ಆಲ್-ಇಮ್ರಾನ್ · 49/200
ಅನುವಾದ ಉಚ್ಚಾರಣೆ — ಸೂರಾ ಆಲ್-ಇಮ್ರಾನ್
وَرَسُولًا إِلَىٰ بَنِي إِسْرَائِيلَ أَنِّي قَدْ جِئْتُكُم بِآيَةٍ مِّن رَّبِّكُمْ ۖ أَنِّي أَخْلُقُ لَكُم مِّنَ الطِّينِ كَهَيْئَةِ الطَّيْرِ فَأَنفُخُ فِيهِ فَيَكُونُ طَيْرًا بِإِذْنِ اللَّهِ ۖ وَأُبْرِئُ الْأَكْمَهَ وَالْأَبْرَصَ وَأُحْيِي الْمَوْتَىٰ بِإِذْنِ اللَّهِ ۖ وَأُنَبِّئُكُم بِمَا تَأْكُلُونَ وَمَا تَدَّخِرُونَ فِي بُيُوتِكُمْ ۚ إِنَّ فِي ذَٰلِكَ لَآيَةً لَّكُمْ إِن كُنتُم مُّؤْمِنِينَ ۝٤٩
Wa Rasoolan ilaa Baneee Israaa`eela annee qad ji`tukum bi Aayatim mir Rabbikum annee akhluqu lakum minatteeni kahai `atittairi fa anfukhu feehi fayakoonu tairam bi iznil laahi wa ubri`ul akmaha wal abrasa wa uhyil mawtaa bi iznil laahi wa unabbi`ukum bimaa taakuloona wa maa taddakhiroona fee buyootikum; inna fee zaalika la Aayatal lakum in kuntum mu`mineen
📖 ಕನ್ನಡ ಅರ್ಥ
ಮತ್ತು ಅವರನ್ನು ಇಸ್ರಾಯೀಲ್ ಸಂತತಿಯೆಡೆಗೆ ಸಂದೇಶವಾಹಕರನ್ನಾಗಿ ನೇಮಿಸುವನು (ಅವರು ಹೇಳುವರು:) 'ನಾನು ನಿಮ್ಮ ಬಳಿ ನಿಮ್ಮ ಪ್ರಭುವಿನ ಕಡೆಯಿಂದ ದೃಷ್ಟಾಂತವನ್ನು ತಂದಿರುವೆನು. ನಾನು ನಿಮಗಾಗಿ ಆವೆ ಮಣ್ಣಿನ ಪಕ್ಷಿಯ ಆಕೃತಿಯಂತೆ ಮಾಡಿ, ನಾನದರಲ್ಲಿ ಊದಿದಾಗ ಅದು ಅಲ್ಲಾಹನ ಅಪ್ಪಣೆಯಿಂದ ಪಕ್ಷಿಯಾಗಿಬಿಡುವುದು ಮತ್ತು ಅಲ್ಲಾಹನ ಅಪ್ಪಣೆಯಿಂದ ನಾನು ಹುಟ್ಟು ಕುರುಡನನ್ನೂ, ಕುಷ್ಠರೋಗಿಯನ್ನೂ ಗುಣಪಡಿಸುವೆನು ಮತು ಮೃತರನ್ನು ಜೀವಂತಗೊಳಿಸುವೆನು. ನೀವು ತಿನ್ನುವುದನ್ನು ಮತ್ತು ನಿಮ್ಮ ಮನೆಗಳಲ್ಲಿ ಸಂಗ್ರಹಿಸಿಡುವುದನ್ನು ನಿಮಗೆ ತಿಳಿಸಿಕೊಡುವೆನು. ನೀವು ವಿಶ್ವಾಸವಿರಿಸುವವರಾಗಿದ್ದರೆ ನಿಸ್ಸಂಶಯವಾಗಿಯು ಇದರಲ್ಲಿ ನಿಮಗೆ ದೃಷ್ಟಾಂತವಿದೆ.

🎧 ಆಲಿಸಿ


📜 ಆಯತ್ 47-51 — ಸೂರಾ ಆಲ್-ಇಮ್ರಾನ್

47قَالَتْ رَبِّ أَنَّىٰ يَكُونُ لِي وَلَدٌ وَلَمْ يَمْسَسْنِي بَشَرٌ ۖ قَالَ كَذَٰلِكِ اللَّهُ يَخْلُقُ مَا يَشَاءُ ۚ إِذَا قَضَىٰ أَمْرًا فَإِنَّمَا يَقُولُ لَهُ كُن فَيَكُونُ
ಆಕೆ ಹೇಳಿದಳು: 'ನನ್ನ ಪ್ರಭುವೇ, ನನಗೆ ಮಗುವಾಗುವುದಾದರೂ ಹೇಗೆ? ವಸ್ತುತಃ ನನ್ನನ್ನು ಯಾವ ಮನುಷ್ಯನೂ ಸ್ಪರ್ಶಿಸಿಲ್ಲ. ಅಲ್ಲಾಹನು ಹೇಳಿದನು: 'ಇದೇ ಪ್ರಕಾರ ಅಲ್ಲಾಹನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ. ಅವನು ಯಾವುದೇ ಕಾರ್ಯ ಮಾಡಲು ನಿರ್ಧರಿಸಿದಾಗ ಅದಕ್ಕೆ 'ಆಗು' ಎಂದು ಮಾತ್ರ ಹೇಳುತ್ತಾನೆ. ಆಗ ಅದು ಆಗಿ ಬಿಡುತ್ತದೆ'.
48وَيُعَلِّمُهُ الْكِتَابَ وَالْحِكْمَةَ وَالتَّوْرَاةَ وَالْإِنجِيلَ
ಅಲ್ಲಾಹನು ಅವರಿಗೆ ಗ್ರಂಥವನ್ನೂ, ಸುಜ್ಞಾನವನ್ನೂ, ತೌರಾತನ್ನೂ, ಇಂಜೀಲನ್ನೂ ಕಲಿಸುವನು.
49وَرَسُولًا إِلَىٰ بَنِي إِسْرَائِيلَ أَنِّي قَدْ جِئْتُكُم بِآيَةٍ مِّن رَّبِّكُمْ ۖ أَنِّي أَخْلُقُ لَكُم مِّنَ الطِّينِ كَهَيْئَةِ الطَّيْرِ فَأَنفُخُ فِيهِ فَيَكُونُ طَيْرًا بِإِذْنِ اللَّهِ ۖ وَأُبْرِئُ الْأَكْمَهَ وَالْأَبْرَصَ وَأُحْيِي الْمَوْتَىٰ بِإِذْنِ اللَّهِ ۖ وَأُنَبِّئُكُم بِمَا تَأْكُلُونَ وَمَا تَدَّخِرُونَ فِي بُيُوتِكُمْ ۚ إِنَّ فِي ذَٰلِكَ لَآيَةً لَّكُمْ إِن كُنتُم مُّؤْمِنِينَ
ಮತ್ತು ಅವರನ್ನು ಇಸ್ರಾಯೀಲ್ ಸಂತತಿಯೆಡೆಗೆ ಸಂದೇಶವಾಹಕರನ್ನಾಗಿ ನೇಮಿಸುವನು (ಅವರು ಹೇಳುವರು:) 'ನಾನು ನಿಮ್ಮ ಬಳಿ ನಿಮ್ಮ ಪ್ರಭುವಿನ ಕಡೆಯಿಂದ ದೃಷ್ಟಾಂತವನ್ನು ತಂದಿರುವೆನು. ನಾನು ನಿಮಗಾಗಿ ಆವೆ ಮಣ್ಣಿನ ಪಕ್ಷಿಯ ಆಕೃತಿಯಂತೆ ಮಾಡಿ, ನಾನದರಲ್ಲಿ ಊದಿದಾಗ ಅದು ಅಲ್ಲಾಹನ ಅಪ್ಪಣೆಯಿಂದ ಪಕ್ಷಿಯಾಗಿಬಿಡುವುದು ಮತ್ತು ಅಲ್ಲಾಹನ ಅಪ್ಪಣೆಯಿಂದ ನಾನು ಹುಟ್ಟು ಕುರುಡನನ್ನೂ, ಕುಷ್ಠರೋಗಿಯನ್ನೂ ಗುಣಪಡಿಸುವೆನು ಮತು ಮೃತರನ್ನು ಜೀವಂತಗೊಳಿಸುವೆನು. ನೀವು ತಿನ್ನುವುದನ್ನು ಮತ್ತು ನಿಮ್ಮ ಮನೆಗಳಲ್ಲಿ ಸಂಗ್ರಹಿಸಿಡುವುದನ್ನು ನಿಮಗೆ ತಿಳಿಸಿಕೊಡುವೆನು. ನೀವು ವಿಶ್ವಾಸವಿರಿಸುವವರಾಗಿದ್ದರೆ ನಿಸ್ಸಂಶಯವಾಗಿಯು ಇದರಲ್ಲಿ ನಿಮಗೆ ದೃಷ್ಟಾಂತವಿದೆ.
50وَمُصَدِّقًا لِّمَا بَيْنَ يَدَيَّ مِنَ التَّوْرَاةِ وَلِأُحِلَّ لَكُم بَعْضَ الَّذِي حُرِّمَ عَلَيْكُمْ ۚ وَجِئْتُكُم بِآيَةٍ مِّن رَّبِّكُمْ فَاتَّقُوا اللَّهَ وَأَطِيعُونِ
ಮತ್ತು ನಾನು ನನ್ನ ಮುಂಚಿನ ಗ್ರಂಥವಾದ ತೌರಾತನ್ನು ಸತ್ಯವೆಂದು ದೃಢೀಕರಿಸಲು ಮತ್ತು ನಿಮ್ಮ ಮೇಲೆ ನಿಷಿದ್ಧಗೊಳಿಸಿರುವುದರಲ್ಲಿ ಕೆಲವನ್ನು ನಿಮಗೆ ಧರ್ಮ ಸಮ್ಮತಗೊಳಿಸಲೆಂದು ಬಂದಿರುವೆನು. ನಾನು ನಿಮಗೆ ನಿಮ್ಮ ಪ್ರಭುವಿನ ಕಡೆಯಿಂದ ದೃಷ್ಟಾಂತವನ್ನು ತಂದಿರುವೆನು. ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
51إِنَّ اللَّهَ رَبِّي وَرَبُّكُمْ فَاعْبُدُوهُ ۗ هَٰذَا صِرَاطٌ مُّسْتَقِيمٌ
ಖಂಡಿತವಾಗಿಯೂ ನನ್ನ ಮತ್ತು ನಿಮ್ಮ ಪ್ರಭು ಅಲ್ಲಾಹನಾಗಿದ್ದಾನೆ. ನೀವು ಅವನನ್ನು ಮಾತ್ರ ಆರಾಧಿಸಿರಿ ಇದುವೇ ಋಜು ಮಾರ್ಗವಾಗಿದೆ.
ಆಲ್-ಇಮ್ರಾನ್ಕುರಾನ್ ಸೂಚಿ
200ಆಯತ್
MedinanRevelation
49ಆಯತ್

ಅನುವಾದ — ಆಲ್-ಇಮ್ರಾನ್ 49

ಸೂರಾ ಆಲ್-ಇಮ್ರಾನ್ ಆಯತ್ 49 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಅವರನ್ನು ಇಸ್ರಾಯೀಲ್ ಸಂತತಿಯೆಡೆಗೆ ಸಂದೇಶವಾಹಕರನ್ನಾಗಿ ನೇಮಿಸುವನು (ಅವರು ಹೇಳುವರು:) 'ನಾನು ನಿಮ್ಮ…

ಸೂರಾ ಆಯತ್ 49/200 — ಸೂರಾ ಆಲ್-ಇಮ್ರಾನ್ آل عمران (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಆಲ್-ಇಮ್ರಾನ್ ಆಲಿಸಿ, ಸೂರಾ ಆಲ್-ಇಮ್ರಾನ್ ಅನುವಾದ, ಸೂರಾ ಆಲ್-ಇಮ್ರಾನ್ mp3, ಸೂರಾ ಆಲ್-ಇಮ್ರಾನ್ pdf. ಆಯತ್ 47–51. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers