ಅಲ್-ಬಕರಾ · 11/286
ಅನುವಾದ ಉಚ್ಚಾರಣೆ — ಸೂರಾ ಅಲ್-ಬಕರಾ
وَإِذَا قِيلَ لَهُمْ لَا تُفْسِدُوا فِي الْأَرْضِ قَالُوا إِنَّمَا نَحْنُ مُصْلِحُونَ ۝١١
Wa izaa qeela lahum laa tufsidoo fil ardi qaalo innamaa nahnu muslihoon
📖 ಕನ್ನಡ ಅರ್ಥ
ನೀವು ಭೂಮಿಯಲ್ಲಿ ಕ್ಷೋಭೆಯನ್ನು ಹರಡದಿರಿ ಎಂದು ಅವರೊಡನೆ ಹೇಳಲಾದರೆ, ನಾವು ಸುಧಾರಕರು ಮಾತ್ರ ಆಗಿದ್ದೇವೆ ಎಂದು ಅವರು ಹೇಳುತ್ತಾರೆ.

🎧 ಆಲಿಸಿ


📜 ಆಯತ್ 9-13 — ಸೂರಾ ಅಲ್-ಬಕರಾ

9يُخَادِعُونَ اللَّهَ وَالَّذِينَ آمَنُوا وَمَا يَخْدَعُونَ إِلَّا أَنفُسَهُمْ وَمَا يَشْعُرُونَ
ಅವರು (ತಮ್ಮ ಭ್ರಮೆಯಲ್ಲಿ) ಅಲ್ಲಾಹನನ್ನು ಮತ್ತು ಸತ್ಯವಿಶ್ವಾಸಿಗಳನ್ನು ವಂಚಿಸಲು ಪ್ರಯತ್ನಿಸುತ್ತಾರೆ. ವಾಸ್ತವದಲ್ಲಿ ಅವರು ಸ್ವತಃ ತಮ್ಮನ್ನೇ ವಂಚಿಸಿಕೊಳ್ಳುತ್ತಿದ್ದಾರೆ, ಆದರೆ ಅವರು ಗ್ರಹಿಸುವುದಿಲ್ಲ.
10فِي قُلُوبِهِم مَّرَضٌ فَزَادَهُمُ اللَّهُ مَرَضًا ۖ وَلَهُمْ عَذَابٌ أَلِيمٌ بِمَا كَانُوا يَكْذِبُونَ
ಅವರ ಹೃದಯಗಳಲ್ಲಿ (ಕಪಟದ) ರೋಗವಿದೆ. ಅಲ್ಲಾಹನು ಅವರ ರೋಗವನ್ನು ಇನ್ನಷ್ಟು ಹೆಚ್ಚಿಸಿದನು ಮತ್ತು ಅವರ ಸುಳ್ಳಿನ ನಿಮಿತ್ತ ಅವರಿಗೆ ವೇದನಾಜನಕ ಯಾತನೆಯಿದೆ.
11وَإِذَا قِيلَ لَهُمْ لَا تُفْسِدُوا فِي الْأَرْضِ قَالُوا إِنَّمَا نَحْنُ مُصْلِحُونَ
ನೀವು ಭೂಮಿಯಲ್ಲಿ ಕ್ಷೋಭೆಯನ್ನು ಹರಡದಿರಿ ಎಂದು ಅವರೊಡನೆ ಹೇಳಲಾದರೆ, ನಾವು ಸುಧಾರಕರು ಮಾತ್ರ ಆಗಿದ್ದೇವೆ ಎಂದು ಅವರು ಹೇಳುತ್ತಾರೆ.
12أَلَا إِنَّهُمْ هُمُ الْمُفْسِدُونَ وَلَٰكِن لَّا يَشْعُرُونَ
(ವಿಶ್ವಾಸಿಗಳೆ) ಜಾಗೃತೆ ! ವಾಸ್ತವದಲ್ಲಿ ಅವರೇ ಕ್ಷೋಭೆ ಹರಡುವರು, ಆದರೆ ಅವರಿಗೆ ತಿಳುವಳಿಕೆ ಇರುವುದಿಲ್ಲ.
13وَإِذَا قِيلَ لَهُمْ آمِنُوا كَمَا آمَنَ النَّاسُ قَالُوا أَنُؤْمِنُ كَمَا آمَنَ السُّفَهَاءُ ۗ أَلَا إِنَّهُمْ هُمُ السُّفَهَاءُ وَلَٰكِن لَّا يَعْلَمُونَ
ಇತರ ಜನರು (ಪೈಗಂಬರರ ಅನುಚರರು) ವಿಶ್ವಾಸವಿರಿಸಿದ ಹಾಗೆ ನೀವು ವಿಶ್ವಾಸವಿಸಿರಿ ಎಂದು ಅವರೊಡನೆ ಹೇಳಲಾದರೆ, ಏನು? ಮೂರ್ಖರು ವಿಶ್ವಾಸವಿರಿಸಿದ ಹಾಗೆ ನಾವು ವಿಶ್ವಾಸವಿರಿಸಬೇಕೆ? ಎಂದು ಅವರು ಹೇಳುತ್ತಾರೆ. ಜಾಗೃತೆ! ನಿಜವಾಗಿಯು ಅವರೇ ಮೂರ್ಖರಾಗಿದ್ದಾರೆ. ಆದರೆ ಅವರು ಅರಿಯುವುದಿಲ್ಲ.
ಅಲ್-ಬಕರಾಕುರಾನ್ ಸೂಚಿ
286ಆಯತ್
MedinanRevelation
11ಆಯತ್

ಅನುವಾದ — ಅಲ್-ಬಕರಾ 11

ಸೂರಾ ಅಲ್-ಬಕರಾ ಆಯತ್ 11 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಭೂಮಿಯಲ್ಲಿ ಕ್ಷೋಭೆಯನ್ನು ಹರಡದಿರಿ ಎಂದು ಅವರೊಡನೆ ಹೇಳಲಾದರೆ, ನಾವು ಸುಧಾರಕರು ಮಾತ್ರ…

ಸೂರಾ ಆಯತ್ 11/286 — ಸೂರಾ ಅಲ್-ಬಕರಾ البقرة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬಕರಾ ಆಲಿಸಿ, ಸೂರಾ ಅಲ್-ಬಕರಾ ಅನುವಾದ, ಸೂರಾ ಅಲ್-ಬಕರಾ mp3, ಸೂರಾ ಅಲ್-ಬಕರಾ pdf. ಆಯತ್ 9–13. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers