ಅನ್-ನಹ್ಲ್ · 33/128
ಅನುವಾದ ಉಚ್ಚಾರಣೆ — ಸೂರಾ ಅನ್-ನಹ್ಲ್
هَلْ يَنظُرُونَ إِلَّا أَن تَأْتِيَهُمُ الْمَلَائِكَةُ أَوْ يَأْتِيَ أَمْرُ رَبِّكَ ۚ كَذَٰلِكَ فَعَلَ الَّذِينَ مِن قَبْلِهِمْ ۚ وَمَا ظَلَمَهُمُ اللَّهُ وَلَٰكِن كَانُوا أَنفُسَهُمْ يَظْلِمُونَ ۝٣٣
Hal yanzuroona illaaa an taatiyahumul malaaa`ikatu aw yaatiya amru Rabbik; kazaalika fa`alal lazeena min qablihim; wa maa zalamahumul laahu wa laakin kaanoo anfusahum yazlimoon
📖 ಕನ್ನಡ ಅರ್ಥ
ಇವರು ತಮ್ಮ ಬಳಿಗೆ ದೇವಚರರು ಬರಲಿ ಅಥವಾ ನಿಮ್ಮ ಪ್ರಭುವಿನ ಆದೇsÀಶವು ಬರಲಿ ಎಂದೇ ನಿರೀಕ್ಷಿಸುತ್ತಿದ್ದಾರೆಯೇ? ಇವರ ಮುಂಚಿನವರು ಸಹ ಇದೇ ಪ್ರಕಾರ ಮಾಡಿದ್ದರು ಅವರ ಮೇಲೆ ಅಲ್ಲಾಹನು ಯಾವುದೇ ಅಕ್ರಮವನ್ನೆಸಗಲಿಲ್ಲ ಬದಲಾಗಿ ಅವರು ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗುತ್ತಿದ್ದರು.

🎧 ಆಲಿಸಿ


📜 ಆಯತ್ 31-35 — ಸೂರಾ ಅನ್-ನಹ್ಲ್

31جَنَّاتُ عَدْنٍ يَدْخُلُونَهَا تَجْرِي مِن تَحْتِهَا الْأَنْهَارُ ۖ لَهُمْ فِيهَا مَا يَشَاءُونَ ۚ كَذَٰلِكَ يَجْزِي اللَّهُ الْمُتَّقِينَ
ಶಾಶ್ವತ ನಿವಾಸವಾದ ಸ್ವರ್ಗೋದ್ಯಾನಗಳಲ್ಲಿ ಅವರು ಪ್ರವೇಶಿಸುವರು. ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು. ಅಲ್ಲಿ ಅವರು ಇಚ್ಛಿಸುವುದೆಲ್ಲವೂ ಅವರಿಗಿರುವುದು. ಅಲ್ಲಾಹನು ಭಯ ಭಕ್ತಿಯುಳ್ಳವರಿಗೆ ಇದೇ ಪ್ರಕಾರ ಪ್ರತಿಫಲ ನೀಡುತ್ತಾನೆ.
32الَّذِينَ تَتَوَفَّاهُمُ الْمَلَائِكَةُ طَيِّبِينَ ۙ يَقُولُونَ سَلَامٌ عَلَيْكُمُ ادْخُلُوا الْجَنَّةَ بِمَا كُنتُمْ تَعْمَلُونَ
ಮಲಕ್‌ಗಳು ಅವರ ಪ್ರಾಣವನ್ನು ಅವರು ಪರಿಶುದ್ಧರಾಗಿರುವ ಸ್ಥಿತಿಯಲ್ಲಿ ವಶಪಡಿಸಿಕೊಳ್ಳುವರು. ನಿಮ್ಮ ಮೇಲೆ ಶಾಂತಿ ಇರಲಿ. ನೀವು ಮಾಡುತ್ತಿದ್ದಂತಹ ಕರ್ಮಗಳ ಫಲವಾಗಿ ಸ್ವರ್ಗೋದ್ಯಾನವನ್ನು ಪ್ರವೇಶಿಸಿರಿ ಎನ್ನುವರು.
33هَلْ يَنظُرُونَ إِلَّا أَن تَأْتِيَهُمُ الْمَلَائِكَةُ أَوْ يَأْتِيَ أَمْرُ رَبِّكَ ۚ كَذَٰلِكَ فَعَلَ الَّذِينَ مِن قَبْلِهِمْ ۚ وَمَا ظَلَمَهُمُ اللَّهُ وَلَٰكِن كَانُوا أَنفُسَهُمْ يَظْلِمُونَ
ಇವರು ತಮ್ಮ ಬಳಿಗೆ ದೇವಚರರು ಬರಲಿ ಅಥವಾ ನಿಮ್ಮ ಪ್ರಭುವಿನ ಆದೇsÀಶವು ಬರಲಿ ಎಂದೇ ನಿರೀಕ್ಷಿಸುತ್ತಿದ್ದಾರೆಯೇ? ಇವರ ಮುಂಚಿನವರು ಸಹ ಇದೇ ಪ್ರಕಾರ ಮಾಡಿದ್ದರು ಅವರ ಮೇಲೆ ಅಲ್ಲಾಹನು ಯಾವುದೇ ಅಕ್ರಮವನ್ನೆಸಗಲಿಲ್ಲ ಬದಲಾಗಿ ಅವರು ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗುತ್ತಿದ್ದರು.
34فَأَصَابَهُمْ سَيِّئَاتُ مَا عَمِلُوا وَحَاقَ بِهِم مَّا كَانُوا بِهِ يَسْتَهْزِئُونَ
ಕೊನಗೆ ಅವರು ಎಸಗಿರುವ ದುಷ್ಕೃತ್ಯಗಳ ಪರಿಣಾಮವು ಅವರಿಗೆ ಎರಗಿತು. ಮತ್ತು ಅವರು ಯಾವುದನ್ನು ಪರಿಹಾಸ್ಯ ಮಾಡುತ್ತಿದ್ದರೋ ಅದು ಅವರನ್ನು ಆವರಿಸಿಬಿಟ್ಟಿತು.
35وَقَالَ الَّذِينَ أَشْرَكُوا لَوْ شَاءَ اللَّهُ مَا عَبَدْنَا مِن دُونِهِ مِن شَيْءٍ نَّحْنُ وَلَا آبَاؤُنَا وَلَا حَرَّمْنَا مِن دُونِهِ مِن شَيْءٍ ۚ كَذَٰلِكَ فَعَلَ الَّذِينَ مِن قَبْلِهِمْ ۚ فَهَلْ عَلَى الرُّسُلِ إِلَّا الْبَلَاغُ الْمُبِينُ
ಬಹುದೇವಾರಾಧಕರು ಹೇಳುತ್ತಾರೆ: ಅಲ್ಲಾಹನು ಇಚ್ಛಿಸಿರುತ್ತಿದ್ದರೆ ನಾವಾಗಲಿ, ನಮ್ಮ ಪೂರ್ವಜರಾಗಲಿ ಅವನ ಹೊರತು ಬೇರಾವುದನ್ನೂ ಆರಾಧಿಸುತ್ತಿರಲಿಲ್ಲ ಮತ್ತು ಅವನ ಆಜ್ಞೆಯ ಹೊರತು ನಾವೇನನ್ನೂ ನಿಷಿದ್ಧ ಮಾಡುತ್ತಿರಲಿಲ್ಲ. ಇವರ ಮುಂಚಿನವರೂ ಹೀಗೆ ಮಾಡಿದ್ದರು. ಸಂದೇಶವಾಹಕರ ಮೇಲಂತೂ ಸ್ಪಷ್ಟವಾಗಿ ಸಂದೇಶ ತಲುಪಿಸುವ ಹೊರತು ಬೇರೇನಾದರೂ ಹೊಣೆಗಾರಿಕೆ ಇದೆಯೇ?
ಅನ್-ನಹ್ಲ್ಕುರಾನ್ ಸೂಚಿ
128ಆಯತ್
MeccanRevelation
33ಆಯತ್

ಅನುವಾದ — ಅನ್-ನಹ್ಲ್ 33

ಸೂರಾ ಅನ್-ನಹ್ಲ್ ಆಯತ್ 33 - ಓದಿ, ಆಲಿಸಿ, ಅನುವಾದ, ಕನ್ನಡ : ಇವರು ತಮ್ಮ ಬಳಿಗೆ ದೇವಚರರು ಬರಲಿ ಅಥವಾ ನಿಮ್ಮ ಪ್ರಭುವಿನ ಆದೇsÀಶವು ಬರಲಿ…

ಸೂರಾ ಆಯತ್ 33/128 — ಸೂರಾ ಅನ್-ನಹ್ಲ್ النحل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಹ್ಲ್ ಆಲಿಸಿ, ಸೂರಾ ಅನ್-ನಹ್ಲ್ ಅನುವಾದ, ಸೂರಾ ಅನ್-ನಹ್ಲ್ mp3, ಸೂರಾ ಅನ್-ನಹ್ಲ್ pdf. ಆಯತ್ 31–35. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers