ಅಲ್-ಅಹ್ಕಾಫ್ · 26/35
ಅನುವಾದ ಉಚ್ಚಾರಣೆ — ಸೂರಾ ಅಲ್-ಅಹ್ಕಾಫ್
وَلَقَدْ مَكَّنَّاهُمْ فِيمَا إِن مَّكَّنَّاكُمْ فِيهِ وَجَعَلْنَا لَهُمْ سَمْعًا وَأَبْصَارًا وَأَفْئِدَةً فَمَا أَغْنَىٰ عَنْهُمْ سَمْعُهُمْ وَلَا أَبْصَارُهُمْ وَلَا أَفْئِدَتُهُم مِّن شَيْءٍ إِذْ كَانُوا يَجْحَدُونَ بِآيَاتِ اللَّهِ وَحَاقَ بِهِم مَّا كَانُوا بِهِ يَسْتَهْزِئُونَ ٢٦
Transliteration
Wa laqad makkannaahum feemaaa im makkannaakum feehi waj`alnaa lahum sam`anw wa absaaranw wa af`idatan famaaa aghnaa `anhum samu`uhum wa laaa absaaruhum wa laaa af`idatuhum min shai`in iz kaanoo yajhadoona bi Aayaatil laahi wa haaqa bihim maa kaanoo bihee yastahzi`oon
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ನಿಜವಾಗಿಯೂ ನಾವು ನಿಮಗೆ ನೀಡಿರÀದಂತಹ ಸಾಮರ್ಥ್ಯಗಳನ್ನು ನಾವು ಅವರಿಗೆ ನೀಡಿದ್ದೆವು ಮತ್ತುನಾವು ಅವರಿಗೆ ಕಿವಿಗಳನ್ನು, ಕಣ್ಣುಗಳನ್ನು ಮತ್ತು ಹೃದಯಗಳನ್ನು ನೀಡಿದ್ದೆವು. ಆದರೆ ಅವರ ಕಿವಿಗಳಾಗಲಿ, ಕಣ್ಣುಗಳಾಗಲಿ, ಅವರ ಹೃದಯಗಳಾಗಲಿ ಅವರಿಗೆ ಯಾವ ಪ್ರಯೋಜನವನ್ನೂ ನೀಡಲಿಲ್ಲ, ಏಕೆಂದರೆ ಅವರು ಅಲ್ಲಾಹನ ಸೂಕ್ತಿಗಳನ್ನು ನಿಷೇಧಿಸುತ್ತಿದ್ದರು ಮತ್ತು ಅವರು ಪರಿಹಾಸ್ಯ ಮಾಡುತ್ತಿದ್ದ ವಸ್ತುವೇ ಅವರನ್ನು ಆವರಿಸಿಬಿಟ್ಟಿತು.
Additional reference in தமிழ்
🎧 ಆಲಿಸಿ
📜 ಆಯತ್ 24-28 — ಸೂರಾ ಅಲ್-ಅಹ್ಕಾಫ್
24فَلَمَّا رَأَوْهُ عَارِضًا مُّسْتَقْبِلَ أَوْدِيَتِهِمْ قَالُوا هَٰذَا عَارِضٌ مُّمْطِرُنَا ۚ بَلْ هُوَ مَا اسْتَعْجَلْتُم بِهِ ۖ رِيحٌ فِيهَا عَذَابٌ أَلِيمٌ
ಅನಂತರ ಅವರು ಶಿಕ್ಷೆಯನ್ನು ತಮ್ಮ ಕಣಿವೆಯೆಡೆಗೆ ಬರುತ್ತಿರುವಂತಹ ಒಂದು ಮೋಡವನ್ನಾಗಿ ಕಂಡಾಗ ಹೇಳಿದರು; ಈ ಮೋಡವು ನಮ್ಮ ಮೇಲೆ ಮಳೆಯನ್ನು ವರ್ಷಿಸಲಿದೆ. (ಇಲ್ಲ) ವಸ್ತುತಃ ಈ ಮೋಡವು ನೀವು ಆತುರಪಟ್ಟುಕೊಳ್ಳುತ್ತಿದ್ದಂತಹ ಶಿಕ್ಷೆ ಆಗಿದೆ. ಇದು ಬಿರುಗಾಳಿಯಾಗಿದ್ದು ಅದರಲ್ಲಿ ವೇದನಾಜನಕ ಯಾತನೆಯಿದೆ.
25تُدَمِّرُ كُلَّ شَيْءٍ بِأَمْرِ رَبِّهَا فَأَصْبَحُوا لَا يُرَىٰ إِلَّا مَسَاكِنُهُمْ ۚ كَذَٰلِكَ نَجْزِي الْقَوْمَ الْمُجْرِمِينَ
ಆ ಗಾಳಿಯು ತನ್ನ ಪ್ರಭುವಿನ ಅಪ್ಪಣೆಯೊಂದಿಗೆ ಪ್ರತಿಯೊಂದು ವಸ್ತುವನ್ನೂ ನಾಶಮಾಡುವುದು, ಕೊನೆಗೆ ಅವರ ವಸತಿಗಳ ಹೊರತು ಬೇರೇನೂ ಕಾಣಿಸದಂತಹ ಅವರ ಸ್ಥಿತಿಯಾಯಿತು, ಇದೇ ಪ್ರಕಾರ ನಾವು ಅಪರಾಧಿ ಜನರಿಗೆ ಶಿಕ್ಷೆಯನ್ನು ನೀಡುತ್ತೇವೆ.
26وَلَقَدْ مَكَّنَّاهُمْ فِيمَا إِن مَّكَّنَّاكُمْ فِيهِ وَجَعَلْنَا لَهُمْ سَمْعًا وَأَبْصَارًا وَأَفْئِدَةً فَمَا أَغْنَىٰ عَنْهُمْ سَمْعُهُمْ وَلَا أَبْصَارُهُمْ وَلَا أَفْئِدَتُهُم مِّن شَيْءٍ إِذْ كَانُوا يَجْحَدُونَ بِآيَاتِ اللَّهِ وَحَاقَ بِهِم مَّا كَانُوا بِهِ يَسْتَهْزِئُونَ
ನಿಜವಾಗಿಯೂ ನಾವು ನಿಮಗೆ ನೀಡಿರÀದಂತಹ ಸಾಮರ್ಥ್ಯಗಳನ್ನು ನಾವು ಅವರಿಗೆ ನೀಡಿದ್ದೆವು ಮತ್ತುನಾವು ಅವರಿಗೆ ಕಿವಿಗಳನ್ನು, ಕಣ್ಣುಗಳನ್ನು ಮತ್ತು ಹೃದಯಗಳನ್ನು ನೀಡಿದ್ದೆವು. ಆದರೆ ಅವರ ಕಿವಿಗಳಾಗಲಿ, ಕಣ್ಣುಗಳಾಗಲಿ, ಅವರ ಹೃದಯಗಳಾಗಲಿ ಅವರಿಗೆ ಯಾವ ಪ್ರಯೋಜನವನ್ನೂ ನೀಡಲಿಲ್ಲ, ಏಕೆಂದರೆ ಅವರು ಅಲ್ಲಾಹನ ಸೂಕ್ತಿಗಳನ್ನು ನಿಷೇಧಿಸುತ್ತಿದ್ದರು ಮತ್ತು ಅವರು ಪರಿಹಾಸ್ಯ ಮಾಡುತ್ತಿದ್ದ ವಸ್ತುವೇ ಅವರನ್ನು ಆವರಿಸಿಬಿಟ್ಟಿತು.
27وَلَقَدْ أَهْلَكْنَا مَا حَوْلَكُم مِّنَ الْقُرَىٰ وَصَرَّفْنَا الْآيَاتِ لَعَلَّهُمْ يَرْجِعُونَ
ನಿಶ್ಚಯವಾಗಿಯು ನಾವು ನಿಮ್ಮ ಸುತ್ತಮುತ್ತಲಿನ ನಾಡುಗಳನ್ನು ನಾಶಗೊಳಿಸಿರುತ್ತೇವೆ ಹಾಗು ಅವರು ಮರಳಲೆಂದು ನಾವು ವಿವಿಧ ಶೈಲಿಯಲ್ಲಿ ದೃಷ್ಟಾಂತಗಳನ್ನು ವಿವರಿಸಿಕೊಟ್ಟಿರುವೆವು.
28فَلَوْلَا نَصَرَهُمُ الَّذِينَ اتَّخَذُوا مِن دُونِ اللَّهِ قُرْبَانًا آلِهَةً ۖ بَلْ ضَلُّوا عَنْهُمْ ۚ وَذَٰلِكَ إِفْكُهُمْ وَمَا كَانُوا يَفْتَرُونَ
ಆದರೆ ಅವರು ಅಲ್ಲಾಹನನ್ನು ಬಿಟ್ಟು ದೇವಸಾಮಿಪ್ಯದ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದ, ಆರಾಧ್ಯರು ಅವರ ಸಹಾಯಕ್ಕೆ ಏಕೆ ಬರಲಿಲ್ಲ ? ಮಾತ್ರವಲ್ಲ ಅವರು ಅವರಿಂದ ಕಣ್ಮರೆಯಾಗಿಬಿಟ್ಟಿದ್ದರು. ವಾಸ್ತವದಲ್ಲಿ ಇದು ಅವರ ಮಿಥ್ಯ ಕಲ್ಪನೆ ಮತ್ತು ಸುಳ್ಳಾರೋಪವಾಗಿತ್ತು.
ಅಲ್-ಅಹ್ಕಾಫ್ಕುರಾನ್ ಸೂಚಿ
35ಆಯತ್
MeccanRevelation
26ಆಯತ್
ಅನುವಾದ — ಅಲ್-ಅಹ್ಕಾಫ್ 26
ಸೂರಾ ಅಲ್-ಅಹ್ಕಾಫ್ ಆಯತ್ 26 - ಓದಿ, ಆಲಿಸಿ, ಅನುವಾದ, ಕನ್ನಡ : ನಿಜವಾಗಿಯೂ ನಾವು ನಿಮಗೆ ನೀಡಿರÀದಂತಹ ಸಾಮರ್ಥ್ಯಗಳನ್ನು ನಾವು ಅವರಿಗೆ ನೀಡಿದ್ದೆವು ಮತ್ತುನಾವು ಅವರಿಗೆ…ಸೂರಾ ಆಯತ್ 26/35 — ಸೂರಾ ಅಲ್-ಅಹ್ಕಾಫ್ الأحقاف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಹ್ಕಾಫ್ ಆಲಿಸಿ, ಸೂರಾ ಅಲ್-ಅಹ್ಕಾಫ್ ಅನುವಾದ, ಸೂರಾ ಅಲ್-ಅಹ್ಕಾಫ್ mp3, ಸೂರಾ ಅಲ್-ಅಹ್ಕಾಫ್ pdf. ಆಯತ್ 24–28. ಕನ್ನಡ ಅರ್ಥ: தமிழ்.
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Monday, September 7, 2026
Don't forget us in your sincere prayers








