ಅಲ್-ಅನ್ಆಮ್ · 81/165
ಅನುವಾದ ಉಚ್ಚಾರಣೆ — ಸೂರಾ ಅಲ್-ಅನ್ಆಮ್
وَكَيْفَ أَخَافُ مَا أَشْرَكْتُمْ وَلَا تَخَافُونَ أَنَّكُمْ أَشْرَكْتُم بِاللَّهِ مَا لَمْ يُنَزِّلْ بِهِ عَلَيْكُمْ سُلْطَانًا ۚ فَأَيُّ الْفَرِيقَيْنِ أَحَقُّ بِالْأَمْنِ ۖ إِن كُنتُمْ تَعْلَمُونَ ۝٨١
Wa kaifa akhaafu maaa ashraktum wa laa takhaafoona annakum ashraktum billaahi maa lam yunazzil bihee `alaikum sultaanaa; fa aiyul fareeqaini ahaqqu bil amni in kuntum ta`lamoon
📖 ಕನ್ನಡ ಅರ್ಥ
ಮತ್ತು ನೀವು ಸಹಭಾಗಿಗಳನ್ನಾಗಿ ನಿಶ್ಚಯಿಸಿರುವ ವಸ್ತುಗಳನ್ನು ನಾನು ಹೇಗೆ ಭಯಪಡಲಿ ? ವಸ್ತುತಃ ನೀವು ಅಲ್ಲಾಹನು ನಿಮ್ಮ ಮೇಲೆ ಯಾವುದೇ ಪುರಾವೆಯನ್ನು ಇಳಿಸದ ವಸ್ತುಗಳನ್ನು ಅವನೊಂದಿಗೆ ಸಹಭಾಗಿಯನ್ನಾಗಿ ಮಾಡುವುದರ ಬಗ್ಗೆ ಭಯಪಡುವುದಿಲ್ಲ. ಹಾಗಾದರೆ ಉಭಯ ಪಕ್ಷಗಳಲ್ಲಿ ಸುರಕ್ಷತೆಗೆ ಹೆಚ್ಚು ಅರ್ಹರು ಯಾರು ? ನೀವು ಅರಿಯುವವರಾಗಿದ್ದರೆ!

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 79-83 — ಸೂರಾ ಅಲ್-ಅನ್ಆಮ್

79إِنِّي وَجَّهْتُ وَجْهِيَ لِلَّذِي فَطَرَ السَّمَاوَاتِ وَالْأَرْضَ حَنِيفًا ۖ وَمَا أَنَا مِنَ الْمُشْرِكِينَ
ನಾನು ಮಿಥ್ಯವನ್ನು ತೊರೆದು ಸತ್ಯದಲ್ಲಿ ನೆಲೆ ನಿಂತು ಆಕಾಶಗಳನ್ನೂ, ಭೂಮಿಯನ್ನೂ ಸೃಷ್ಟಿಸಿರುವವನ ಕಡೆಗೆ ನನ್ನ ಮುಖವನ್ನು ತಿರುಗಿಸಿದ್ದೇನೆ ಮತ್ತು ನಾನು ಬಹುದೇವ ವಿಶ್ವಾಸಿಗಳಲ್ಲಿ ಸೇರಿದವನಲ್ಲ.
80وَحَاجَّهُ قَوْمُهُ ۚ قَالَ أَتُحَاجُّونِّي فِي اللَّهِ وَقَدْ هَدَانِ ۚ وَلَا أَخَافُ مَا تُشْرِكُونَ بِهِ إِلَّا أَن يَشَاءَ رَبِّي شَيْئًا ۗ وَسِعَ رَبِّي كُلَّ شَيْءٍ عِلْمًا ۗ أَفَلَا تَتَذَكَّرُونَ
ಅವರ ಜನತೆಯು ಅವರೊಂದಿಗೆ ತರ್ಕಿಸತೊಡಗಿತು. ಅವರು ಹೇಳಿದರು: ನೀವು ಅಲ್ಲಾಹನ ವಿಷಯದಲ್ಲಿ ನನ್ನೊಂದಿಗೆ ತರ್ಕಿಸುತ್ತಿರುವಿರಾ? ವಸ್ತುತಃ ಅವನು ನನಗೆ ಸನ್ಮಾರ್ಗವನ್ನು ತೋರಿಸಿ ಕೊಟ್ಟಿದ್ದಾನೆ ಮತ್ತು ನೀವು ಅಲ್ಲಾಹನೊಂದಿಗೆ ಸಹಭಾಗಿಗಳನ್ನಾಗಿ ನಿಶ್ಚಯಿಸಿರುವ ವಸ್ತುಗಳನ್ನು ನಾನು ಭಯಪಡುವುದಿಲ್ಲ. ಆದರೆ ನನ್ನ ಪ್ರಭು ಏನನ್ನಾದರೂ (ಹಾನಿಯನ್ನು) ಇಚ್ಛಿಸಿದರೆ ಹೊರತು. ನನ್ನ ಪ್ರಭುವು ತನ್ನ ಜ್ಞಾನದಿಂದ ಎಲ್ಲಾ ವಸ್ತುಗಳನ್ನು ಆವರಿಸಿದ್ದಾನೆ. ಹಾಗಿದ್ದೂ ನೀವು ಚಿಂತಿಸುವುದಿಲ್ಲವೇ?.
81وَكَيْفَ أَخَافُ مَا أَشْرَكْتُمْ وَلَا تَخَافُونَ أَنَّكُمْ أَشْرَكْتُم بِاللَّهِ مَا لَمْ يُنَزِّلْ بِهِ عَلَيْكُمْ سُلْطَانًا ۚ فَأَيُّ الْفَرِيقَيْنِ أَحَقُّ بِالْأَمْنِ ۖ إِن كُنتُمْ تَعْلَمُونَ
ಮತ್ತು ನೀವು ಸಹಭಾಗಿಗಳನ್ನಾಗಿ ನಿಶ್ಚಯಿಸಿರುವ ವಸ್ತುಗಳನ್ನು ನಾನು ಹೇಗೆ ಭಯಪಡಲಿ ? ವಸ್ತುತಃ ನೀವು ಅಲ್ಲಾಹನು ನಿಮ್ಮ ಮೇಲೆ ಯಾವುದೇ ಪುರಾವೆಯನ್ನು ಇಳಿಸದ ವಸ್ತುಗಳನ್ನು ಅವನೊಂದಿಗೆ ಸಹಭಾಗಿಯನ್ನಾಗಿ ಮಾಡುವುದರ ಬಗ್ಗೆ ಭಯಪಡುವುದಿಲ್ಲ. ಹಾಗಾದರೆ ಉಭಯ ಪಕ್ಷಗಳಲ್ಲಿ ಸುರಕ್ಷತೆಗೆ ಹೆಚ್ಚು ಅರ್ಹರು ಯಾರು ? ನೀವು ಅರಿಯುವವರಾಗಿದ್ದರೆ!
82الَّذِينَ آمَنُوا وَلَمْ يَلْبِسُوا إِيمَانَهُم بِظُلْمٍ أُولَٰئِكَ لَهُمُ الْأَمْنُ وَهُم مُّهْتَدُونَ
ಸತ್ಯವಿಶ್ವಾಸವಿಟ್ಟು ಮತ್ತು ತಮ್ಮ ವಿಶ್ವಾಸದಲ್ಲಿ ದೇವ ಸಹಭಾಗಿತ್ವವನ್ನು ಬೆರೆಸದವರಿಗೆ ಸುರಕ್ಷತೆಯಿದೆ. ಮತ್ತು ಅವರೇ ಸನ್ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ.
83وَتِلْكَ حُجَّتُنَا آتَيْنَاهَا إِبْرَاهِيمَ عَلَىٰ قَوْمِهِ ۚ نَرْفَعُ دَرَجَاتٍ مَّن نَّشَاءُ ۗ إِنَّ رَبَّكَ حَكِيمٌ عَلِيمٌ
ಇದು ನಾವು ಇಬ್ರಾಹೀಮರಿಗೆ ಅವರ ಜನತೆಗೆ ವಿರುದ್ಧವಾಗಿ ನೀಡಿದ (ಏಕದೇವತ್ವದ) ನಮ್ಮ ಪುರಾವೆಯಾಗಿದೆ. ನಾವು ಇಚ್ಛಿಸುವವರಿಗೆ ಪದವಿಗಳನ್ನು ಉನ್ನತಗೊಳಿಸುತ್ತೇವೆ. ನಿಸ್ಸಂಶಯವಾಗಿಯು ನಿಮ್ಮ ಪ್ರಭುವು ಯುಕ್ತಿವಂತನೂ, ಸರ್ವಜ್ಞಾನಿಯೂ ಆಗಿದ್ದಾನೆ.
ಅಲ್-ಅನ್ಆಮ್ಕುರಾನ್ ಸೂಚಿ
165ಆಯತ್
MeccanRevelation
81ಆಯತ್

ಅನುವಾದ — ಅಲ್-ಅನ್ಆಮ್ 81

ಸೂರಾ ಅಲ್-ಅನ್ಆಮ್ ಆಯತ್ 81 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನೀವು ಸಹಭಾಗಿಗಳನ್ನಾಗಿ ನಿಶ್ಚಯಿಸಿರುವ ವಸ್ತುಗಳನ್ನು ನಾನು ಹೇಗೆ ಭಯಪಡಲಿ ? ವಸ್ತುತಃ…

ಸೂರಾ ಆಯತ್ 81/165 — ಸೂರಾ ಅಲ್-ಅನ್ಆಮ್ الأنعام (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅನ್ಆಮ್ ಆಲಿಸಿ, ಸೂರಾ ಅಲ್-ಅನ್ಆಮ್ ಅನುವಾದ, ಸೂರಾ ಅಲ್-ಅನ್ಆಮ್ mp3, ಸೂರಾ ಅಲ್-ಅನ್ಆಮ್ pdf. ಆಯತ್ 79–83. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers