ಮರ್ಯಮ್ · 45/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
يَا أَبَتِ إِنِّي أَخَافُ أَن يَمَسَّكَ عَذَابٌ مِّنَ الرَّحْمَٰنِ فَتَكُونَ لِلشَّيْطَانِ وَلِيًّا ۝٤٥
Yaaa abati innee akhaafu ai yamssaka `azaabum minar Rahmaani fatakoona lish Shaitaani waliyyaa
📖 ಕನ್ನಡ ಅರ್ಥ
ಓ ನನ್ನ ಪ್ರಿಯ ತಂದೆಯೇ, ಪರಮದಯಾಮಯನಾದ ಅಲ್ಲಾಹನಿಂದ ಯಾವುದದರೊಂದು ಯಾತನೆಯು ನಿಮಗೆ ತಗಲಿ ನೀವು ಶೈತಾನನ ಮಿತ್ರರಾಗಿ ಬಿಡುವಿರೆಂದು ನಾನು ಭಯಪಡುತ್ತೇನೆ.

🎧 ಆಲಿಸಿ


📜 ಆಯತ್ 43-47 — ಸೂರಾ ಮರ್ಯಮ್

43يَا أَبَتِ إِنِّي قَدْ جَاءَنِي مِنَ الْعِلْمِ مَا لَمْ يَأْتِكَ فَاتَّبِعْنِي أَهْدِكَ صِرَاطًا سَوِيًّا
ಓ ನನ್ನ ಪ್ರಿಯ ತಂದೆಯೇ ನಿಮಗೆ ಬಂದಿರದAತಹ ಜ್ಞಾನ ನನಗೆ ಬಂದಿದೆ. ಆದ್ದರಿಂದ ನೀವು ನನ್ನನ್ನು ಅನುಸರಿಸಿರಿ.ನಾನು ನಿಮಗೆ ಅತ್ಯಂತ ನೇರಮಾರ್ಗದೆಡೆಗೆ ಮುನ್ನಡೆಸುವೆನು.
44يَا أَبَتِ لَا تَعْبُدِ الشَّيْطَانَ ۖ إِنَّ الشَّيْطَانَ كَانَ لِلرَّحْمَٰنِ عَصِيًّا
ಓ ನನ್ನ ಪ್ರಿಯ ತಂದೆಯೆ, ನೀವು ಶೈತಾನನನ್ನು ಆರಾಧಿಸಬೇಡಿರಿ. ಶೈತಾನನು ಪರಮ ದಯಾಮಯನಾದ ಅಲ್ಲಾಹನ ಧಿಕ್ಕಾರಿಯಾಗಿದ್ದಾನೆ.
45يَا أَبَتِ إِنِّي أَخَافُ أَن يَمَسَّكَ عَذَابٌ مِّنَ الرَّحْمَٰنِ فَتَكُونَ لِلشَّيْطَانِ وَلِيًّا
ಓ ನನ್ನ ಪ್ರಿಯ ತಂದೆಯೇ, ಪರಮದಯಾಮಯನಾದ ಅಲ್ಲಾಹನಿಂದ ಯಾವುದದರೊಂದು ಯಾತನೆಯು ನಿಮಗೆ ತಗಲಿ ನೀವು ಶೈತಾನನ ಮಿತ್ರರಾಗಿ ಬಿಡುವಿರೆಂದು ನಾನು ಭಯಪಡುತ್ತೇನೆ.
46قَالَ أَرَاغِبٌ أَنتَ عَنْ آلِهَتِي يَا إِبْرَاهِيمُ ۖ لَئِن لَّمْ تَنتَهِ لَأَرْجُمَنَّكَ ۖ وَاهْجُرْنِي مَلِيًّا
ಅವನು (ತಂದೆ) ಉತ್ತರಿಸಿದನು: ಓ ಇಬ್ರಾಹೀಮ್, ನೀನು ನನ್ನ ಆರಾಧ್ಯರಿಂದ ವಿಮುಖನಾದೆಯಾ? ಕೇಳು, ನೀನು ಈ ನಿಲುವನ್ನು ತೊರೆಯದಿದ್ದರೆ ನಾನು ನಿನ್ನನ್ನು ಕಲ್ಲೆಸೆದು ಕೊಂದುಬಿಡುತ್ತೇನೆ. ಹೋಗು, ನೀನು ಒಂದು ದೀರ್ಘ ಕಾಲ ನನ್ನಿಂದ ದೂರವಾಗು.
47قَالَ سَلَامٌ عَلَيْكَ ۖ سَأَسْتَغْفِرُ لَكَ رَبِّي ۖ إِنَّهُ كَانَ بِي حَفِيًّا
ಇಬ್ರಾಹೀಮ್ ಹೇಳಿದರು: ನಿಮ್ಮ ಮೇಲೆ ಶಾಂತಿಯಿರಲಿ. ನಾನು ನಿಮಗಾಗಿ ನನ್ನ ಪ್ರಭುವಿನಲ್ಲಿ ಕ್ಷಮೆಯಾಚಿಸುತ್ತಲಿರುವೆನು. ಅವನು ನನ್ನ ಮೇಲೆ ತುಂಬಾ ಕೃಪೆಯುಳ್ಳವನಾಗಿದ್ದಾನೆ.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
45ಆಯತ್

ಅನುವಾದ — ಮರ್ಯಮ್ 45

ಸೂರಾ ಮರ್ಯಮ್ ಆಯತ್ 45 - ಓದಿ, ಆಲಿಸಿ, ಅನುವಾದ, ಕನ್ನಡ : ಓ ನನ್ನ ಪ್ರಿಯ ತಂದೆಯೇ, ಪರಮದಯಾಮಯನಾದ ಅಲ್ಲಾಹನಿಂದ ಯಾವುದದರೊಂದು ಯಾತನೆಯು ನಿಮಗೆ ತಗಲಿ…

ಸೂರಾ ಆಯತ್ 45/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 43–47. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers