ಅನ್-ನಹ್ಲ್ · 70/128
ಅನುವಾದ ಉಚ್ಚಾರಣೆ — ಸೂರಾ ಅನ್-ನಹ್ಲ್
وَاللَّهُ خَلَقَكُمْ ثُمَّ يَتَوَفَّاكُمْ ۚ وَمِنكُم مَّن يُرَدُّ إِلَىٰ أَرْذَلِ الْعُمُرِ لِكَيْ لَا يَعْلَمَ بَعْدَ عِلْمٍ شَيْئًا ۚ إِنَّ اللَّهَ عَلِيمٌ قَدِيرٌ ۝٧٠
Wallaahu khalaqakum suma tatawaffaakum; wa minkum many-yuradu ilaaa arzalil `umuri likai laa ya`lama ba`da `ilmin shai`aa; innal laaha `Aleemun Qadeer
📖 ಕನ್ನಡ ಅರ್ಥ
ಅಲ್ಲಾಹನೇ ನಿಮ್ಮನ್ನು ಸೃಷ್ಟಿಸಿರುವನು. ನಂತರ ನಿಮಗೆ ಮರಣ ನೀಡುವನು. ನಿಮ್ಮ ಪೈಕಿ ಕೆಲವರು ಅರಿವನ್ನು ಹೊಂದಿದ ಬಳಿಕವೂ ಏನೂ ಅರಿಯದವರಂತೆ ಅತೀ ವೃದ್ಧಾಪ್ಯಕ್ಕೆ ಮರಳಿಸಲ್ಪಡುತ್ತಾರೆ. ನಿಸ್ಸಂಶಯವಾಗಿಯು ಅಲ್ಲಾಹನು ಸರ್ವಜ್ಞಾನಿಯೂ, ಸರ್ವ ಸಮರ್ಥನೂ ಆಗಿದ್ದಾನೆ.

🎧 ಆಲಿಸಿ


📜 ಆಯತ್ 68-72 — ಸೂರಾ ಅನ್-ನಹ್ಲ್

68وَأَوْحَىٰ رَبُّكَ إِلَى النَّحْلِ أَنِ اتَّخِذِي مِنَ الْجِبَالِ بُيُوتًا وَمِنَ الشَّجَرِ وَمِمَّا يَعْرِشُونَ
ನಿಮ್ಮ ಪ್ರಭುವು ಜೇನು ನೊಣಕ್ಕೆ ನೀನು ಪರ್ವತಗಳಲ್ಲೂ, ಮರಗಳಲ್ಲೂ ಹಾಗೂ ಜನರಿಂದ ನಿರ್ಮಿಸಲಾದ ಎತ್ತರದ ಕಟ್ಟಡಗಳಲ್ಲೂ ನಿನ್ನ ಗೂಡುಗಳನ್ನು ನಿರ್ಮಿಸು ಎಂದು ಸಂದೇಶ ನೀಡಿದನು .
69ثُمَّ كُلِي مِن كُلِّ الثَّمَرَاتِ فَاسْلُكِي سُبُلَ رَبِّكِ ذُلُلًا ۚ يَخْرُجُ مِن بُطُونِهَا شَرَابٌ مُّخْتَلِفٌ أَلْوَانُهُ فِيهِ شِفَاءٌ لِّلنَّاسِ ۗ إِنَّ فِي ذَٰلِكَ لَآيَةً لِّقَوْمٍ يَتَفَكَّرُونَ
ನೀನು ಎಲ್ಲಾ ವಿಧದ ಫಲಪುಷ್ಪಗಳ ರಸವನ್ನು ಹೀರು ಮತ್ತು ನಿನ್ನ ಪ್ರಭುವಿನ ಸರಳವಾದ ಮಾರ್ಗಗಳಲ್ಲಿ ಸಂಚರಿಸುತ್ತಿರು. ಅವುಗಳ ಹೊಟ್ಟೆಗಳಿಂದ ವಿಭನ್ನ ಬಣ್ಣಗಳ ಪಾನೀಯವು ಹೊರ ಬರುತ್ತದೆ. ಅದರಲ್ಲಿ ಜನರಿಗೆ ಉಪಶಮನವಿದೆ. ನಿಶ್ಚಯವಾಗಿಯೂ ಚಿಂತಕರಿಗೆ ಇದರಲ್ಲೊಂದು ನಿದರ್ಶನವಿದೆ.
70وَاللَّهُ خَلَقَكُمْ ثُمَّ يَتَوَفَّاكُمْ ۚ وَمِنكُم مَّن يُرَدُّ إِلَىٰ أَرْذَلِ الْعُمُرِ لِكَيْ لَا يَعْلَمَ بَعْدَ عِلْمٍ شَيْئًا ۚ إِنَّ اللَّهَ عَلِيمٌ قَدِيرٌ
ಅಲ್ಲಾಹನೇ ನಿಮ್ಮನ್ನು ಸೃಷ್ಟಿಸಿರುವನು. ನಂತರ ನಿಮಗೆ ಮರಣ ನೀಡುವನು. ನಿಮ್ಮ ಪೈಕಿ ಕೆಲವರು ಅರಿವನ್ನು ಹೊಂದಿದ ಬಳಿಕವೂ ಏನೂ ಅರಿಯದವರಂತೆ ಅತೀ ವೃದ್ಧಾಪ್ಯಕ್ಕೆ ಮರಳಿಸಲ್ಪಡುತ್ತಾರೆ. ನಿಸ್ಸಂಶಯವಾಗಿಯು ಅಲ್ಲಾಹನು ಸರ್ವಜ್ಞಾನಿಯೂ, ಸರ್ವ ಸಮರ್ಥನೂ ಆಗಿದ್ದಾನೆ.
71وَاللَّهُ فَضَّلَ بَعْضَكُمْ عَلَىٰ بَعْضٍ فِي الرِّزْقِ ۚ فَمَا الَّذِينَ فُضِّلُوا بِرَادِّي رِزْقِهِمْ عَلَىٰ مَا مَلَكَتْ أَيْمَانُهُمْ فَهُمْ فِيهِ سَوَاءٌ ۚ أَفَبِنِعْمَةِ اللَّهِ يَجْحَدُونَ
ಅಲ್ಲಾಹನು ನಿಮ್ಮಲ್ಲಿನ ಕೆಲವರನ್ನು ಇನ್ನು ಕೆಲವರ ಮೇಲೆ ಜೀವನಾಧಾರದಲ್ಲಿ ಶ್ರೇಷ್ಠಗೊಳಿಸಿರುವನು. ಶ್ರೇಷ್ಠತೆ ನೀಡಲ್ಪಟ್ಟವರು ತಮ್ಮ ಸಂಪತ್ತನ್ನು ತಮ್ಮ ಗುಲಾಮರಿಗೆ ಅವರು ಅದರಲ್ಲಿ ಸಮಾನರಾಗಲು ಒಪ್ಪಿಸಲಾರರು. (ನೀವು ಅಲ್ಲಾಹನ ದಾಸರನ್ನು ಅವನ ಸರಿಮಾನರನ್ನಾಗಿ ಹೇಗೆ ನಿಶ್ಚಯಿಸುವಿರಿ) ಹೀಗಿರುವಾಗ ಅವರು ಅಲ್ಲಾಹನ ಅನುಗ್ರಹಗಳನ್ನು ನಿರಾಕರಿಸುತ್ತಿದ್ದಾರೆಯೇ?
72وَاللَّهُ جَعَلَ لَكُم مِّنْ أَنفُسِكُمْ أَزْوَاجًا وَجَعَلَ لَكُم مِّنْ أَزْوَاجِكُم بَنِينَ وَحَفَدَةً وَرَزَقَكُم مِّنَ الطَّيِّبَاتِ ۚ أَفَبِالْبَاطِلِ يُؤْمِنُونَ وَبِنِعْمَتِ اللَّهِ هُمْ يَكْفُرُونَ
ಅಲ್ಲಾಹನು ನಿಮಗಾಗಿ ನಿಮ್ಮ ವರ್ಗದಿಂದಲೇ ನಿಮ್ಮ ಜೋಡಿಗಳನ್ನುಂಟು ಮಾಡಿದನು ಮತ್ತು ನಿಮ್ಮ ಪತ್ನಿಯರಿಂದ ನಿಮಗಾಗಿ ಮಕ್ಕಳನ್ನೂ, ಮೊಮ್ಮಕ್ಕಳನ್ನೂ ದಯಪಾಲಿಸಿದನು ಹಾಗೂ ನಿಮಗೆ ಶುದ್ಧವಾದ ವಸ್ತುಗಳಿಂದ ಆಹಾರವನ್ನು ನೀಡಿದನು. ಹಾಗಿದ್ದೂ ಜನರು ಸತ್ಯವನ್ನು ಬಿಟ್ಟು, ಮಿಥ್ಯದಲ್ಲಿ ವಿಶ್ವಾಸವಿಡುತ್ತಿದ್ದಾರೆಯೇ? ಮತ್ತು ಅಲ್ಲಾಹನ ಅನುಗ್ರಹಗಳಿಗೆ ಕೃತಘ್ನತೆಯನ್ನು ತೋರುತ್ತಿದ್ದಾರೆಯೇ?
ಅನ್-ನಹ್ಲ್ಕುರಾನ್ ಸೂಚಿ
128ಆಯತ್
MeccanRevelation
70ಆಯತ್

ಅನುವಾದ — ಅನ್-ನಹ್ಲ್ 70

ಸೂರಾ ಅನ್-ನಹ್ಲ್ ಆಯತ್ 70 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನೇ ನಿಮ್ಮನ್ನು ಸೃಷ್ಟಿಸಿರುವನು. ನಂತರ ನಿಮಗೆ ಮರಣ ನೀಡುವನು. ನಿಮ್ಮ ಪೈಕಿ ಕೆಲವರು…

ಸೂರಾ ಆಯತ್ 70/128 — ಸೂರಾ ಅನ್-ನಹ್ಲ್ النحل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಹ್ಲ್ ಆಲಿಸಿ, ಸೂರಾ ಅನ್-ನಹ್ಲ್ ಅನುವಾದ, ಸೂರಾ ಅನ್-ನಹ್ಲ್ mp3, ಸೂರಾ ಅನ್-ನಹ್ಲ್ pdf. ಆಯತ್ 68–72. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers