ಅಲ್-ಆರಾಫ್ · 177/206
ಅನುವಾದ ಉಚ್ಚಾರಣೆ — ಸೂರಾ ಅಲ್-ಆರಾಫ್
سَاءَ مَثَلًا الْقَوْمُ الَّذِينَ كَذَّبُوا بِآيَاتِنَا وَأَنفُسَهُمْ كَانُوا يَظْلِمُونَ ۝١٧٧
Saaa`a masalanil qawmul lazeena kazzaboo bi Aayaatinaa wa anfusahum kaanoo yazlimoon
📖 ಕನ್ನಡ ಅರ್ಥ
ನಮ್ಮ ದೃಷ್ಟಾಂತಗಳನ್ನು ನಿರಾಕರಿಸಿದವರ ಉಪಮೆಯು ಅತಿ ನಿಕೃಷ್ಟವಾಗಿದೆ ಮತ್ತು ಅವರು ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗುತ್ತಿದ್ದರು.

🎧 ಆಲಿಸಿ


📜 ಆಯತ್ 175-179 — ಸೂರಾ ಅಲ್-ಆರಾಫ್

175وَاتْلُ عَلَيْهِمْ نَبَأَ الَّذِي آتَيْنَاهُ آيَاتِنَا فَانسَلَخَ مِنْهَا فَأَتْبَعَهُ الشَّيْطَانُ فَكَانَ مِنَ الْغَاوِينَ
ನೀವು ಅವರಿಗೆ ಆ ವ್ಯಕ್ತಿಯ ವೃತ್ತಾಂತವನ್ನು ಓದಿ ಹೇಳಿರಿ; ಅವನಿಗೆ ನಾವು ನಮ್ಮ ದೃಷ್ಟಾಂತಗಳ ಜ್ಞಾನವನ್ನು ನೀಡಿದ್ದೆವು ಅನಂತರ ಅವನು ಅವುಗಳಿಂದ ಹೊರಬಂದುಬಿಟ್ಟನು. ಬಳಿಕ ಶೈತಾನನು ಅವನ ಹಿಂದೆ ಬಿದ್ದನು. ಹೀಗೆ ಅವನು ಪಥಭ್ರಷ್ಟರಲ್ಲಿ ಸೇರಿದನು.
176وَلَوْ شِئْنَا لَرَفَعْنَاهُ بِهَا وَلَٰكِنَّهُ أَخْلَدَ إِلَى الْأَرْضِ وَاتَّبَعَ هَوَاهُ ۚ فَمَثَلُهُ كَمَثَلِ الْكَلْبِ إِن تَحْمِلْ عَلَيْهِ يَلْهَثْ أَوْ تَتْرُكْهُ يَلْهَث ۚ ذَّٰلِكَ مَثَلُ الْقَوْمِ الَّذِينَ كَذَّبُوا بِآيَاتِنَا ۚ فَاقْصُصِ الْقَصَصَ لَعَلَّهُمْ يَتَفَكَّرُونَ
ಮತ್ತು ನಾವು ಇಚ್ಛಿಸುತ್ತಿದ್ದರೆ ಆ ಜ್ಞಾನದ ನಿಮಿತ್ತ ಅವನನ್ನು ಉನ್ನತಕ್ಕೇರಿಸುತ್ತಿದ್ದೆವು. ಆದರೆ ಅವನು ಐಹಿಕತೆಯೆಡೆಗೆ ವಾಲಿ ತನ್ನ ಸ್ವೇಚ್ಛೆಯನ್ನು ಅನುಸರಿಸಿದನು. ಹೀಗೆ ಅವನ ಸ್ಥಿತಿಯು ನಾಯಿಯಂತಾಗಿ ಬಿಟ್ಟಿತು. ನೀನು ಅದನ್ನು ಅಟ್ಟಿದರೂ ಅದು ನಾಲಿಗೆ ಚಾಚಿಕೊಂಡಿರುತ್ತದೆ. ಮತ್ತು ನೀನದನ್ನು ಬಿಟ್ಟರೂ ಅದು ನಾಲಿಗೆ ಚಾಚಿಕೊಂಡಿರುತ್ತದೆ. ನಮ್ಮ ದೃಷ್ಟಾಂತಗಳನ್ನು ನಿರಾಕರಿಸುವವರ ಉಪಮೆ ಇದೇ ಆಗಿರುತ್ತದೆ. ಆದ್ದರಿಂದ ನೀವು ಯಹೂದರಿಗೆ ಇದನ್ನು ವಿವರಿಸಿ ಕೊಡಿರಿ. ಪ್ರಾಯಶಃ ಅವರು ಚಿಂತಿಸಬಹುದು.
177سَاءَ مَثَلًا الْقَوْمُ الَّذِينَ كَذَّبُوا بِآيَاتِنَا وَأَنفُسَهُمْ كَانُوا يَظْلِمُونَ
ನಮ್ಮ ದೃಷ್ಟಾಂತಗಳನ್ನು ನಿರಾಕರಿಸಿದವರ ಉಪಮೆಯು ಅತಿ ನಿಕೃಷ್ಟವಾಗಿದೆ ಮತ್ತು ಅವರು ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗುತ್ತಿದ್ದರು.
178مَن يَهْدِ اللَّهُ فَهُوَ الْمُهْتَدِي ۖ وَمَن يُضْلِلْ فَأُولَٰئِكَ هُمُ الْخَاسِرُونَ
ಅಲ್ಲಾಹನು ಯಾರಿಗೆ ಸನ್ಮಾರ್ಗವನ್ನು ಕರುಣಿಸುವನೋ ಅವನೇ ಸನ್ಮಾರ್ಗವನ್ನು ಪಡೆಯುವವನಾಗಿದ್ದಾನೆ. ಮತ್ತು ಅವನು ಯಾರನ್ನು ಪಥಭ್ರಷ್ಟಗೊಳಿಸುವನೋ ಅವರೇ ನಷ್ಟ ಹೊಂದುವವರಾಗಿದ್ದಾರೆ.
179وَلَقَدْ ذَرَأْنَا لِجَهَنَّمَ كَثِيرًا مِّنَ الْجِنِّ وَالْإِنسِ ۖ لَهُمْ قُلُوبٌ لَّا يَفْقَهُونَ بِهَا وَلَهُمْ أَعْيُنٌ لَّا يُبْصِرُونَ بِهَا وَلَهُمْ آذَانٌ لَّا يَسْمَعُونَ بِهَا ۚ أُولَٰئِكَ كَالْأَنْعَامِ بَلْ هُمْ أَضَلُّ ۚ أُولَٰئِكَ هُمُ الْغَافِلُونَ
ಯಕ್ಷ ಮತ್ತು ಮನುಷ್ಯರ ಪೈಕಿಯ ಅನೇಕ ಜನರನ್ನು ನಾವು ನರಕಕ್ಕಾಗಿ ಸೃಷ್ಟಿಸಿದ್ದೇವೆ. ಅವರಿಗೆ ಹೃದಯಗಳಿವೆ ಆದರೆ ಅವುಗಳಿಂದ ಅವರು (ಸತ್ಯವನ್ನು) ಗ್ರಹಿಸಿಕೊಳ್ಳಲಾರರು. ಅವರಿಗೆ ಕಣ್ಣುಗಳಿವೆ ಆದರೆ ಅವುಗಳಿಂದ ಅವರು ನೋಡಲಾರರು ಮತ್ತು ಅವರಿಗೆ ಕಿವಿಗಳಿವೆ, ಆದರೆ ಅವುಗಳಿಂದ ಅವರು ಆಲಿಸಲಾರರು. ಅವರು ಜಾನುವಾರುಗಳಂತಿರುವರು, ಹಾಗಲ್ಲ, ಅವುಗಳಿಗಿಂತಲೂ ಹೆಚ್ಚು ದಾರಿಗೆಟ್ಟವರಾಗಿರುತ್ತಾರೆ. ಅವರೇ ಅಲಕ್ಷö್ಯರಾಗಿರುವವರಾಗಿದ್ದಾರೆ.
ಅಲ್-ಆರಾಫ್ಕುರಾನ್ ಸೂಚಿ
206ಆಯತ್
MeccanRevelation
177ಆಯತ್

ಅನುವಾದ — ಅಲ್-ಆರಾಫ್ 177

ಸೂರಾ ಅಲ್-ಆರಾಫ್ ಆಯತ್ 177 - ಓದಿ, ಆಲಿಸಿ, ಅನುವಾದ, ಕನ್ನಡ : ನಮ್ಮ ದೃಷ್ಟಾಂತಗಳನ್ನು ನಿರಾಕರಿಸಿದವರ ಉಪಮೆಯು ಅತಿ ನಿಕೃಷ್ಟವಾಗಿದೆ ಮತ್ತು ಅವರು ಸ್ವತಃ ತಮ್ಮ…

ಸೂರಾ ಆಯತ್ 177/206 — ಸೂರಾ ಅಲ್-ಆರಾಫ್ الأعراف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಆರಾಫ್ ಆಲಿಸಿ, ಸೂರಾ ಅಲ್-ಆರಾಫ್ ಅನುವಾದ, ಸೂರಾ ಅಲ್-ಆರಾಫ್ mp3, ಸೂರಾ ಅಲ್-ಆರಾಫ್ pdf. ಆಯತ್ 175–179. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers