ಲುಕ್ಮಾನ್ · 19/34
ಅನುವಾದ ಉಚ್ಚಾರಣೆ — ಸೂರಾ ಲುಕ್ಮಾನ್
وَاقْصِدْ فِي مَشْيِكَ وَاغْضُضْ مِن صَوْتِكَ ۚ إِنَّ أَنكَرَ الْأَصْوَاتِ لَصَوْتُ الْحَمِيرِ ۝١٩
Waqsid fee mashyika waghdud min sawtik; inna ankaral aswaati lasawtul hameer
📖 ಕನ್ನಡ ಅರ್ಥ
ನಿನ್ನ ನಡೆಯಲ್ಲಿ ಮಿತಿಯನ್ನು ಪಾಲಿಸು ಮತ್ತು ನಿನ್ನ ಸ್ವರವನ್ನು ತಗ್ಗಿಸು. ನಿಜವಾಗಿಯೂ ಸ್ವರಗಳಲ್ಲಿ ಅತ್ಯಂತಕೆಟ್ಟ ಸ್ವರವು ಕತ್ತೆಯ ಸ್ವರವಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 17-21 — ಸೂರಾ ಲುಕ್ಮಾನ್

17يَا بُنَيَّ أَقِمِ الصَّلَاةَ وَأْمُرْ بِالْمَعْرُوفِ وَانْهَ عَنِ الْمُنكَرِ وَاصْبِرْ عَلَىٰ مَا أَصَابَكَ ۖ إِنَّ ذَٰلِكَ مِنْ عَزْمِ الْأُمُورِ
ಓ ನನ್ನ ಪ್ರಿಯ ಮಗನೇ, ನಮಾಝ್ ಸಂಸ್ಥಾಪಿಸು ಮತ್ತು ಒಳಿತಿನ ಆದೇಶ ನೀಡುತ್ತಿರು. ದುಷ್ಕೃತ್ಯಗಳಿಂದ ತಡೆಯುತ್ತಿರು ಮತ್ತು ನಿನಗೆ ಏನೇ ಆಪತ್ತು ಸಂಭವಿಸಿದರೂ ಅದರ ಮೇಲೆ ಸಹನೆವಹಿಸು, ನಿಸ್ಸಂಶಯವಾಗಿ ಇದು ದೃಢ, ಸಾಹಸದ ಕೆಲಸವಾಗಿದೆ.
18وَلَا تُصَعِّرْ خَدَّكَ لِلنَّاسِ وَلَا تَمْشِ فِي الْأَرْضِ مَرَحًا ۖ إِنَّ اللَّهَ لَا يُحِبُّ كُلَّ مُخْتَالٍ فَخُورٍ
ದರ್ಪದಿಂದ ನೀನು ಜನರಿಂದ ನಿನ್ನ ಮುಖವನ್ನುತಿರುಗಿಸದಿರು ಮತ್ತು ಭೂಮಿಯಲ್ಲಿ ಅಹಂಕಾರದಿAದ ನಡೆಯದಿರು. ನಿಜವಾಗಿಯು ಅಹಂಕಾರಿಯಾದ ದುರಭಿಮಾನಿಯನ್ನು ಅಲ್ಲಾಹನು ಮೆಚ್ಚುವುದಿಲ್ಲ.
19وَاقْصِدْ فِي مَشْيِكَ وَاغْضُضْ مِن صَوْتِكَ ۚ إِنَّ أَنكَرَ الْأَصْوَاتِ لَصَوْتُ الْحَمِيرِ
ನಿನ್ನ ನಡೆಯಲ್ಲಿ ಮಿತಿಯನ್ನು ಪಾಲಿಸು ಮತ್ತು ನಿನ್ನ ಸ್ವರವನ್ನು ತಗ್ಗಿಸು. ನಿಜವಾಗಿಯೂ ಸ್ವರಗಳಲ್ಲಿ ಅತ್ಯಂತಕೆಟ್ಟ ಸ್ವರವು ಕತ್ತೆಯ ಸ್ವರವಾಗಿದೆ.
20أَلَمْ تَرَوْا أَنَّ اللَّهَ سَخَّرَ لَكُم مَّا فِي السَّمَاوَاتِ وَمَا فِي الْأَرْضِ وَأَسْبَغَ عَلَيْكُمْ نِعَمَهُ ظَاهِرَةً وَبَاطِنَةً ۗ وَمِنَ النَّاسِ مَن يُجَادِلُ فِي اللَّهِ بِغَيْرِ عِلْمٍ وَلَا هُدًى وَلَا كِتَابٍ مُّنِيرٍ
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳನ್ನು ಅಲ್ಲಾಹನು ನಿಮಗೆ ಅಧೀನಗೊಳಿಸಿರುವುದನ್ನು ನೀವು ನೋಡುತ್ತಿಲ್ಲವೇ? ಮತ್ತು ಅವನು ನಿಮಗೆ ತನ್ನ ಗೋಚರ ಹಾಗೂ ಅಗೋಚರವಾದ ತನ್ನ ಅನುಗ್ರಹಗಳನ್ನು ಸಂಪೂರ್ಣವಾಗಿ ನೀಡಿರುತ್ತಾನೆ. ಆದರೆ ಕೆಲವು ಜನರು ಅಲ್ಲಾಹನ ವಿಚಾರದಲ್ಲಿ ಯಾವುದೇ ಜ್ಞಾನ, ಮಾರ್ಗದರ್ಶನ ಮತ್ತು ಪ್ರಕಾಶಮಯ ಗ್ರಂಥವಿಲ್ಲದೆಯೇ ಜಗಳವಾಡುತ್ತಾರೆ.
21وَإِذَا قِيلَ لَهُمُ اتَّبِعُوا مَا أَنزَلَ اللَّهُ قَالُوا بَلْ نَتَّبِعُ مَا وَجَدْنَا عَلَيْهِ آبَاءَنَا ۚ أَوَلَوْ كَانَ الشَّيْطَانُ يَدْعُوهُمْ إِلَىٰ عَذَابِ السَّعِيرِ
ಮತ್ತು ಅವರೊಂದಿಗೆ “ಅಲ್ಲಾಹನು ಅವತೀರ್ಣಗೊಳಿಸಿರುವುದನ್ನು ಅನುಸರಿಸಿರಿ” ಎಂದು ಹೇಳಲಾದರೆ ಅವರು ಹೇಳುತ್ತಾರೆ: ಇಲ್ಲ, ನಮ್ಮ ಪೂರ್ವಿಕರನ್ನು ಯಾವ ಮಾರ್ಗದಲ್ಲಿದ್ದುದಾಗಿ ಕಂಡಿದ್ದೇವೆಯೋ ಅದನ್ನೇ ನಾವು ಅನುಸರಿಸುತ್ತೇವೆ ಶೈತಾನನು ಅವರನ್ನು (ಅವರ ಪೂರ್ವಿಕರನ್ನು) ನರಕದ ಯಾತನೆಯೆಡೆಗೆ ಕರೆಯುತ್ತಿದ್ದರೂ ಸರಿಯೇ?
ಲುಕ್ಮಾನ್ಕುರಾನ್ ಸೂಚಿ
34ಆಯತ್
MeccanRevelation
19ಆಯತ್

ಅನುವಾದ — ಲುಕ್ಮಾನ್ 19

ಸೂರಾ ಲುಕ್ಮಾನ್ ಆಯತ್ 19 - ಓದಿ, ಆಲಿಸಿ, ಅನುವಾದ, ಕನ್ನಡ : ನಿನ್ನ ನಡೆಯಲ್ಲಿ ಮಿತಿಯನ್ನು ಪಾಲಿಸು ಮತ್ತು ನಿನ್ನ ಸ್ವರವನ್ನು ತಗ್ಗಿಸು. ನಿಜವಾಗಿಯೂ ಸ್ವರಗಳಲ್ಲಿ…

ಸೂರಾ ಆಯತ್ 19/34 — ಸೂರಾ ಲುಕ್ಮಾನ್ لقمان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಲುಕ್ಮಾನ್ ಆಲಿಸಿ, ಸೂರಾ ಲುಕ್ಮಾನ್ ಅನುವಾದ, ಸೂರಾ ಲುಕ್ಮಾನ್ mp3, ಸೂರಾ ಲುಕ್ಮಾನ್ pdf. ಆಯತ್ 17–21. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers