ಅತ್-ತೌಬಾ · 106/129
ಅನುವಾದ ಉಚ್ಚಾರಣೆ — ಸೂರಾ ಅತ್-ತೌಬಾ
وَآخَرُونَ مُرْجَوْنَ لِأَمْرِ اللَّهِ إِمَّا يُعَذِّبُهُمْ وَإِمَّا يَتُوبُ عَلَيْهِمْ ۗ وَاللَّهُ عَلِيمٌ حَكِيمٌ ۝١٠٦
Wa aakharoona murjawna li amril laahi imaa yu`az zibuhum wa immaa yatoobu `alaihim; wallaahu `Aleemun Hakeem
📖 ಕನ್ನಡ ಅರ್ಥ
ಮತ್ತು ಅಲ್ಲಾಹನ ಆಜ್ಞೆ ಬರುವವರೆಗೆ ಕಾದಿರಿಸಲಾದವರು ಕೆಲವರಿದ್ದಾರೆ. ಅವರನ್ನು ಶಿಕ್ಷಿಸಬಹುದು ಅಥವಾ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಬಹುದು ಮತ್ತು ಅಲ್ಲಾಹನು ಚೆನ್ನಾಗಿ ಅರಿಯುವವನೂ, ಯುಕ್ತಿಪೂರ್ಣನೂ ಆಗಿದ್ದಾನೆ.

🎧 ಆಲಿಸಿ


📜 ಆಯತ್ 104-108 — ಸೂರಾ ಅತ್-ತೌಬಾ

104أَلَمْ يَعْلَمُوا أَنَّ اللَّهَ هُوَ يَقْبَلُ التَّوْبَةَ عَنْ عِبَادِهِ وَيَأْخُذُ الصَّدَقَاتِ وَأَنَّ اللَّهَ هُوَ التَّوَّابُ الرَّحِيمُ
ಅಲ್ಲಾಹನೇ ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುವವನೆಂದೂ, ಅವನೇ ದಾನಗಳನ್ನು ಸ್ವೀಕರಿಸುವವನೆಂದೂ ಅವರಿಗೆ ತಿಳಿದಿಲ್ಲವೇ ಮತ್ತು ನಿಸ್ಸಂಶಯವಾಗಿಯೂ ಅಲ್ಲಾಹನು ಪಶ್ಚಾತ್ತಾಪ ಸ್ವೀಕರಿಸುವವನೂ, ಕಾರುಣಾನಿಧಿಯೂ ಆಗಿದ್ದಾನೆ.
105وَقُلِ اعْمَلُوا فَسَيَرَى اللَّهُ عَمَلَكُمْ وَرَسُولُهُ وَالْمُؤْمِنُونَ ۖ وَسَتُرَدُّونَ إِلَىٰ عَالِمِ الْغَيْبِ وَالشَّهَادَةِ فَيُنَبِّئُكُم بِمَا كُنتُمْ تَعْمَلُونَ
ತಾವು ಹೇಳಿರಿ: ನೀವು ಕಾರ್ಯವೆಸÀಗಿರಿ ನಿಮ್ಮ ಕರ್ಮಗಳನ್ನು ಸ್ವತಃ ಅಲ್ಲಾಹನು ಮತ್ತು ಅವನ ಸಂದೇಶವಾಹಕರು ಮತ್ತು ಸತ್ಯವಿಶ್ವಾಸಿಗಳು ನೋಡಲಿರುವರು ಮತ್ತು ಖಂಡಿತವಾಗಿಯೂ ನೀವು ಸಕಲ ರಹಸ್ಯ ಹಾಗೂ ಬಹಿರಂಗ ವಿಷಯಗಳನ್ನು ಬಲ್ಲವನೆಡೆಗೆ ಮರಳಿಸಲಾಗುವಿರಿ. ಹಾಗೆಯೇ ಅವನು ನಿಮ್ಮ ಸಕಲ ಕೃತ್ಯಗಳನ್ನು ತಿಳಿಸಲಿದ್ದಾನೆ.
106وَآخَرُونَ مُرْجَوْنَ لِأَمْرِ اللَّهِ إِمَّا يُعَذِّبُهُمْ وَإِمَّا يَتُوبُ عَلَيْهِمْ ۗ وَاللَّهُ عَلِيمٌ حَكِيمٌ
ಮತ್ತು ಅಲ್ಲಾಹನ ಆಜ್ಞೆ ಬರುವವರೆಗೆ ಕಾದಿರಿಸಲಾದವರು ಕೆಲವರಿದ್ದಾರೆ. ಅವರನ್ನು ಶಿಕ್ಷಿಸಬಹುದು ಅಥವಾ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಬಹುದು ಮತ್ತು ಅಲ್ಲಾಹನು ಚೆನ್ನಾಗಿ ಅರಿಯುವವನೂ, ಯುಕ್ತಿಪೂರ್ಣನೂ ಆಗಿದ್ದಾನೆ.
107وَالَّذِينَ اتَّخَذُوا مَسْجِدًا ضِرَارًا وَكُفْرًا وَتَفْرِيقًا بَيْنَ الْمُؤْمِنِينَ وَإِرْصَادًا لِّمَنْ حَارَبَ اللَّهَ وَرَسُولَهُ مِن قَبْلُ ۚ وَلَيَحْلِفُنَّ إِنْ أَرَدْنَا إِلَّا الْحُسْنَىٰ ۖ وَاللَّهُ يَشْهَدُ إِنَّهُمْ لَكَاذِبُونَ
ಮತ್ತು (ಸತ್ಯವಿಶ್ವಾಸಿಗಳಿಗೆ) ಕೇಡು ಬಗೆಯುವ ಉದ್ದೇಶದಿಂದಲೂ, ಸತ್ಯನಿಷೇಧವನ್ನು ಬಲಪಡಿಸುವ ಉದ್ದೇಶದಿಂದಲೂ, ಸತ್ಯವಿಶ್ವಾಸಿಗಳ ನಡುವೆ ಭಿನ್ನತೆಯನ್ನುಂಟು ಮಾಡುವ ಉದ್ದೇಶದಿಂದಲೂ ಮತ್ತು ಅಲ್ಲಾಹನ ಹಾಗೂ ಅವನ ಸಂದೇಶವಾಹಕರಿಗೆ ವಿರೋಧಿಯಾಗಿ ಈ ಮೊದಲಿನಿಂದಲೇ ಹೋರಾಡುತ್ತಾ ಬಂದಿರುವ ವ್ಯಕ್ತಿಯೊಬ್ಬನಿಗೆ ಹೊಂಚು ತಾಣವನ್ನಾಗಿಡುವ ಉದ್ದೇಶದಿಂದಲೂ ಮಸೀದಿಯೊಂದನ್ನು ನಿರ್ಮಿಸಿದವರು ಸಹ ಆ ಕಪಟ ವಿಶ್ವಾಸಿಗಳ ಪೈಕಿಯಲ್ಲಿದ್ದಾರೆ. ಮತ್ತು ಅವರು ಒಳಿತಿನ ಹೊರತು ಇನ್ನಾವುದೇ ಉದ್ದೇಶ ನಮಗಿರಲಿಲ್ಲ ಎಂದು ಆಣೆಯಿಟ್ಟು ಹೇಳುವರು. ಅವರು ಸಂಪೂರ್ಣ ಸುಳ್ಳುಗಾರರಾಗಿದ್ದಾರೆಂಬುದಕ್ಕೆ ಅಲ್ಲಾಹನು ಸಾಕ್ಷಿಯಾಗಿದ್ದಾನೆ.
108لَا تَقُمْ فِيهِ أَبَدًا ۚ لَّمَسْجِدٌ أُسِّسَ عَلَى التَّقْوَىٰ مِنْ أَوَّلِ يَوْمٍ أَحَقُّ أَن تَقُومَ فِيهِ ۚ فِيهِ رِجَالٌ يُحِبُّونَ أَن يَتَطَهَّرُوا ۚ وَاللَّهُ يُحِبُّ الْمُطَّهِّرِينَ
ತಾವು ಅದರಲ್ಲಿ (ನಮಾಜ್‌ಗಾಗಿ) ಎಂದಿಗೂ ನಿಲ್ಲಬೇಡಿರಿ. ಖಂಡಿತವಾಗಿಯೂ ಪ್ರಥಮ ದಿನದಿಂದಲೇ ಭಯಭಕ್ತಿಯ ಆಧಾರದ ಮೇಲೆ ಬುನಾದಿಯನ್ನು ಹಾಕಲಾದ ಮಸೀದಿಯೇ ನಿಮಗೆ (ನಮಾಜ್‌ಗಾಗಿ) ನಿಲ್ಲಲು ಅತ್ಯಂತ ಯೋಗ್ಯವಾಗಿದೆ. ಅದರಲ್ಲಿ ಪರಿಶುದ್ಧತೆಯನ್ನು ಬಯಸುವ ಜನರಿದ್ದಾರೆ. ಮತ್ತು ಅಲ್ಲಾಹನು ಪರಿಶುದ್ಧರನ್ನು ಪ್ರೀತಿಸುತ್ತಾನೆ.
ಅತ್-ತೌಬಾಕುರಾನ್ ಸೂಚಿ
129ಆಯತ್
MedinanRevelation
106ಆಯತ್

ಅನುವಾದ — ಅತ್-ತೌಬಾ 106

ಸೂರಾ ಅತ್-ತೌಬಾ ಆಯತ್ 106 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಅಲ್ಲಾಹನ ಆಜ್ಞೆ ಬರುವವರೆಗೆ ಕಾದಿರಿಸಲಾದವರು ಕೆಲವರಿದ್ದಾರೆ. ಅವರನ್ನು ಶಿಕ್ಷಿಸಬಹುದು ಅಥವಾ ಅವರ…

ಸೂರಾ ಆಯತ್ 106/129 — ಸೂರಾ ಅತ್-ತೌಬಾ التوبة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತೌಬಾ ಆಲಿಸಿ, ಸೂರಾ ಅತ್-ತೌಬಾ ಅನುವಾದ, ಸೂರಾ ಅತ್-ತೌಬಾ mp3, ಸೂರಾ ಅತ್-ತೌಬಾ pdf. ಆಯತ್ 104–108. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers