ಅಲ್-ಅಹ್ಜಾಬ್ · 28/73
ಅನುವಾದ ಉಚ್ಚಾರಣೆ — ಸೂರಾ ಅಲ್-ಅಹ್ಜಾಬ್
يَا أَيُّهَا النَّبِيُّ قُل لِّأَزْوَاجِكَ إِن كُنتُنَّ تُرِدْنَ الْحَيَاةَ الدُّنْيَا وَزِينَتَهَا فَتَعَالَيْنَ أُمَتِّعْكُنَّ وَأُسَرِّحْكُنَّ سَرَاحًا جَمِيلًا ۝٢٨
Yaaa aiyuhan Nabiyyu qul li azwaajika i kuntunna turidnal hayaatad dunyaa wa zeenatahaa fata`aalaina umatti`kunna wa usarrihkunna saraahan jameela
📖 ಕನ್ನಡ ಅರ್ಥ
ಓ ಪೈಗಂಬರರೇ, ತಮ್ಮ ಪತ್ನಿಯರಿಗೆ ಹೇಳಿರಿ: ನೀವು ಈ ಇಹಲೋಕ ಜೀವನವನ್ನು ಮತ್ತು ಅದರ ಅಲಂಕಾರವನ್ನು ಬಯಸುತ್ತೀರಾದರೆ ಬನ್ನಿರಿ, ನಾನು ನಿಮಗೆ ಏನಾದರೂ ನೀಡಿ ನಿಮ್ಮನ್ನು ಉತ್ತಮ ರೀತಿಯಲ್ಲಿ ವಿಚ್ಛೇದನೆ ಕೊಟ್ಟುಬಿಡುತ್ತೇನೆ.

🎧 ಆಲಿಸಿ


📜 ಆಯತ್ 26-30 — ಸೂರಾ ಅಲ್-ಅಹ್ಜಾಬ್

26وَأَنزَلَ الَّذِينَ ظَاهَرُوهُم مِّنْ أَهْلِ الْكِتَابِ مِن صَيَاصِيهِمْ وَقَذَفَ فِي قُلُوبِهِمُ الرُّعْبَ فَرِيقًا تَقْتُلُونَ وَتَأْسِرُونَ فَرِيقًا
ಮತ್ತು ಗ್ರಂಥದವರ ಪೈಕಿ ಅವರಿಗೆ (ಸತ್ಯ ನಿಷೇಧಿಗಳಿಗೆ) ಬೆಂಬಲ ನೀಡಿದವರನ್ನು ಅವನು ಅವರ ಕೋಟೆಗಳಿಂದ ಕೆಳಗಿಳಿಸಿದನು. ಹಾಗೂ ಅವರ ಹೃದಯಗಳಲ್ಲಿ ಭೀತಿಯನ್ನು ಹಾಕಿಬಿಟ್ಟನು. ಅವರ ಒಂದು ಗುಂಪನ್ನು ನೀವು ವಧಿಸುತ್ತಿರುವಿರಿ ಮತ್ತು ಇನ್ನೊಂದು ಗುಂಪನ್ನು ಬಂಧಿಗಳನ್ನಾಗಿ ಮಾಡುತ್ತಿರುವಿರಿ.
27وَأَوْرَثَكُمْ أَرْضَهُمْ وَدِيَارَهُمْ وَأَمْوَالَهُمْ وَأَرْضًا لَّمْ تَطَئُوهَا ۚ وَكَانَ اللَّهُ عَلَىٰ كُلِّ شَيْءٍ قَدِيرًا
ಮತ್ತು ಅವನು ನಿಮ್ಮನ್ನು ಅವರ ಭೂಮಿಯ, ಅವರ ಮನೆಮಠಗಳ, ಅವರ ಸಂಪತ್ತುಗಳ ವಾರೀಸುದಾರರನ್ನಾಗಿ ಮಾಡಿದನು ಮತ್ತು ಈ ಹಿಂದೆ ನೀವು ಕಾಲಿಟ್ಟಿರದ ಭೂಮಿಯನ್ನೂ ಸಹ ದಯಪಾಲಿಸಿದನು. ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
28يَا أَيُّهَا النَّبِيُّ قُل لِّأَزْوَاجِكَ إِن كُنتُنَّ تُرِدْنَ الْحَيَاةَ الدُّنْيَا وَزِينَتَهَا فَتَعَالَيْنَ أُمَتِّعْكُنَّ وَأُسَرِّحْكُنَّ سَرَاحًا جَمِيلًا
ಓ ಪೈಗಂಬರರೇ, ತಮ್ಮ ಪತ್ನಿಯರಿಗೆ ಹೇಳಿರಿ: ನೀವು ಈ ಇಹಲೋಕ ಜೀವನವನ್ನು ಮತ್ತು ಅದರ ಅಲಂಕಾರವನ್ನು ಬಯಸುತ್ತೀರಾದರೆ ಬನ್ನಿರಿ, ನಾನು ನಿಮಗೆ ಏನಾದರೂ ನೀಡಿ ನಿಮ್ಮನ್ನು ಉತ್ತಮ ರೀತಿಯಲ್ಲಿ ವಿಚ್ಛೇದನೆ ಕೊಟ್ಟುಬಿಡುತ್ತೇನೆ.
29وَإِن كُنتُنَّ تُرِدْنَ اللَّهَ وَرَسُولَهُ وَالدَّارَ الْآخِرَةَ فَإِنَّ اللَّهَ أَعَدَّ لِلْمُحْسِنَاتِ مِنكُنَّ أَجْرًا عَظِيمًا
ಇನ್ನು ನೀವು ಅಲ್ಲಾಹನನ್ನು, ಅವನ ಸಂದೇಶವಾಹಕರನ್ನು ಹಾಗೂ ಪರಲೋಕ ಭವನವನ್ನು ಬಯಸಿದರೆ, ಖಂಡಿತವಾಗಿಯು ನಿಮ್ಮ ಪೈಕಿಯ ಒಳಿತನ ಪಾಲಕಿಯರಿಗೆ ಅಲ್ಲಾಹನು ಮಹಾ ಪ್ರತಿಫಲವನ್ನು ಸಿದ್ಧಮಾಡಿಬಿಟ್ಟಿರುತ್ತಾನೆ.
30يَا نِسَاءَ النَّبِيِّ مَن يَأْتِ مِنكُنَّ بِفَاحِشَةٍ مُّبَيِّنَةٍ يُضَاعَفْ لَهَا الْعَذَابُ ضِعْفَيْنِ ۚ وَكَانَ ذَٰلِكَ عَلَى اللَّهِ يَسِيرًا
ಓ ಪೈಗಂಬರರ, ಪತ್ನಿಯರೇ ನಿಮ್ಮಲ್ಲಿ ಯಾರಾದರೂ ಪ್ರತ್ಯಕ್ಷವಾಗಿರುವ ನಿರ್ಲಜ್ಜೆಯ ಕೃತ್ಯವನ್ನು ಎಸಗಿದರೆ, ಅವರಿಗೆ ಇಮ್ಮಡಿ ಶಿಕ್ಷೆಯನ್ನು ನೀಡಲಾಗುವುದು ಮತ್ತು ಇದು ಅಲ್ಲಾಹನಿಗೆ ಸರಳ ಕಾರ್ಯವಾಗಿದೆ.
ಅಲ್-ಅಹ್ಜಾಬ್ಕುರಾನ್ ಸೂಚಿ
73ಆಯತ್
MedinanRevelation
28ಆಯತ್

ಅನುವಾದ — ಅಲ್-ಅಹ್ಜಾಬ್ 28

ಸೂರಾ ಅಲ್-ಅಹ್ಜಾಬ್ ಆಯತ್ 28 - ಓದಿ, ಆಲಿಸಿ, ಅನುವಾದ, ಕನ್ನಡ : ಓ ಪೈಗಂಬರರೇ, ತಮ್ಮ ಪತ್ನಿಯರಿಗೆ ಹೇಳಿರಿ: ನೀವು ಈ ಇಹಲೋಕ ಜೀವನವನ್ನು ಮತ್ತು…

ಸೂರಾ ಆಯತ್ 28/73 — ಸೂರಾ ಅಲ್-ಅಹ್ಜಾಬ್ الأحزاب (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಹ್ಜಾಬ್ ಆಲಿಸಿ, ಸೂರಾ ಅಲ್-ಅಹ್ಜಾಬ್ ಅನುವಾದ, ಸೂರಾ ಅಲ್-ಅಹ್ಜಾಬ್ mp3, ಸೂರಾ ಅಲ್-ಅಹ್ಜಾಬ್ pdf. ಆಯತ್ 26–30. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers