ಯೂನುಸ್ · 33/109
ಅನುವಾದ ಉಚ್ಚಾರಣೆ — ಸೂರಾ ಯೂನುಸ್
كَذَٰلِكَ حَقَّتْ كَلِمَتُ رَبِّكَ عَلَى الَّذِينَ فَسَقُوا أَنَّهُمْ لَا يُؤْمِنُونَ ۝٣٣
Kazaalika haqqat Kalimatu Rabbika `alal lazeena fasaqooo annahum laa yu`minoon
📖 ಕನ್ನಡ ಅರ್ಥ
ಇದೇ ಪ್ರಕಾರ ಕರ್ಮಭ್ರಷ್ಟರು ವಿಶ್ವಾಸವಿರಿಸಲಾರರು ಎಂಬ ನಿಮ್ಮ ಪ್ರಭುವಿನ ಮಾತು ಸತ್ಯವಾಗಿಬಿಟ್ಟಿದೆ.

🎧 ಆಲಿಸಿ


📜 ಆಯತ್ 31-35 — ಸೂರಾ ಯೂನುಸ್

31قُلْ مَن يَرْزُقُكُم مِّنَ السَّمَاءِ وَالْأَرْضِ أَمَّن يَمْلِكُ السَّمْعَ وَالْأَبْصَارَ وَمَن يُخْرِجُ الْحَيَّ مِنَ الْمَيِّتِ وَيُخْرِجُ الْمَيِّتَ مِنَ الْحَيِّ وَمَن يُدَبِّرُ الْأَمْرَ ۚ فَسَيَقُولُونَ اللَّهُ ۚ فَقُلْ أَفَلَا تَتَّقُونَ
ನಿಮಗೆ ಆಕಾಶ ಮತ್ತು ಭೂಮಿಯಿಂದ ಜೀವನಾಧಾರ ನೀಡುವವನು ಯಾರು? ಅಥವಾ ಕಿವಿಗಳ ಮತ್ತು ಕಣ್ಣುಗಳ ಒಡೆಯನಾರು ? ನಿರ್ಜೀವಿಯಿಂದ ಜೀವಿಯನ್ನು ಹೊರತೆಗೆಯುವವನಾರು? ಮತ್ತು ಸಕಲ ಕಾರ್ಯಗಳನ್ನು ನಿಯೋಜಿಸುವವನಾರು ? ಎಂದು ಅವರೊಡನೆ ಕೇಳಿರಿ. ಅವರು ಹೇಳುವರು; ಅಲ್ಲಾಹ್ ಆಗ ನೀವು ಅವರೊಂದಿಗೆ ಹೇಳಿರಿ. ಹಾಗಿದ್ದೂ ನೀವು ಭಯವಿರಿಸಿಕೊಳ್ಳುವುದಿಲ್ಲವೇ ?
32فَذَٰلِكُمُ اللَّهُ رَبُّكُمُ الْحَقُّ ۖ فَمَاذَا بَعْدَ الْحَقِّ إِلَّا الضَّلَالُ ۖ فَأَنَّىٰ تُصْرَفُونَ
ಅವನೇ ನಿಮ್ಮ ನೈಜ ಪ್ರಭು ಅಲ್ಲಾಹನಾಗಿದ್ದಾನೆ. ಇನ್ನು ಸತ್ಯವನ್ನು ಬಿಟ್ಟರೆ ಪಥಭ್ರಷ್ಟತೆಯಲ್ಲದೆ ಇನ್ನೇನು ಉಳಿದಿದೆ? ಹೀಗಿರುವಾಗ ನೀವೆತ್ತ ಅಲೆದಾಡಿಸಲಾಗುತ್ತಿರುವಿರಿ ?
33كَذَٰلِكَ حَقَّتْ كَلِمَتُ رَبِّكَ عَلَى الَّذِينَ فَسَقُوا أَنَّهُمْ لَا يُؤْمِنُونَ
ಇದೇ ಪ್ರಕಾರ ಕರ್ಮಭ್ರಷ್ಟರು ವಿಶ್ವಾಸವಿರಿಸಲಾರರು ಎಂಬ ನಿಮ್ಮ ಪ್ರಭುವಿನ ಮಾತು ಸತ್ಯವಾಗಿಬಿಟ್ಟಿದೆ.
34قُلْ هَلْ مِن شُرَكَائِكُم مَّن يَبْدَأُ الْخَلْقَ ثُمَّ يُعِيدُهُ ۚ قُلِ اللَّهُ يَبْدَأُ الْخَلْقَ ثُمَّ يُعِيدُهُ ۖ فَأَنَّىٰ تُؤْفَكُونَ
ಹೇಳಿರಿ; ಸೃಷ್ಟಿಯ ಆರಂಭ ಮಾಡಿ ಆನಂತರ ಪುನಾರಾವರ್ತಿಸುವವನು ಯಾರಾದರೂ ನಿಮ್ಮ ಸಹಭಾಗಿ ದೇವರುಗಳಲ್ಲಿದ್ದಾರೆಯೇ? ಹೇಳಿರಿ; ಅಲ್ಲಾಹನೇ ಸೃಷ್ಟಿಯನ್ನು ಆರಂಭಿಸುತ್ತಾನೆ ಆನಂತರ ಅವನೇ ಪುನರಾವರ್ತಿಸುತ್ತಾನೆ. ಹಾಗಿದ್ದೂ ನೀವೆತ್ತ ಅಲೆದಾಡಿಸಲಾಗುತ್ತಿರುವಿರಿ?
35قُلْ هَلْ مِن شُرَكَائِكُم مَّن يَهْدِي إِلَى الْحَقِّ ۚ قُلِ اللَّهُ يَهْدِي لِلْحَقِّ ۗ أَفَمَن يَهْدِي إِلَى الْحَقِّ أَحَقُّ أَن يُتَّبَعَ أَمَّن لَّا يَهِدِّي إِلَّا أَن يُهْدَىٰ ۖ فَمَا لَكُمْ كَيْفَ تَحْكُمُونَ
ಹೇಳಿರಿ ನಿಮ್ಮ ಸಹಭಾಗಿ ದೇವರುಗಳಲ್ಲಿ ಸತ್ಯದೆಡೆಗೆ ಮಾರ್ಗದರ್ಶನ ಮಾಡುವವರು ಯಾರಾದರೂ ಇದ್ದಾರೆಯೇ? ಹೇಳಿರಿ: ಅಲ್ಲಾಹನೇ ಸತ್ಯದೆಡೆಗೆ ಮಾರ್ಗದರ್ಶನ ಮಾಡುತ್ತಾನೆ. ಇನ್ನು ಸತ್ಯದೆಡೆಗೆ ಮುನ್ನಡೆಸುವವನು ಅನುಸರಿಸ್ಪಡಲು ಯೋಗ್ಯನೇ ಅಥವಾ ಮಾರ್ಗದರ್ಶನ ಮಾಡದ ವಿನಃ ಮಾರ್ಗ ಪಡೆಯದವನೇ? ಹಾಗಿದ್ದೂ ನಿಮಗೇನಾಗಿಬಿಟ್ಟಿದೆ? ನೀವು ಎಂತಹ ತೀರ್ಮಾನ ಕೈಗೊಳ್ಳುತ್ತಿರುವಿರಿ?
ಯೂನುಸ್ಕುರಾನ್ ಸೂಚಿ
109ಆಯತ್
MeccanRevelation
33ಆಯತ್

ಅನುವಾದ — ಯೂನುಸ್ 33

ಸೂರಾ ಯೂನುಸ್ ಆಯತ್ 33 - ಓದಿ, ಆಲಿಸಿ, ಅನುವಾದ, ಕನ್ನಡ : ಇದೇ ಪ್ರಕಾರ ಕರ್ಮಭ್ರಷ್ಟರು ವಿಶ್ವಾಸವಿರಿಸಲಾರರು ಎಂಬ ನಿಮ್ಮ ಪ್ರಭುವಿನ ಮಾತು ಸತ್ಯವಾಗಿಬಿಟ್ಟಿದೆ.

ಸೂರಾ ಆಯತ್ 33/109 — ಸೂರಾ ಯೂನುಸ್ يونس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯೂನುಸ್ ಆಲಿಸಿ, ಸೂರಾ ಯೂನುಸ್ ಅನುವಾದ, ಸೂರಾ ಯೂನುಸ್ mp3, ಸೂರಾ ಯೂನುಸ್ pdf. ಆಯತ್ 31–35. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers