ಅನ್-ನೂರ್ · 38/64
ಅನುವಾದ ಉಚ್ಚಾರಣೆ — ಸೂರಾ ಅನ್-ನೂರ್
لِيَجْزِيَهُمُ اللَّهُ أَحْسَنَ مَا عَمِلُوا وَيَزِيدَهُم مِّن فَضْلِهِ ۗ وَاللَّهُ يَرْزُقُ مَن يَشَاءُ بِغَيْرِ حِسَابٍ ۝٣٨
Liyajziyahumul laahu ahsana maa `amiloo wa yazeedahum min fadlih; wal laahu yarzuqu mai yashaaa`u bighairi hisaab
📖 ಕನ್ನಡ ಅರ್ಥ
ಇದು ಅಲ್ಲಾಹನು ಅವರ ಉತ್ತಮ ಕರ್ಮಗಳಿಗೆ ಅತ್ಯುತ್ತಮವಾದ ಪ್ರತಿಫಲ ನೀಡಲೆಂದು ಮತ್ತು ತನ್ನ ಅನುಗ್ರದಿಂದ ಇನ್ನಷ್ಟು ಹೆಚ್ಚು ನೀಡಲೆಂದಾಗಿದೆ. ಅಲ್ಲಾಹನು ತಾನಿಚ್ಛಿಸಿದವರಿಗೆ ಲೆಕ್ಕಾತೀತ ಜೀವನಾಧಾರವನ್ನು ನೀಡುತ್ತಾನೆ.

🎧 ಆಲಿಸಿ


📜 ಆಯತ್ 36-40 — ಸೂರಾ ಅನ್-ನೂರ್

36فِي بُيُوتٍ أَذِنَ اللَّهُ أَن تُرْفَعَ وَيُذْكَرَ فِيهَا اسْمُهُ يُسَبِّحُ لَهُ فِيهَا بِالْغُدُوِّ وَالْآصَالِ
ಆ ಭವನಗಳಲ್ಲಿ (ಮಸೀದಿಗಳಲ್ಲಿ) ಅವುಗಳನ್ನು ಉನ್ನತ ಗೊಳಿಸಲು, ಅವುಗಲ್ಲಿ ತನ್ನ ನಾಮಸ್ಮರಣೆ ಮಾಡಲು ಅಲ್ಲಾಹನು ಆದೇಶಿಸಿರುವನು. ಅವುಗಳಲ್ಲಿ ಇಂತಹ ಜನರು ಅಲ್ಲಾಹನ ಪಾವಿತ್ರö್ಯವನ್ನು ಸಂಜೆ ಮುಂಜಾನೆಯಲ್ಲೂ, ಸ್ತುತಿಸುತ್ತಾರೆ.
37رِجَالٌ لَّا تُلْهِيهِمْ تِجَارَةٌ وَلَا بَيْعٌ عَن ذِكْرِ اللَّهِ وَإِقَامِ الصَّلَاةِ وَإِيتَاءِ الزَّكَاةِ ۙ يَخَافُونَ يَوْمًا تَتَقَلَّبُ فِيهِ الْقُلُوبُ وَالْأَبْصَارُ
(ಹೀಗೆ ಸ್ತುತಿಸುವ) ಜನರಿಗೆ ಯಾವ ವ್ಯಾಪಾರವಾಗಲೀ, ಕ್ರಯವಿಕ್ರಯವಾಗಲೀ, ಅಲ್ಲಾಹನ ಸ್ಮರಣೆಯಿಂದಲೂ ನಮಾಝ್ ಸಂಸ್ಥಾಪಿಸುವುದರಿAದಲೂ, ಝಕಾತ್ ನೀಡುವುದರಿಂದಲೂ ಅಲಕ್ಷö್ಯಗೊಳಿಸು ವುದಿಲ್ಲ. ಹೃದಯಗಳು, ದೃಷ್ಟಿಗಳು ಪಲ್ಲಟಗೊಳ್ಳುವ (ಪ್ರಳಯ) ದಿನವನ್ನು ಅವರು ಭಯಪಡುತ್ತಾರೆ.
38لِيَجْزِيَهُمُ اللَّهُ أَحْسَنَ مَا عَمِلُوا وَيَزِيدَهُم مِّن فَضْلِهِ ۗ وَاللَّهُ يَرْزُقُ مَن يَشَاءُ بِغَيْرِ حِسَابٍ
ಇದು ಅಲ್ಲಾಹನು ಅವರ ಉತ್ತಮ ಕರ್ಮಗಳಿಗೆ ಅತ್ಯುತ್ತಮವಾದ ಪ್ರತಿಫಲ ನೀಡಲೆಂದು ಮತ್ತು ತನ್ನ ಅನುಗ್ರದಿಂದ ಇನ್ನಷ್ಟು ಹೆಚ್ಚು ನೀಡಲೆಂದಾಗಿದೆ. ಅಲ್ಲಾಹನು ತಾನಿಚ್ಛಿಸಿದವರಿಗೆ ಲೆಕ್ಕಾತೀತ ಜೀವನಾಧಾರವನ್ನು ನೀಡುತ್ತಾನೆ.
39وَالَّذِينَ كَفَرُوا أَعْمَالُهُمْ كَسَرَابٍ بِقِيعَةٍ يَحْسَبُهُ الظَّمْآنُ مَاءً حَتَّىٰ إِذَا جَاءَهُ لَمْ يَجِدْهُ شَيْئًا وَوَجَدَ اللَّهَ عِندَهُ فَوَفَّاهُ حِسَابَهُ ۗ وَاللَّهُ سَرِيعُ الْحِسَابِ
ಸತ್ಯನಿಷೇಧಿಸಿದವರ ಕರ್ಮಗಳು ಮರುಭೂಮಿಯಲ್ಲಿರುವ ಮರಿಚಿಕೆಯಂತೆ, ಬಾಯಾರಿದ ವ್ಯಕ್ತಿಯು ಅದನ್ನು ನೀರೆಂದು ಭಾವಿಸುತ್ತಾನೆ. ಆದರೆ ಅವನು ಅದರೆಡೆಗೆ ತಲುಪಿದಾಗ ಅಲ್ಲಿ ಏನೇನೂ ಕಾಣುವುದಿಲ್ಲ. ಆಗ ಅವನು ಅಲ್ಲಾಹನನ್ನು ತನ್ನ ಬಳಿ ಕಾಣುವನು. ಅಲ್ಲಾಹನು ಅವನ ಲೆಕ್ಕವನ್ನು ಪರಿಪೂರ್ಣವಾಗಿ ನೀಡಿ ಬಿಡುವನು. ಅಲ್ಲಾಹನು ಅತೀ ಶೀಘ್ರವಾಗಿ ಲೆಕ್ಕವಿಚಾರಣೆ ನಡೆಸುವವನಾಗಿದ್ದಾನೆ.
40أَوْ كَظُلُمَاتٍ فِي بَحْرٍ لُّجِّيٍّ يَغْشَاهُ مَوْجٌ مِّن فَوْقِهِ مَوْجٌ مِّن فَوْقِهِ سَحَابٌ ۚ ظُلُمَاتٌ بَعْضُهَا فَوْقَ بَعْضٍ إِذَا أَخْرَجَ يَدَهُ لَمْ يَكَدْ يَرَاهَا ۗ وَمَن لَّمْ يَجْعَلِ اللَّهُ لَهُ نُورًا فَمَا لَهُ مِن نُّورٍ
ಅಥವಾ (ಅವರ ಕರ್ಮಗಳು) ಆಳವಾದ ಸಾಗರದ ಅಂಧಕಾರಗಳAತಿದೆ. ಅದರ ಮೇಲೆ ಅಲೆಯು ಆವರಿಸಿದೆ. ಅದರ ಮೇಲೆ ಇನ್ನೊಂದು ಅಲೆಯಿದ್ದು ಅದರ ಮೇಲೆ ಮೋಡವು ಕವಿದಿದೆ. ಅಂಧಕಾರದ ಮೇಲೆ ಅಂಧಕಾರ ಕವಿದಿದೆ. ಅವನು ತನ್ನ ಕೈಯನ್ನು ಚಾಚಿದರೂ ಅದನ್ನವನು ಕಾಣಲಾರ ಯಾರಿಗೆ ಅಲ್ಲಾಹನು ಪ್ರಕಾಶವನ್ನು ನೀಡುವುದಿಲ್ಲವೋ ಅವನಿಗೆ ಯಾವ ಪ್ರಕಾಶವಿರುವುದಿಲ್ಲ.
ಅನ್-ನೂರ್ಕುರಾನ್ ಸೂಚಿ
64ಆಯತ್
MedinanRevelation
38ಆಯತ್

ಅನುವಾದ — ಅನ್-ನೂರ್ 38

ಸೂರಾ ಅನ್-ನೂರ್ ಆಯತ್ 38 - ಓದಿ, ಆಲಿಸಿ, ಅನುವಾದ, ಕನ್ನಡ : ಇದು ಅಲ್ಲಾಹನು ಅವರ ಉತ್ತಮ ಕರ್ಮಗಳಿಗೆ ಅತ್ಯುತ್ತಮವಾದ ಪ್ರತಿಫಲ ನೀಡಲೆಂದು ಮತ್ತು ತನ್ನ…

ಸೂರಾ ಆಯತ್ 38/64 — ಸೂರಾ ಅನ್-ನೂರ್ النور (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನೂರ್ ಆಲಿಸಿ, ಸೂರಾ ಅನ್-ನೂರ್ ಅನುವಾದ, ಸೂರಾ ಅನ್-ನೂರ್ mp3, ಸೂರಾ ಅನ್-ನೂರ್ pdf. ಆಯತ್ 36–40. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers