ಅಲ್-ಬಕರಾ · 224/286
ಅನುವಾದ ಉಚ್ಚಾರಣೆ — ಸೂರಾ ಅಲ್-ಬಕರಾ
وَلَا تَجْعَلُوا اللَّهَ عُرْضَةً لِّأَيْمَانِكُمْ أَن تَبَرُّوا وَتَتَّقُوا وَتُصْلِحُوا بَيْنَ النَّاسِ ۗ وَاللَّهُ سَمِيعٌ عَلِيمٌ ۝٢٢٤
Wa laa taj`alul laaha `urdatal li aymaanikum an tabarroo wa tattaqoo wa tuslihoo bainan naas; wallaahu Samee`un `Aleem
📖 ಕನ್ನಡ ಅರ್ಥ
ಪುಣ್ಯಕಾರ್ಯ ಮಾಡುವುದು, ಭಯ ಭಕ್ತಿ ಹೊಂದುವುದು ಹಾಗೂ ಜನರ ನಡುವೆ ಸುಧಾರಣೆ ಮಾಡುವುದನ್ನು ತೊರೆಯಲಿಕ್ಕಾಗಿ ನೀವು ಮಾಡುವ ಶಪಥಗಳಿಗೆ ಅಲ್ಲಾಹನ ನಾಮವನ್ನು ಉಪಯೋಗಿಸಬೇಡಿರಿ. ಅಲ್ಲಾಹನು ಸರ್ವವನ್ನಾಲಿಸುವವನೂ, ಸರ್ವಜ್ಞಾನಿಯೂ ಆಗಿದ್ದಾನೆ.

🎧 ಆಲಿಸಿ


📜 ಆಯತ್ 222-226 — ಸೂರಾ ಅಲ್-ಬಕರಾ

222وَيَسْأَلُونَكَ عَنِ الْمَحِيضِ ۖ قُلْ هُوَ أَذًى فَاعْتَزِلُوا النِّسَاءَ فِي الْمَحِيضِ ۖ وَلَا تَقْرَبُوهُنَّ حَتَّىٰ يَطْهُرْنَ ۖ فَإِذَا تَطَهَّرْنَ فَأْتُوهُنَّ مِنْ حَيْثُ أَمَرَكُمُ اللَّهُ ۚ إِنَّ اللَّهَ يُحِبُّ التَّوَّابِينَ وَيُحِبُّ الْمُتَطَهِّرِينَ
(ಓ ಪೈಗಂಬರರೇ) ಜನರು ಆರ್ತವದ (ಋತುಸ್ರಾವದ) ಕುರಿತು ನಿಮ್ಮೊಡನೆ ಕೇಳುತ್ತಾರೆ. ಹೇಳಿರಿ ಅದೊಂದು ಮಾಲಿನ್ಯತೆಯಾಗಿದೆ. ಆದ್ದರಿಂದ ಆರ್ತವಕಾಲದಲ್ಲಿ ಸ್ರೀಯರಿಂದ ದೂರವಿರಿ ಮತ್ತು ಅವರು ಶುದ್ಧರಾಗುವವರೆಗೂ ಅವರನ್ನು ಸಮೀಪಿಸಬೇಡಿರಿ. ಇನ್ನು ಅವರು ಶುದ್ಧರಾದರೆ ಅಲ್ಲಾಹು ನಿಮಗೆ ಅನುಮತಿಸಿದ ಕಡೆಯಿಂದ ಅವರ ಬಳಿಗೆ ಹೋಗಿರಿ. ಅಲ್ಲಾಹು ಪಶ್ಚಾತ್ತಾಪ ಹೊಂದುವವರನ್ನೂ, ಶುದ್ಧರಾಗಿರುವವರನ್ನೂ ಇಷ್ಟ ಪಡುತ್ತಾನೆ.
223نِسَاؤُكُمْ حَرْثٌ لَّكُمْ فَأْتُوا حَرْثَكُمْ أَنَّىٰ شِئْتُمْ ۖ وَقَدِّمُوا لِأَنفُسِكُمْ ۚ وَاتَّقُوا اللَّهَ وَاعْلَمُوا أَنَّكُم مُّلَاقُوهُ ۗ وَبَشِّرِ الْمُؤْمِنِينَ
ನಿಮ್ಮ ಪತ್ನಿಯರುನಿಮಗೆ ಕೃಷಿಯಾಗಿದ್ದಾರೆ. ಆದ್ದರಿಂದ ನಿಮ್ಮ ಕೃಷಿಗೆ ನೀವು ಇಚ್ಛಿಸುವಂತೆ ಹೋಗಿರಿ ಮತ್ತು ನೀವು ಸ್ವತಃ ನಿಮಗಾಗಿ (ಸತ್ಕರ್ಮವನ್ನು) ಮುಂಗಡವಾಗಿ ಕಳುಹಿಸಿರಿ ಮತ್ತು ಅಲ್ಲಾಹನನ್ನು ಭಯಪಡುತ್ತಿರಿ ಹಾಗೂ ನೀವು ಅವನನ್ನು ಭೇಟಿಯಾಗಲಿರುವಿರೆಂದು ಅರಿತುಕೊಳ್ಳಿರಿ ಮತ್ತು ಓ ಪೈಗಂಬರÀರೇ ನೀವು ಸತ್ಯವಿಶ್ವಾಸಿಗಳಿಗೆ ಸುವಾರ್ತೆ ನೀಡಿರಿ.
224وَلَا تَجْعَلُوا اللَّهَ عُرْضَةً لِّأَيْمَانِكُمْ أَن تَبَرُّوا وَتَتَّقُوا وَتُصْلِحُوا بَيْنَ النَّاسِ ۗ وَاللَّهُ سَمِيعٌ عَلِيمٌ
ಪುಣ್ಯಕಾರ್ಯ ಮಾಡುವುದು, ಭಯ ಭಕ್ತಿ ಹೊಂದುವುದು ಹಾಗೂ ಜನರ ನಡುವೆ ಸುಧಾರಣೆ ಮಾಡುವುದನ್ನು ತೊರೆಯಲಿಕ್ಕಾಗಿ ನೀವು ಮಾಡುವ ಶಪಥಗಳಿಗೆ ಅಲ್ಲಾಹನ ನಾಮವನ್ನು ಉಪಯೋಗಿಸಬೇಡಿರಿ. ಅಲ್ಲಾಹನು ಸರ್ವವನ್ನಾಲಿಸುವವನೂ, ಸರ್ವಜ್ಞಾನಿಯೂ ಆಗಿದ್ದಾನೆ.
225لَّا يُؤَاخِذُكُمُ اللَّهُ بِاللَّغْوِ فِي أَيْمَانِكُمْ وَلَٰكِن يُؤَاخِذُكُم بِمَا كَسَبَتْ قُلُوبُكُمْ ۗ وَاللَّهُ غَفُورٌ حَلِيمٌ
ಅನೈಚ್ಛಿಕ (ಅರ್ಥಶೂನ್ಯ) ಶಪಥಗಳ ನಿಮಿತ್ತ ಅಲ್ಲಾಹನು ನಿಮ್ಮನ್ನು ವಿಚಾರಿಸುವುದಿಲ್ಲ. ಆದರೆ ಅವನು ಉದ್ದೇಶಪೂರ್ವಕ ಶಪಥಗಳ ನಿಮಿತ್ತ ನಿಮ್ಮ ವಿಚಾರಣೆ ನಡೆಸುವನು ಮತ್ತು ಅಲ್ಲಾಹನು ಕ್ಷಮಾಶೀಲನೂ, ವಿವೇಕಪೂರ್ಣನೂ ಆಗಿರುವನು.
226لِّلَّذِينَ يُؤْلُونَ مِن نِّسَائِهِمْ تَرَبُّصُ أَرْبَعَةِ أَشْهُرٍ ۖ فَإِن فَاءُوا فَإِنَّ اللَّهَ غَفُورٌ رَّحِيمٌ
ತಮ್ಮ ಪತ್ನಿಯರೊಂದಿಗೆ (ಸಂಭೋಗ ಮಾಡುವುದಿಲ್ಲವೆಂಬ) ಪ್ರತಿಜ್ಞೆ ಮಾಡುವವರ ಪಾಲಿಗೆ ನಾಲ್ಕು ತಿಂಗಳ ಕಾಲಾವಧಿಯಿರುವುದು. ಇನ್ನು ಅವರು ಮರಳಿ ಬಂದರೆ ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುವನು.
ಅಲ್-ಬಕರಾಕುರಾನ್ ಸೂಚಿ
286ಆಯತ್
MedinanRevelation
224ಆಯತ್

ಅನುವಾದ — ಅಲ್-ಬಕರಾ 224

ಸೂರಾ ಅಲ್-ಬಕರಾ ಆಯತ್ 224 - ಓದಿ, ಆಲಿಸಿ, ಅನುವಾದ, ಕನ್ನಡ : ಪುಣ್ಯಕಾರ್ಯ ಮಾಡುವುದು, ಭಯ ಭಕ್ತಿ ಹೊಂದುವುದು ಹಾಗೂ ಜನರ ನಡುವೆ ಸುಧಾರಣೆ ಮಾಡುವುದನ್ನು…

ಸೂರಾ ಆಯತ್ 224/286 — ಸೂರಾ ಅಲ್-ಬಕರಾ البقرة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬಕರಾ ಆಲಿಸಿ, ಸೂರಾ ಅಲ್-ಬಕರಾ ಅನುವಾದ, ಸೂರಾ ಅಲ್-ಬಕರಾ mp3, ಸೂರಾ ಅಲ್-ಬಕರಾ pdf. ಆಯತ್ 222–226. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers