ಆಲ್-ಇಮ್ರಾನ್ · 77/200
ಅನುವಾದ ಉಚ್ಚಾರಣೆ — ಸೂರಾ ಆಲ್-ಇಮ್ರಾನ್
إِنَّ الَّذِينَ يَشْتَرُونَ بِعَهْدِ اللَّهِ وَأَيْمَانِهِمْ ثَمَنًا قَلِيلًا أُولَٰئِكَ لَا خَلَاقَ لَهُمْ فِي الْآخِرَةِ وَلَا يُكَلِّمُهُمُ اللَّهُ وَلَا يَنظُرُ إِلَيْهِمْ يَوْمَ الْقِيَامَةِ وَلَا يُزَكِّيهِمْ وَلَهُمْ عَذَابٌ أَلِيمٌ ۝٧٧
Innal lazeena yashtaroona bi`ahdil laahi wa aymaanihim samanan qaleelan ulaaa`ika laa khalaaqa lahum fil Aakhirati wa laa yukallimuhumul laahu wa laa yanzuru ilaihim Yawmal Qiyaamati wa laa yuzakkeehim wa lahum `azabun `aleem
📖 ಕನ್ನಡ ಅರ್ಥ
ನಿಸ್ಸಂಶಯವಾಗಿಯು ಯಾರು ಅಲ್ಲಾಹನ ಕರಾರು ಮತ್ತು ತಮ್ಮ ಶಪಥಗಳನ್ನು ತುಚ್ಛ ಬೆಲೆಗೆ ಮಾರುತ್ತಾರೋ ಅವರಿಗೆ ಪರಲೋಕದಲ್ಲಿ ಯಾವುದೇ ಪಾಲಿಲ್ಲ. ಪುನರುತ್ಥಾನ ದಿನದಂದು ಅಲ್ಲಾಹನು ಅವರೊಂದಿಗೆ ಮಾತನಾಡುವುದಿಲ್ಲ, ಅವರ ಕಡೆಗೆ ನೋಡುವುದಿಲ್ಲ, ಅವರನ್ನು ಶುದ್ಧೀಕರಿಸುವುದಿಲ್ಲ ಮತ್ತು ಅವರಿಗೆ ಯಾತನಾಮಯ ಶಿಕ್ಷೆಯಿದೆ.

🎧 ಆಲಿಸಿ


📜 ಆಯತ್ 75-79 — ಸೂರಾ ಆಲ್-ಇಮ್ರಾನ್

75۞ وَمِنْ أَهْلِ الْكِتَابِ مَنْ إِن تَأْمَنْهُ بِقِنطَارٍ يُؤَدِّهِ إِلَيْكَ وَمِنْهُم مَّنْ إِن تَأْمَنْهُ بِدِينَارٍ لَّا يُؤَدِّهِ إِلَيْكَ إِلَّا مَا دُمْتَ عَلَيْهِ قَائِمًا ۗ ذَٰلِكَ بِأَنَّهُمْ قَالُوا لَيْسَ عَلَيْنَا فِي الْأُمِّيِّينَ سَبِيلٌ وَيَقُولُونَ عَلَى اللَّهِ الْكَذِبَ وَهُمْ يَعْلَمُونَ
(ಗ್ರಂಥದವರಲ್ಲಿ ಇಂತಹ) ಕೆಲವು ಪ್ರಾಮಾಣಿಕರಾಗಿದ್ದಾರೆ. ಒಂದು ಚಿನ್ನದ ಭಂಡಾರವನ್ನು ನಂಬಿಕೆಯಿAದ ಒಪ್ಪಿಸಿದರೂ ಅದನ್ನು ನಿಮಗೆ ಮರಳಿಸುವರು ಮತ್ತು ಅವರಲ್ಲಿ ಇನ್ನು ಕೆಲವರು ವಂಚಕರಿದ್ದಾರೆ ಅವರಿಗೆ ಒಂದು ದೀನಾರನ್ನೂ (ಚಿನ್ನದ ನಾಣ್ಯ) ನಂಬಿಕೆಯಿAದ ಒಪ್ಪಿಸಿದರೂ, ಅವರು ಅದನ್ನು ಮರಳಿಸಲಾರರು. ಆದರೆ ನೀವು ಅವರ ಬೆನ್ನಹಿಂದೆಯೇ ಬಿದ್ದರೆ ಬೇರೆ ವಿಚಾರ. ಇದೇಕೆಂದರೆ ಯಹೂದೇತರ ಹಕ್ಕುಗಳ ವಿಷಯದಲ್ಲಿ ನಮಗೆ ಯಾವುದೇ ಪಾಪವಿಲ್ಲವೆಂದು ಅವರು ಹೇಳುವುದರಿಂದಾಗಿದೆ. ಅವರು ತಿಳಿದೂ ತಿಳಿದೂ ಅಲ್ಲಾಹನ ಮೇಲೆ ಸುಳ್ಳು ಹೇಳುತ್ತಿದ್ದಾರೆ.
76بَلَىٰ مَنْ أَوْفَىٰ بِعَهْدِهِ وَاتَّقَىٰ فَإِنَّ اللَّهَ يُحِبُّ الْمُتَّقِينَ
ಏಕಿಲ್ಲ (ಖಂಡಿತ ಅಲ್ಲಾಹನು ಅವರ ವಿಚಾರಣೆ ನಡೆಸುತ್ತಾನೆ ಆದರೆ) ಯಾರು ತನ್ನ ಕರಾರನ್ನು ನೆರವೇರಿಸುತ್ತಾನೋ ಮತ್ತು ಭಯಭಕ್ತಿಯನ್ನು ಪಾಲಿಸುತ್ತಾನೋ ಖಂಡಿತವಾಗಿಯು ಅಲ್ಲಾಹನು ಭಯಭಕ್ತಿಯುಳ್ಳವರನ್ನು ಪ್ರೀತಿಸುತ್ತಾನೆ.
77إِنَّ الَّذِينَ يَشْتَرُونَ بِعَهْدِ اللَّهِ وَأَيْمَانِهِمْ ثَمَنًا قَلِيلًا أُولَٰئِكَ لَا خَلَاقَ لَهُمْ فِي الْآخِرَةِ وَلَا يُكَلِّمُهُمُ اللَّهُ وَلَا يَنظُرُ إِلَيْهِمْ يَوْمَ الْقِيَامَةِ وَلَا يُزَكِّيهِمْ وَلَهُمْ عَذَابٌ أَلِيمٌ
ನಿಸ್ಸಂಶಯವಾಗಿಯು ಯಾರು ಅಲ್ಲಾಹನ ಕರಾರು ಮತ್ತು ತಮ್ಮ ಶಪಥಗಳನ್ನು ತುಚ್ಛ ಬೆಲೆಗೆ ಮಾರುತ್ತಾರೋ ಅವರಿಗೆ ಪರಲೋಕದಲ್ಲಿ ಯಾವುದೇ ಪಾಲಿಲ್ಲ. ಪುನರುತ್ಥಾನ ದಿನದಂದು ಅಲ್ಲಾಹನು ಅವರೊಂದಿಗೆ ಮಾತನಾಡುವುದಿಲ್ಲ, ಅವರ ಕಡೆಗೆ ನೋಡುವುದಿಲ್ಲ, ಅವರನ್ನು ಶುದ್ಧೀಕರಿಸುವುದಿಲ್ಲ ಮತ್ತು ಅವರಿಗೆ ಯಾತನಾಮಯ ಶಿಕ್ಷೆಯಿದೆ.
78وَإِنَّ مِنْهُمْ لَفَرِيقًا يَلْوُونَ أَلْسِنَتَهُم بِالْكِتَابِ لِتَحْسَبُوهُ مِنَ الْكِتَابِ وَمَا هُوَ مِنَ الْكِتَابِ وَيَقُولُونَ هُوَ مِنْ عِندِ اللَّهِ وَمَا هُوَ مِنْ عِندِ اللَّهِ وَيَقُولُونَ عَلَى اللَّهِ الْكَذِبَ وَهُمْ يَعْلَمُونَ
ನಿಸ್ಸಂಶಯವಾಗಿ ಗ್ರಂಥದವರಲ್ಲಿ ಒಂದು ಗುಂಪು ಗ್ರಂಥವನ್ನು ಓದುವಾಗ ನಾಲಿಗೆಯನ್ನು ತಿರುಚುತ್ತಾರೆ. ಅವರು ಗ್ರಂಥದ ವಿಷಯವನ್ನು ಓದುತ್ತಾರೆಂದು ನೀವು ಭಾವಿಸಲಿಕ್ಕಾಗಿ ವಸ್ತುತಃ ಅದು ಗ್ರಂಥದ ವಿಷಯವಾಗಿರುವುದಿಲ್ಲ. ನಾವು ಓದುತ್ತಿರುವುದೆಲ್ಲ ಅಲ್ಲಾಹನ ಕಡೆಯಿಂದ ಎಂದು ಅವರು ಹೇಳುತ್ತಾರೆ ಆದರೆ ಅದು ಅಲ್ಲಾಹನ ಕಡೆಯಿಂದಾಗಿರುವುದಿಲ್ಲ. ಅವರು ಬೇಕು ಬೇಕೆಂದು ಸುಳ್ಳಾರೋಪವನ್ನು ಅಲ್ಲಾಹನ ಮೇಲೆ ಹೊರಿಸುತ್ತಾರೆ.
79مَا كَانَ لِبَشَرٍ أَن يُؤْتِيَهُ اللَّهُ الْكِتَابَ وَالْحُكْمَ وَالنُّبُوَّةَ ثُمَّ يَقُولَ لِلنَّاسِ كُونُوا عِبَادًا لِّي مِن دُونِ اللَّهِ وَلَٰكِن كُونُوا رَبَّانِيِّينَ بِمَا كُنتُمْ تُعَلِّمُونَ الْكِتَابَ وَبِمَا كُنتُمْ تَدْرُسُونَ
ಅಲ್ಲಾಹನು ಗ್ರಂಥ ಮತ್ತು ಸುಜ್ಞಾನ ಹಾಗೂ ಪ್ರವಾದಿತ್ವವನ್ನು ನೀಡಿದಂತಹ ವ್ಯಕ್ತಿಯು ಜನರೊಂದಿಗೆ ನೀವು ಅಲ್ಲಾಹನ ಹೊರತು ನನ್ನ ದಾಸರಾಗಿರೆಂದು ಹೇಳುವುದು ಅಸಾಧ್ಯವಾಗಿದೆ. ಆದರೆ ನೀವು ಗ್ರಂಥವನ್ನು ಕಲಿಸುತ್ತಿರುವುದರ ನಿಮಿತ್ತ ಮತ್ತು ನಿಮ್ಮ ಈ ಗ್ರಂಥದ ಪಾರಾಯಣ ಮಾಡುವುದರ ನಿಮಿತ್ತ ನೀವು ಪ್ರಭುವಿನ ದಾಸರಾಗಿರಿ (ಎಂದು ಹೇಳುವನು)
ಆಲ್-ಇಮ್ರಾನ್ಕುರಾನ್ ಸೂಚಿ
200ಆಯತ್
MedinanRevelation
77ಆಯತ್

ಅನುವಾದ — ಆಲ್-ಇಮ್ರಾನ್ 77

ಸೂರಾ ಆಲ್-ಇಮ್ರಾನ್ ಆಯತ್ 77 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂಶಯವಾಗಿಯು ಯಾರು ಅಲ್ಲಾಹನ ಕರಾರು ಮತ್ತು ತಮ್ಮ ಶಪಥಗಳನ್ನು ತುಚ್ಛ ಬೆಲೆಗೆ ಮಾರುತ್ತಾರೋ…

ಸೂರಾ ಆಯತ್ 77/200 — ಸೂರಾ ಆಲ್-ಇಮ್ರಾನ್ آل عمران (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಆಲ್-ಇಮ್ರಾನ್ ಆಲಿಸಿ, ಸೂರಾ ಆಲ್-ಇಮ್ರಾನ್ ಅನುವಾದ, ಸೂರಾ ಆಲ್-ಇಮ್ರಾನ್ mp3, ಸೂರಾ ಆಲ್-ಇಮ್ರಾನ್ pdf. ಆಯತ್ 75–79. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers