ಅಲ್-ಅಹ್ಜಾಬ್ · 38/73
ಅನುವಾದ ಉಚ್ಚಾರಣೆ — ಸೂರಾ ಅಲ್-ಅಹ್ಜಾಬ್
مَّا كَانَ عَلَى النَّبِيِّ مِنْ حَرَجٍ فِيمَا فَرَضَ اللَّهُ لَهُ ۖ سُنَّةَ اللَّهِ فِي الَّذِينَ خَلَوْا مِن قَبْلُ ۚ وَكَانَ أَمْرُ اللَّهِ قَدَرًا مَّقْدُورًا ۝٣٨
Maa kaana `alan nabiyyyi min harajin feemaa faradal laahu lahoo sunnatal laahi fil lazeena khalaw min qabl; wa kaana amrul laahi qadaram maqdooraa
📖 ಕನ್ನಡ ಅರ್ಥ
ತನಗೆ ಅಲ್ಲಾಹನು ನಿಶ್ಚಯಗೊಳಿಸಿರುವುದನ್ನು ಮಾಡುವುದರಲ್ಲಿ ಪೈಗಂಬರ್‌ರವರಿಗೆ ಯಾವುದೇ ದೋಷವಿರುವುದಿಲ್ಲ. ಇಂತಹ ಕ್ರಮವು ಮೊದಲು ಗತಿಸಿದ ಪೈಗಂಬರರ ಮೇಲೂ ಜಾರಿಯಲ್ಲಿತ್ತು ಮತ್ತು ಅಲ್ಲಾಹನ ಆಜ್ಞೆಯು ನಿರ್ಧರಿಸಲಾದ ಖಚಿತ ತೀರ್ಪಾಗಿರುತ್ತದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 36-40 — ಸೂರಾ ಅಲ್-ಅಹ್ಜಾಬ್

36وَمَا كَانَ لِمُؤْمِنٍ وَلَا مُؤْمِنَةٍ إِذَا قَضَى اللَّهُ وَرَسُولُهُ أَمْرًا أَن يَكُونَ لَهُمُ الْخِيَرَةُ مِنْ أَمْرِهِمْ ۗ وَمَن يَعْصِ اللَّهَ وَرَسُولَهُ فَقَدْ ضَلَّ ضَلَالًا مُّبِينًا
ಅಲ್ಲಾಹನು ಮತ್ತು ಅವನ ಸಂದೇಶವಾಹಕರು ಒಂದು ವಿಷಯವನ್ನು ತೀರ್ಮಾನಿಸಿದ ಬಳಿಕ ಸತ್ಯವಿಶ್ವಾಸಿ ಪುರುಷನಿಗಾಗಲೀ ಮತ್ತು ಸತ್ಯವಿಶ್ವಾಸಿನಿ ಸ್ತಿçÃಗಾಗಲೀ ತಮ್ಮ ಆ ವಿಷಯದಲ್ಲಿ ಸ್ವತಃ ತೀರ್ಮಾನ ಕೈಗೊಳ್ಳುವ ಹಕ್ಕು ಉಳಿಯಲಾರದು. ಯಾರು ಅಲ್ಲಾಹನ ಹಾಗೂ ಅವನ ಸಂದೇಶವಾಹಕರ ಆಜ್ಞೋಲಂಘನೆ ಮಾಡುತ್ತಾನೋ ಅವನು ಸುಸ್ಪಷ್ಟ ಮಾರ್ಗಭ್ರಷ್ಟತೆಯಲ್ಲಿ ಇರುವನು.
37وَإِذْ تَقُولُ لِلَّذِي أَنْعَمَ اللَّهُ عَلَيْهِ وَأَنْعَمْتَ عَلَيْهِ أَمْسِكْ عَلَيْكَ زَوْجَكَ وَاتَّقِ اللَّهَ وَتُخْفِي فِي نَفْسِكَ مَا اللَّهُ مُبْدِيهِ وَتَخْشَى النَّاسَ وَاللَّهُ أَحَقُّ أَن تَخْشَاهُ ۖ فَلَمَّا قَضَىٰ زَيْدٌ مِّنْهَا وَطَرًا زَوَّجْنَاكَهَا لِكَيْ لَا يَكُونَ عَلَى الْمُؤْمِنِينَ حَرَجٌ فِي أَزْوَاجِ أَدْعِيَائِهِمْ إِذَا قَضَوْا مِنْهُنَّ وَطَرًا ۚ وَكَانَ أَمْرُ اللَّهِ مَفْعُولًا
ಓ ಪೈಗಂಬರರೇ, ಅಲ್ಲಾಹನು ಯಾರಿಗೆ ಅನುಗ್ರಹ ನೀಡಿರುವನೋ ಹಾಗೂ ನೀವು ಅವನ ಮೇಲೆ ಅನುಗ್ರಹ ಮಾಡಿರುವ ಒಬ್ಬ ವ್ಯಕ್ತಿಯೊಂದಿಗೆ (ಝೈದ್) ನೀನು ನಿನ್ನ ಪತ್ನಿಯನ್ನು ಜೊತೆಯಲ್ಲಿ ತಡೆದಿರಿಸು ಮತ್ತು ಅಲ್ಲಾಹನನ್ನು ಭಯಪಡು ಎಂದು ಹೇಳುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ, ಆಗ ಅಲ್ಲಾಹನು ಬಹಿರಂಗಗೊಳಿಸಲಿಚ್ಛಿಸಿದ್ದನ್ನು ನೀವು ಮನಸ್ಸಿನಲ್ಲಿ ಬಚ್ಚಿಟ್ಟಿದ್ದೀರಿ ಮತ್ತು ಜನರನ್ನು ಭಯಪಡುತ್ತಿದೀರಿ. ವಸ್ತುತಃ ಭಯಪಡುವುದಕ್ಕೆ ಹೆಚ್ಚು ಅರ್ಹನು ಅಲ್ಲಾಹನಾಗಿರುವನು. ಹಾಗೆಯೇ ಝೈದ್ ಆಕೆಯೊಂದಿಗೆ ತನ್ನ ಅಪೇಕ್ಷೆಯನ್ನು (ವಿಚ್ಛೇದನ) ಪೂರೈಸಿದಾಗ ನಾವು ಆಕೆಯನ್ನು ನಿಮಗೆ ವಿವಾಹ ಮಾಡಿಸಿಕೊಟ್ಟೆವು. ಇದು ತಮ್ಮ ದತ್ತು ಪುತ್ರರು ತಮ್ಮ ಪತ್ನಿಯರಿಂದ ತಮ್ಮ ಅಪೇಕ್ಷೆಯನ್ನು (ವಿಚ್ಛೇದನೆಯನ್ನು) ಪೂರ್ತಿಕರಿಸಿದ ಬಳಿಕ ಸತ್ಯವಿಶ್ವಾಸಿಗಳಿಗೆ ಅವರನ್ನು ವಿವಾಹವಾಗುವ ವಿಚಾರದಲ್ಲಿ ಯಾವುದೇ ಅಡಚಣೆ ಇರಬಾರದೆಂದಾಗಿರುತ್ತದೆ. ಅಲ್ಲಾಹನ ಆದೇಶ ಜಾರಿಗೆ ಬಂದೇ ತೀರುವುದು.
38مَّا كَانَ عَلَى النَّبِيِّ مِنْ حَرَجٍ فِيمَا فَرَضَ اللَّهُ لَهُ ۖ سُنَّةَ اللَّهِ فِي الَّذِينَ خَلَوْا مِن قَبْلُ ۚ وَكَانَ أَمْرُ اللَّهِ قَدَرًا مَّقْدُورًا
ತನಗೆ ಅಲ್ಲಾಹನು ನಿಶ್ಚಯಗೊಳಿಸಿರುವುದನ್ನು ಮಾಡುವುದರಲ್ಲಿ ಪೈಗಂಬರ್‌ರವರಿಗೆ ಯಾವುದೇ ದೋಷವಿರುವುದಿಲ್ಲ. ಇಂತಹ ಕ್ರಮವು ಮೊದಲು ಗತಿಸಿದ ಪೈಗಂಬರರ ಮೇಲೂ ಜಾರಿಯಲ್ಲಿತ್ತು ಮತ್ತು ಅಲ್ಲಾಹನ ಆಜ್ಞೆಯು ನಿರ್ಧರಿಸಲಾದ ಖಚಿತ ತೀರ್ಪಾಗಿರುತ್ತದೆ.
39الَّذِينَ يُبَلِّغُونَ رِسَالَاتِ اللَّهِ وَيَخْشَوْنَهُ وَلَا يَخْشَوْنَ أَحَدًا إِلَّا اللَّهَ ۗ وَكَفَىٰ بِاللَّهِ حَسِيبًا
ಪೈಗಂಬರರೆAದರೆ ಅಲ್ಲಾಹನ ಸಂದೇಶಗಳನ್ನು ತಲುಪಿಸುವವರು ಮತ್ತು ಅವನನ್ನು ಭಯ ಪಡುವವರು ಹಾಗೂ ಅವನ ಹೊರತು ಇನ್ನಾರನ್ನೂ ಭಯಪಡದವರಾಗಿದ್ದರು. ಮತ್ತು ಲೆಕ್ಕ ವಿಚಾರಣೆಗಾಗಿ ಅಲ್ಲಾಹನೇ ಸಾಕು.
40مَّا كَانَ مُحَمَّدٌ أَبَا أَحَدٍ مِّن رِّجَالِكُمْ وَلَٰكِن رَّسُولَ اللَّهِ وَخَاتَمَ النَّبِيِّينَ ۗ وَكَانَ اللَّهُ بِكُلِّ شَيْءٍ عَلِيمًا
ಮುಹಮ್ಮದ್ ನಿಮ್ಮ ಪುರುಷರ ಪೈಕಿ ಯಾರ ತಂದೆಯೂ ಅಲ್ಲ. ಆದರೆ ಅವರು ಅಲ್ಲಾಹನ ಸಂದೇಶವಾಹಕರೂ ಪೈಗಂಬರರ ಅಂತಿಮ ಘಟ್ಟವಾಗಿದ್ದಾರೆ.
ಅಲ್-ಅಹ್ಜಾಬ್ಕುರಾನ್ ಸೂಚಿ
73ಆಯತ್
MedinanRevelation
38ಆಯತ್

ಅನುವಾದ — ಅಲ್-ಅಹ್ಜಾಬ್ 38

ಸೂರಾ ಅಲ್-ಅಹ್ಜಾಬ್ ಆಯತ್ 38 - ಓದಿ, ಆಲಿಸಿ, ಅನುವಾದ, ಕನ್ನಡ : ತನಗೆ ಅಲ್ಲಾಹನು ನಿಶ್ಚಯಗೊಳಿಸಿರುವುದನ್ನು ಮಾಡುವುದರಲ್ಲಿ ಪೈಗಂಬರ್‌ರವರಿಗೆ ಯಾವುದೇ ದೋಷವಿರುವುದಿಲ್ಲ. ಇಂತಹ ಕ್ರಮವು ಮೊದಲು…

ಸೂರಾ ಆಯತ್ 38/73 — ಸೂರಾ ಅಲ್-ಅಹ್ಜಾಬ್ الأحزاب (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಹ್ಜಾಬ್ ಆಲಿಸಿ, ಸೂರಾ ಅಲ್-ಅಹ್ಜಾಬ್ ಅನುವಾದ, ಸೂರಾ ಅಲ್-ಅಹ್ಜಾಬ್ mp3, ಸೂರಾ ಅಲ್-ಅಹ್ಜಾಬ್ pdf. ಆಯತ್ 36–40. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers