ಆಲ್-ಇಮ್ರಾನ್ · 50/200
ಅನುವಾದ ಉಚ್ಚಾರಣೆ — ಸೂರಾ ಆಲ್-ಇಮ್ರಾನ್
وَمُصَدِّقًا لِّمَا بَيْنَ يَدَيَّ مِنَ التَّوْرَاةِ وَلِأُحِلَّ لَكُم بَعْضَ الَّذِي حُرِّمَ عَلَيْكُمْ ۚ وَجِئْتُكُم بِآيَةٍ مِّن رَّبِّكُمْ فَاتَّقُوا اللَّهَ وَأَطِيعُونِ ۝٥٠
Wa musaddiqal limaa baina yadaiya minat Tawraati wa liuhilla lakum ba`dal lazee hurrima `alaikum; wa ji`tukum bi Aayatim mir Rabbikum fattaqul laaha wa atee`oon
📖 ಕನ್ನಡ ಅರ್ಥ
ಮತ್ತು ನಾನು ನನ್ನ ಮುಂಚಿನ ಗ್ರಂಥವಾದ ತೌರಾತನ್ನು ಸತ್ಯವೆಂದು ದೃಢೀಕರಿಸಲು ಮತ್ತು ನಿಮ್ಮ ಮೇಲೆ ನಿಷಿದ್ಧಗೊಳಿಸಿರುವುದರಲ್ಲಿ ಕೆಲವನ್ನು ನಿಮಗೆ ಧರ್ಮ ಸಮ್ಮತಗೊಳಿಸಲೆಂದು ಬಂದಿರುವೆನು. ನಾನು ನಿಮಗೆ ನಿಮ್ಮ ಪ್ರಭುವಿನ ಕಡೆಯಿಂದ ದೃಷ್ಟಾಂತವನ್ನು ತಂದಿರುವೆನು. ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

🎧 ಆಲಿಸಿ


📜 ಆಯತ್ 48-52 — ಸೂರಾ ಆಲ್-ಇಮ್ರಾನ್

48وَيُعَلِّمُهُ الْكِتَابَ وَالْحِكْمَةَ وَالتَّوْرَاةَ وَالْإِنجِيلَ
ಅಲ್ಲಾಹನು ಅವರಿಗೆ ಗ್ರಂಥವನ್ನೂ, ಸುಜ್ಞಾನವನ್ನೂ, ತೌರಾತನ್ನೂ, ಇಂಜೀಲನ್ನೂ ಕಲಿಸುವನು.
49وَرَسُولًا إِلَىٰ بَنِي إِسْرَائِيلَ أَنِّي قَدْ جِئْتُكُم بِآيَةٍ مِّن رَّبِّكُمْ ۖ أَنِّي أَخْلُقُ لَكُم مِّنَ الطِّينِ كَهَيْئَةِ الطَّيْرِ فَأَنفُخُ فِيهِ فَيَكُونُ طَيْرًا بِإِذْنِ اللَّهِ ۖ وَأُبْرِئُ الْأَكْمَهَ وَالْأَبْرَصَ وَأُحْيِي الْمَوْتَىٰ بِإِذْنِ اللَّهِ ۖ وَأُنَبِّئُكُم بِمَا تَأْكُلُونَ وَمَا تَدَّخِرُونَ فِي بُيُوتِكُمْ ۚ إِنَّ فِي ذَٰلِكَ لَآيَةً لَّكُمْ إِن كُنتُم مُّؤْمِنِينَ
ಮತ್ತು ಅವರನ್ನು ಇಸ್ರಾಯೀಲ್ ಸಂತತಿಯೆಡೆಗೆ ಸಂದೇಶವಾಹಕರನ್ನಾಗಿ ನೇಮಿಸುವನು (ಅವರು ಹೇಳುವರು:) 'ನಾನು ನಿಮ್ಮ ಬಳಿ ನಿಮ್ಮ ಪ್ರಭುವಿನ ಕಡೆಯಿಂದ ದೃಷ್ಟಾಂತವನ್ನು ತಂದಿರುವೆನು. ನಾನು ನಿಮಗಾಗಿ ಆವೆ ಮಣ್ಣಿನ ಪಕ್ಷಿಯ ಆಕೃತಿಯಂತೆ ಮಾಡಿ, ನಾನದರಲ್ಲಿ ಊದಿದಾಗ ಅದು ಅಲ್ಲಾಹನ ಅಪ್ಪಣೆಯಿಂದ ಪಕ್ಷಿಯಾಗಿಬಿಡುವುದು ಮತ್ತು ಅಲ್ಲಾಹನ ಅಪ್ಪಣೆಯಿಂದ ನಾನು ಹುಟ್ಟು ಕುರುಡನನ್ನೂ, ಕುಷ್ಠರೋಗಿಯನ್ನೂ ಗುಣಪಡಿಸುವೆನು ಮತು ಮೃತರನ್ನು ಜೀವಂತಗೊಳಿಸುವೆನು. ನೀವು ತಿನ್ನುವುದನ್ನು ಮತ್ತು ನಿಮ್ಮ ಮನೆಗಳಲ್ಲಿ ಸಂಗ್ರಹಿಸಿಡುವುದನ್ನು ನಿಮಗೆ ತಿಳಿಸಿಕೊಡುವೆನು. ನೀವು ವಿಶ್ವಾಸವಿರಿಸುವವರಾಗಿದ್ದರೆ ನಿಸ್ಸಂಶಯವಾಗಿಯು ಇದರಲ್ಲಿ ನಿಮಗೆ ದೃಷ್ಟಾಂತವಿದೆ.
50وَمُصَدِّقًا لِّمَا بَيْنَ يَدَيَّ مِنَ التَّوْرَاةِ وَلِأُحِلَّ لَكُم بَعْضَ الَّذِي حُرِّمَ عَلَيْكُمْ ۚ وَجِئْتُكُم بِآيَةٍ مِّن رَّبِّكُمْ فَاتَّقُوا اللَّهَ وَأَطِيعُونِ
ಮತ್ತು ನಾನು ನನ್ನ ಮುಂಚಿನ ಗ್ರಂಥವಾದ ತೌರಾತನ್ನು ಸತ್ಯವೆಂದು ದೃಢೀಕರಿಸಲು ಮತ್ತು ನಿಮ್ಮ ಮೇಲೆ ನಿಷಿದ್ಧಗೊಳಿಸಿರುವುದರಲ್ಲಿ ಕೆಲವನ್ನು ನಿಮಗೆ ಧರ್ಮ ಸಮ್ಮತಗೊಳಿಸಲೆಂದು ಬಂದಿರುವೆನು. ನಾನು ನಿಮಗೆ ನಿಮ್ಮ ಪ್ರಭುವಿನ ಕಡೆಯಿಂದ ದೃಷ್ಟಾಂತವನ್ನು ತಂದಿರುವೆನು. ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
51إِنَّ اللَّهَ رَبِّي وَرَبُّكُمْ فَاعْبُدُوهُ ۗ هَٰذَا صِرَاطٌ مُّسْتَقِيمٌ
ಖಂಡಿತವಾಗಿಯೂ ನನ್ನ ಮತ್ತು ನಿಮ್ಮ ಪ್ರಭು ಅಲ್ಲಾಹನಾಗಿದ್ದಾನೆ. ನೀವು ಅವನನ್ನು ಮಾತ್ರ ಆರಾಧಿಸಿರಿ ಇದುವೇ ಋಜು ಮಾರ್ಗವಾಗಿದೆ.
52۞ فَلَمَّا أَحَسَّ عِيسَىٰ مِنْهُمُ الْكُفْرَ قَالَ مَنْ أَنصَارِي إِلَى اللَّهِ ۖ قَالَ الْحَوَارِيُّونَ نَحْنُ أَنصَارُ اللَّهِ آمَنَّا بِاللَّهِ وَاشْهَدْ بِأَنَّا مُسْلِمُونَ
ಆದರೆ ಈಸಾ(ಅ)ರವರು ಅವರ ನಿಷೇಧವನ್ನು ಮನದಟ್ಟು ಮಾಡಿಕೊಂಡಾಗ, 'ಅಲ್ಲಾಹನ ಮಾರ್ಗದಲ್ಲಿ ನನ್ನ ಸಹಾಯಕರಾಗಿ ಯಾರಿದ್ದಾರೆ ಎಂದು ಕೇಳಿದರು.? ‘ನಾವು ಅಲ್ಲಾಹನ ಮಾರ್ಗದಲ್ಲಿ ಸಹಾಯಕರಾಗಿದ್ದೇವೆ ಎಂದು ಅನುಯಾಯಿಗಳು ಹೇಳಿದರು. ನಾವು ಅಲ್ಲಾಹನ ಮೇಲೆ ವಿಶ್ವಾಸವಿಟ್ಟಿದ್ದೇವೆ ಮತ್ತು ನಾವು ವಿಧೇಯರಾಗಿದ್ದೇವೆಂಬುದಕ್ಕೆ ನೀವು ಸಾಕ್ಷö್ಯವಹಿಸಿರಿ'.
ಆಲ್-ಇಮ್ರಾನ್ಕುರಾನ್ ಸೂಚಿ
200ಆಯತ್
MedinanRevelation
50ಆಯತ್

ಅನುವಾದ — ಆಲ್-ಇಮ್ರಾನ್ 50

ಸೂರಾ ಆಲ್-ಇಮ್ರಾನ್ ಆಯತ್ 50 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನಾನು ನನ್ನ ಮುಂಚಿನ ಗ್ರಂಥವಾದ ತೌರಾತನ್ನು ಸತ್ಯವೆಂದು ದೃಢೀಕರಿಸಲು ಮತ್ತು ನಿಮ್ಮ…

ಸೂರಾ ಆಯತ್ 50/200 — ಸೂರಾ ಆಲ್-ಇಮ್ರಾನ್ آل عمران (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಆಲ್-ಇಮ್ರಾನ್ ಆಲಿಸಿ, ಸೂರಾ ಆಲ್-ಇಮ್ರಾನ್ ಅನುವಾದ, ಸೂರಾ ಆಲ್-ಇಮ್ರಾನ್ mp3, ಸೂರಾ ಆಲ್-ಇಮ್ರಾನ್ pdf. ಆಯತ್ 48–52. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers