46-50 — ಸೂರಾ ಅರ್-ರೂಮ್

46وَمِنْ آيَاتِهِ أَن يُرْسِلَ الرِّيَاحَ مُبَشِّرَاتٍ وَلِيُذِيقَكُم مِّن رَّحْمَتِهِ وَلِتَجْرِيَ الْفُلْكُ بِأَمْرِهِ وَلِتَبْتَغُوا مِن فَضْلِهِ وَلَعَلَّكُمْ تَشْكُرُونَ
(ಮಳೆಯ) ಸುವಾರ್ತೆಯನ್ನು ನೀಡುವಂತಹ ಮಾರುತಗಳನ್ನು ಕಳುಹಿಸುವುದು ಅವನ ನಿದರ್ಶನಗಳಲ್ಲೊಂದಾಗಿದೆ. ಇದು ಅವನು ಅವರಿಗೆ ತನ್ನ ಕಾರುಣ್ಯದ ಸವಿಯನ್ನುಣ್ಣಿಸಲೆಂದೂ ಅವನ ಆದೇಶದ ಮೇರೆಗೆ ಹಡಗು ಸಂಚರಿಸಲೆAದೂ ಅವನ ಅನುಗ್ರಹವನ್ನು ನೀವು ಅರಸಲೆಂದೂ ಮತ್ತು ನೀವು ಕೃತಜ್ಞತೆ ಸಲ್ಲಿಸಲೆಂದೂ ಆಗಿದೆ.
47وَلَقَدْ أَرْسَلْنَا مِن قَبْلِكَ رُسُلًا إِلَىٰ قَوْمِهِمْ فَجَاءُوهُم بِالْبَيِّنَاتِ فَانتَقَمْنَا مِنَ الَّذِينَ أَجْرَمُوا ۖ وَكَانَ حَقًّا عَلَيْنَا نَصْرُ الْمُؤْمِنِينَ
ನಿಶ್ಚಯವಾಗಿಯು ನಾವು ನಿಮಗಿಂತ ಮುಂಚೆ ಅನೇಕ ಸಂದೇಶವಾಹಕರನ್ನು ಅವರ ಜನಾಂಗಗಳೆಡೆಗೆ ಕಳುಹಿಸಿದ್ದೆವು. ಅವರು (ಪೈಗಂಬರರು) ಅವರ ಬಳಿಗೆ ಸುಸ್ಪಷ್ಟ ಪುರಾವೆಗಳನ್ನು ತಂದಿದ್ದರು. ಅನಂತರ ನಾವು ಆ ಅಪರಾಧಿಗಳೊಂದಿಗೆ ಪ್ರತಿಕಾರ ಪಡೆದೆವು. ಸತ್ಯವಿಶ್ವಾಸಿಗಳಿಗೆ ನೆರವಾಗುವುದು ನಮ್ಮ ಹೊಣೆಯಾಗಿದೆ.
48اللَّهُ الَّذِي يُرْسِلُ الرِّيَاحَ فَتُثِيرُ سَحَابًا فَيَبْسُطُهُ فِي السَّمَاءِ كَيْفَ يَشَاءُ وَيَجْعَلُهُ كِسَفًا فَتَرَى الْوَدْقَ يَخْرُجُ مِنْ خِلَالِهِ ۖ فَإِذَا أَصَابَ بِهِ مَن يَشَاءُ مِنْ عِبَادِهِ إِذَا هُمْ يَسْتَبْشِرُونَ
ಅಲ್ಲಾಹನು ಮಾರುತಗಳನ್ನು ಕಳುಹಿಸುತ್ತಾನೆ. ಅವುಗಳು ಮೋಡಗಳನ್ನು ಹೊತ್ತುಕೊಳ್ಳುತ್ತವೆ. ಅನಂತರ ಅಲ್ಲಾಹನು ತನ್ನಇಚ್ಛೆಯ ಪ್ರಕಾರ ಅವುಗಳನ್ನು ಆಕಾಶದಲ್ಲಿ ಹಬ್ಬಿಸುತ್ತಾನೆ ಮತ್ತು ಅವುಗಳನ್ನು ತುಣುಕು ತುಣುಕುಗಳನ್ನಾಗಿ ಮಾಡುತ್ತಾನೆ. ಅನಂತರ ನೀವು ಅವುಗಳಿಂದ ಮಳೆ ಹನಿಗಳು ಹೊರಬರುವುದನ್ನು ಕಾಣುವಿರಿ ಮತ್ತು ಅಲ್ಲಾಹನು ಇಚ್ಛಿಸುವ ತನ್ನ ದಾಸರ ಮೇಲೆ ಅದನ್ನು ವರ್ಷಿಸಿದಾಗ ಅವರು ಹರ್ಷಗೊಳ್ಳುವರು.
49وَإِن كَانُوا مِن قَبْلِ أَن يُنَزَّلَ عَلَيْهِم مِّن قَبْلِهِ لَمُبْلِسِينَ
ವಸ್ತುತಃ ಅವರು ತಮ್ಮ ಮೇಲೆ ಮಳೆ ಸುರಿಯವ ಮುನ್ನ ಹತಾಶರಾಗಿದ್ದರು.
50فَانظُرْ إِلَىٰ آثَارِ رَحْمَتِ اللَّهِ كَيْفَ يُحْيِي الْأَرْضَ بَعْدَ مَوْتِهَا ۚ إِنَّ ذَٰلِكَ لَمُحْيِي الْمَوْتَىٰ ۖ وَهُوَ عَلَىٰ كُلِّ شَيْءٍ قَدِيرٌ
ಆದ್ದರಿಂದ ನೀವು ಅಲ್ಲಾಹನ ಕಾರುಣ್ಯದ ಕುರುಹುಗಳನ್ನು ನೋಡಿರಿ. ಅಲ್ಲಾಹನು ಭೂಮಿಯನ್ನು ಅದರ ನಿರ್ಜೀವದ ಬಳಿಕ ಅದನ್ನು ಹೇಗೆ ಸಜೀವಗೊಳಿಸುತ್ತಾನೆ. ನಿಸ್ಸಂಶಯವಾಗಿಯೂ ಅವನೇ ಮೃತರನ್ನು ಜೀವಂತಗೊಳಿಸುವವನಾಗಿದ್ದಾನೆ ಮತ್ತು ಅವನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
ಅರ್-ರೂಮ್ಕುರಾನ್ ಸೂಚಿ
60ಆಯತ್
MeccanRevelation
48ಆಯತ್

ಅನುವಾದ — ಅರ್-ರೂಮ್ 48

ಸೂರಾ ಅರ್-ರೂಮ್ ಆಯತ್ 48 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನು ಮಾರುತಗಳನ್ನು ಕಳುಹಿಸುತ್ತಾನೆ. ಅವುಗಳು ಮೋಡಗಳನ್ನು ಹೊತ್ತುಕೊಳ್ಳುತ್ತವೆ. ಅನಂತರ ಅಲ್ಲಾಹನು ತನ್ನಇಚ್ಛೆಯ ಪ್ರಕಾರ…

ಸೂರಾ ಆಯತ್ 48/60 — ಸೂರಾ ಅರ್-ರೂಮ್ الروم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅರ್-ರೂಮ್ ಆಲಿಸಿ, ಸೂರಾ ಅರ್-ರೂಮ್ ಅನುವಾದ, ಸೂರಾ ಅರ್-ರೂಮ್ mp3, ಸೂರಾ ಅರ್-ರೂಮ್ pdf. ಆಯತ್ 46–50. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers