ಅನ್-ನೂರ್ · 42/64
ಅನುವಾದ ಉಚ್ಚಾರಣೆ — ಸೂರಾ ಅನ್-ನೂರ್
وَلِلَّهِ مُلْكُ السَّمَاوَاتِ وَالْأَرْضِ ۖ وَإِلَى اللَّهِ الْمَصِيرُ ۝٤٢
Wa lillaahi mulkus samaawaati wal ardi wa ilal laahil maseer
📖 ಕನ್ನಡ ಅರ್ಥ
ಆಕಾಶಗಳ ಮತ್ತು ಭೂಮಿಯ ಅಧಿಪತ್ಯವು ಅಲ್ಲಾಹನದ್ದಾಗಿದೆ. ಮತ್ತು ಅಲ್ಲಾಹನೆಡೆಗೇ ಮರಳುವಿಕೆಯಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 40-44 — ಸೂರಾ ಅನ್-ನೂರ್

40أَوْ كَظُلُمَاتٍ فِي بَحْرٍ لُّجِّيٍّ يَغْشَاهُ مَوْجٌ مِّن فَوْقِهِ مَوْجٌ مِّن فَوْقِهِ سَحَابٌ ۚ ظُلُمَاتٌ بَعْضُهَا فَوْقَ بَعْضٍ إِذَا أَخْرَجَ يَدَهُ لَمْ يَكَدْ يَرَاهَا ۗ وَمَن لَّمْ يَجْعَلِ اللَّهُ لَهُ نُورًا فَمَا لَهُ مِن نُّورٍ
ಅಥವಾ (ಅವರ ಕರ್ಮಗಳು) ಆಳವಾದ ಸಾಗರದ ಅಂಧಕಾರಗಳAತಿದೆ. ಅದರ ಮೇಲೆ ಅಲೆಯು ಆವರಿಸಿದೆ. ಅದರ ಮೇಲೆ ಇನ್ನೊಂದು ಅಲೆಯಿದ್ದು ಅದರ ಮೇಲೆ ಮೋಡವು ಕವಿದಿದೆ. ಅಂಧಕಾರದ ಮೇಲೆ ಅಂಧಕಾರ ಕವಿದಿದೆ. ಅವನು ತನ್ನ ಕೈಯನ್ನು ಚಾಚಿದರೂ ಅದನ್ನವನು ಕಾಣಲಾರ ಯಾರಿಗೆ ಅಲ್ಲಾಹನು ಪ್ರಕಾಶವನ್ನು ನೀಡುವುದಿಲ್ಲವೋ ಅವನಿಗೆ ಯಾವ ಪ್ರಕಾಶವಿರುವುದಿಲ್ಲ.
41أَلَمْ تَرَ أَنَّ اللَّهَ يُسَبِّحُ لَهُ مَن فِي السَّمَاوَاتِ وَالْأَرْضِ وَالطَّيْرُ صَافَّاتٍ ۖ كُلٌّ قَدْ عَلِمَ صَلَاتَهُ وَتَسْبِيحَهُ ۗ وَاللَّهُ عَلِيمٌ بِمَا يَفْعَلُونَ
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲವೂ ಮತ್ತು ರೆಕ್ಕೆಗಳನ್ನು ಹರಡಿಸಿಕೊಂಡು ಹಾರುತ್ತಿರುವ ಹಕ್ಕಿಗಳೂ ಅಲ್ಲಾಹನ ಪಾವಿತ್ರö್ಯವನ್ನು ಕೊಂಡಾಡುತ್ತಿರುವುದನ್ನು ನೀವು ಕಾಣಲಿಲ್ಲವೇ?ಪ್ರತಿಯೊಂದೂ ತನ್ನ ಪ್ರಾರ್ಥನೆ ಹಾಗೂ ಕೀರ್ತನೆಯನ್ನು ಅರಿತಿದೆ. ಅಲ್ಲಾಹನು ಅವರು ಮಾಡುತ್ತಿರುವುದರ ಕುರಿತು ಚೆನ್ನಾಗಿ ಬಲ್ಲನು.
42وَلِلَّهِ مُلْكُ السَّمَاوَاتِ وَالْأَرْضِ ۖ وَإِلَى اللَّهِ الْمَصِيرُ
ಆಕಾಶಗಳ ಮತ್ತು ಭೂಮಿಯ ಅಧಿಪತ್ಯವು ಅಲ್ಲಾಹನದ್ದಾಗಿದೆ. ಮತ್ತು ಅಲ್ಲಾಹನೆಡೆಗೇ ಮರಳುವಿಕೆಯಿದೆ.
43أَلَمْ تَرَ أَنَّ اللَّهَ يُزْجِي سَحَابًا ثُمَّ يُؤَلِّفُ بَيْنَهُ ثُمَّ يَجْعَلُهُ رُكَامًا فَتَرَى الْوَدْقَ يَخْرُجُ مِنْ خِلَالِهِ وَيُنَزِّلُ مِنَ السَّمَاءِ مِن جِبَالٍ فِيهَا مِن بَرَدٍ فَيُصِيبُ بِهِ مَن يَشَاءُ وَيَصْرِفُهُ عَن مَّن يَشَاءُ ۖ يَكَادُ سَنَا بَرْقِهِ يَذْهَبُ بِالْأَبْصَارِ
ಅಲ್ಲಾಹನು ಮೋಡಗಳನ್ನು ಮೆಲ್ಲಮೆಲ್ಲನೆ ಚಲಾಯಿಸುವುದನ್ನು ನೀವು ನೋಡಲಿಲ್ಲವೇ? ಆನಂತರ ಅವುಗಳನ್ನು ಒಟ್ಟುಗೂಡಿಸುತ್ತಾನೆ. ಆ ಬಳಿಕ ಅವುಗಳನ್ನು ಒಂದರ ಮೇಲೋಂದರAತೆ ಸೇರಿಸಿಡುತ್ತಾನೆ. ಅನಂತರ ನೀವು ಅದರೆಡೆಯಿಂದ ಮಳೆ ಸುರಿಯುವುದನ್ನು ಕಾಣುತ್ತೀರಿ. ಅವನೇ ಆಕಾಶದಿಂದ ಆಲಿಕಲ್ಲುಗಳ ಬೆಟ್ಟದಿಂದ ಆಲಿಕಲ್ಲುಗಳನ್ನು ಸುರಿಸಿ ಅದರ ಮೂಲಕ ತಾನಿಚ್ಛಿಸಿದವರಿಗೆ ಹಾನಿಯನ್ನುಂಟು ಮಾಡುತ್ತಾನೆ ಮತ್ತು ತಾನಿಚ್ಛಿಸಿದವರಿಂದ ಹಾನಿಯನ್ನು ದೂರ ಸರಿಸಿ ಬಿಡುತ್ತಾನೆ. ಮೋಡಗಳಿಂದ ಹೊರಬರುವ ಮಿಂಚಿನ ಹೊಳಪು ದೃಷ್ಟಿಗಳನ್ನು ಕೊರೈಸುವಂತಿದೆ.
44يُقَلِّبُ اللَّهُ اللَّيْلَ وَالنَّهَارَ ۚ إِنَّ فِي ذَٰلِكَ لَعِبْرَةً لِّأُولِي الْأَبْصَارِ
ಅಲ್ಲಾಹನೇ ರಾತ್ರಿ, ಹಗಲನ್ನು ಬದಲಾಯಿಸುತ್ತಿರುತ್ತಾನೆ. ನಿಶ್ಚಯವಾಗಿಯೂ ಇದರಲ್ಲಿ ದೃಷ್ಟಿಯುಳ್ಳವರಿಗೆ ಮಹಾ ಪಾಠವಿದೆ.
ಅನ್-ನೂರ್ಕುರಾನ್ ಸೂಚಿ
64ಆಯತ್
MedinanRevelation
42ಆಯತ್

ಅನುವಾದ — ಅನ್-ನೂರ್ 42

ಸೂರಾ ಅನ್-ನೂರ್ ಆಯತ್ 42 - ಓದಿ, ಆಲಿಸಿ, ಅನುವಾದ, ಕನ್ನಡ : ಆಕಾಶಗಳ ಮತ್ತು ಭೂಮಿಯ ಅಧಿಪತ್ಯವು ಅಲ್ಲಾಹನದ್ದಾಗಿದೆ. ಮತ್ತು ಅಲ್ಲಾಹನೆಡೆಗೇ ಮರಳುವಿಕೆಯಿದೆ.

ಸೂರಾ ಆಯತ್ 42/64 — ಸೂರಾ ಅನ್-ನೂರ್ النور (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನೂರ್ ಆಲಿಸಿ, ಸೂರಾ ಅನ್-ನೂರ್ ಅನುವಾದ, ಸೂರಾ ಅನ್-ನೂರ್ mp3, ಸೂರಾ ಅನ್-ನೂರ್ pdf. ಆಯತ್ 40–44. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Thursday, October 1, 2026

Don't forget us in your sincere prayers