ಅಲ್-ಅನ್ಆಮ್ · 82/165
ಅನುವಾದ ಉಚ್ಚಾರಣೆ — ಸೂರಾ ಅಲ್-ಅನ್ಆಮ್
الَّذِينَ آمَنُوا وَلَمْ يَلْبِسُوا إِيمَانَهُم بِظُلْمٍ أُولَٰئِكَ لَهُمُ الْأَمْنُ وَهُم مُّهْتَدُونَ ۝٨٢
Allazeena aamanoo wa lam yalbisooo eemaanahum bizulmin ulaaa`ika lahumul amnu wa hum muhtadoon
📖 ಕನ್ನಡ ಅರ್ಥ
ಸತ್ಯವಿಶ್ವಾಸವಿಟ್ಟು ಮತ್ತು ತಮ್ಮ ವಿಶ್ವಾಸದಲ್ಲಿ ದೇವ ಸಹಭಾಗಿತ್ವವನ್ನು ಬೆರೆಸದವರಿಗೆ ಸುರಕ್ಷತೆಯಿದೆ. ಮತ್ತು ಅವರೇ ಸನ್ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 80-84 — ಸೂರಾ ಅಲ್-ಅನ್ಆಮ್

80وَحَاجَّهُ قَوْمُهُ ۚ قَالَ أَتُحَاجُّونِّي فِي اللَّهِ وَقَدْ هَدَانِ ۚ وَلَا أَخَافُ مَا تُشْرِكُونَ بِهِ إِلَّا أَن يَشَاءَ رَبِّي شَيْئًا ۗ وَسِعَ رَبِّي كُلَّ شَيْءٍ عِلْمًا ۗ أَفَلَا تَتَذَكَّرُونَ
ಅವರ ಜನತೆಯು ಅವರೊಂದಿಗೆ ತರ್ಕಿಸತೊಡಗಿತು. ಅವರು ಹೇಳಿದರು: ನೀವು ಅಲ್ಲಾಹನ ವಿಷಯದಲ್ಲಿ ನನ್ನೊಂದಿಗೆ ತರ್ಕಿಸುತ್ತಿರುವಿರಾ? ವಸ್ತುತಃ ಅವನು ನನಗೆ ಸನ್ಮಾರ್ಗವನ್ನು ತೋರಿಸಿ ಕೊಟ್ಟಿದ್ದಾನೆ ಮತ್ತು ನೀವು ಅಲ್ಲಾಹನೊಂದಿಗೆ ಸಹಭಾಗಿಗಳನ್ನಾಗಿ ನಿಶ್ಚಯಿಸಿರುವ ವಸ್ತುಗಳನ್ನು ನಾನು ಭಯಪಡುವುದಿಲ್ಲ. ಆದರೆ ನನ್ನ ಪ್ರಭು ಏನನ್ನಾದರೂ (ಹಾನಿಯನ್ನು) ಇಚ್ಛಿಸಿದರೆ ಹೊರತು. ನನ್ನ ಪ್ರಭುವು ತನ್ನ ಜ್ಞಾನದಿಂದ ಎಲ್ಲಾ ವಸ್ತುಗಳನ್ನು ಆವರಿಸಿದ್ದಾನೆ. ಹಾಗಿದ್ದೂ ನೀವು ಚಿಂತಿಸುವುದಿಲ್ಲವೇ?.
81وَكَيْفَ أَخَافُ مَا أَشْرَكْتُمْ وَلَا تَخَافُونَ أَنَّكُمْ أَشْرَكْتُم بِاللَّهِ مَا لَمْ يُنَزِّلْ بِهِ عَلَيْكُمْ سُلْطَانًا ۚ فَأَيُّ الْفَرِيقَيْنِ أَحَقُّ بِالْأَمْنِ ۖ إِن كُنتُمْ تَعْلَمُونَ
ಮತ್ತು ನೀವು ಸಹಭಾಗಿಗಳನ್ನಾಗಿ ನಿಶ್ಚಯಿಸಿರುವ ವಸ್ತುಗಳನ್ನು ನಾನು ಹೇಗೆ ಭಯಪಡಲಿ ? ವಸ್ತುತಃ ನೀವು ಅಲ್ಲಾಹನು ನಿಮ್ಮ ಮೇಲೆ ಯಾವುದೇ ಪುರಾವೆಯನ್ನು ಇಳಿಸದ ವಸ್ತುಗಳನ್ನು ಅವನೊಂದಿಗೆ ಸಹಭಾಗಿಯನ್ನಾಗಿ ಮಾಡುವುದರ ಬಗ್ಗೆ ಭಯಪಡುವುದಿಲ್ಲ. ಹಾಗಾದರೆ ಉಭಯ ಪಕ್ಷಗಳಲ್ಲಿ ಸುರಕ್ಷತೆಗೆ ಹೆಚ್ಚು ಅರ್ಹರು ಯಾರು ? ನೀವು ಅರಿಯುವವರಾಗಿದ್ದರೆ!
82الَّذِينَ آمَنُوا وَلَمْ يَلْبِسُوا إِيمَانَهُم بِظُلْمٍ أُولَٰئِكَ لَهُمُ الْأَمْنُ وَهُم مُّهْتَدُونَ
ಸತ್ಯವಿಶ್ವಾಸವಿಟ್ಟು ಮತ್ತು ತಮ್ಮ ವಿಶ್ವಾಸದಲ್ಲಿ ದೇವ ಸಹಭಾಗಿತ್ವವನ್ನು ಬೆರೆಸದವರಿಗೆ ಸುರಕ್ಷತೆಯಿದೆ. ಮತ್ತು ಅವರೇ ಸನ್ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ.
83وَتِلْكَ حُجَّتُنَا آتَيْنَاهَا إِبْرَاهِيمَ عَلَىٰ قَوْمِهِ ۚ نَرْفَعُ دَرَجَاتٍ مَّن نَّشَاءُ ۗ إِنَّ رَبَّكَ حَكِيمٌ عَلِيمٌ
ಇದು ನಾವು ಇಬ್ರಾಹೀಮರಿಗೆ ಅವರ ಜನತೆಗೆ ವಿರುದ್ಧವಾಗಿ ನೀಡಿದ (ಏಕದೇವತ್ವದ) ನಮ್ಮ ಪುರಾವೆಯಾಗಿದೆ. ನಾವು ಇಚ್ಛಿಸುವವರಿಗೆ ಪದವಿಗಳನ್ನು ಉನ್ನತಗೊಳಿಸುತ್ತೇವೆ. ನಿಸ್ಸಂಶಯವಾಗಿಯು ನಿಮ್ಮ ಪ್ರಭುವು ಯುಕ್ತಿವಂತನೂ, ಸರ್ವಜ್ಞಾನಿಯೂ ಆಗಿದ್ದಾನೆ.
84وَوَهَبْنَا لَهُ إِسْحَاقَ وَيَعْقُوبَ ۚ كُلًّا هَدَيْنَا ۚ وَنُوحًا هَدَيْنَا مِن قَبْلُ ۖ وَمِن ذُرِّيَّتِهِ دَاوُودَ وَسُلَيْمَانَ وَأَيُّوبَ وَيُوسُفَ وَمُوسَىٰ وَهَارُونَ ۚ وَكَذَٰلِكَ نَجْزِي الْمُحْسِنِينَ
ಮತ್ತು ನಾವು ಅವರಿಗೆ (ಇಬ್ರಾಹೀಮರಿಗೆ) ಇಸ್‌ಹಾಕ್ ಮತ್ತು ಯಾಕೂಬ್(ಪುತ್ರ)ರನ್ನು ನೀಡಿದೆವು. ಪ್ರತಿಯೊಬ್ಬರನ್ನು ಸನ್ಮಾರ್ಗಕ್ಕೆ ಸೇರಿಸಿದೆವು ಮತ್ತು ಅದಕ್ಕೆ ಮೊದಲು ನೂಹ್‌ರನ್ನು ನಾವು ಸನ್ಮಾರ್ಗಕ್ಕೆ ಸೇರಿಸಿದ್ದೆವು ಮತ್ತು ಅವರ ಸಂತತಿಗಳ ಪೈಕಿ ದಾವೂದ್, ಸುಲೈಮಾನ್, ಅಯ್ಯೂಬ್, ಯೂಸೂಫ್, ಮೂಸಾ ಮತ್ತು ಹಾರೂನ್‌ರನ್ನು (ಸನ್ಮಾರ್ಗಕ್ಕೆ ಸೇರಿಸಿದೆವು) ಮತ್ತು ಹೀಗೆ ಸತ್ಕರ್ಮಿಗಳಿಗೆ ನಾವು ಪ್ರತಿಫಲವನ್ನು ನೀಡುತ್ತೇವೆ.
ಅಲ್-ಅನ್ಆಮ್ಕುರಾನ್ ಸೂಚಿ
165ಆಯತ್
MeccanRevelation
82ಆಯತ್

ಅನುವಾದ — ಅಲ್-ಅನ್ಆಮ್ 82

ಸೂರಾ ಅಲ್-ಅನ್ಆಮ್ ಆಯತ್ 82 - ಓದಿ, ಆಲಿಸಿ, ಅನುವಾದ, ಕನ್ನಡ : ಸತ್ಯವಿಶ್ವಾಸವಿಟ್ಟು ಮತ್ತು ತಮ್ಮ ವಿಶ್ವಾಸದಲ್ಲಿ ದೇವ ಸಹಭಾಗಿತ್ವವನ್ನು ಬೆರೆಸದವರಿಗೆ ಸುರಕ್ಷತೆಯಿದೆ. ಮತ್ತು ಅವರೇ…

ಸೂರಾ ಆಯತ್ 82/165 — ಸೂರಾ ಅಲ್-ಅನ್ಆಮ್ الأنعام (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅನ್ಆಮ್ ಆಲಿಸಿ, ಸೂರಾ ಅಲ್-ಅನ್ಆಮ್ ಅನುವಾದ, ಸೂರಾ ಅಲ್-ಅನ್ಆಮ್ mp3, ಸೂರಾ ಅಲ್-ಅನ್ಆಮ್ pdf. ಆಯತ್ 80–84. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers