ಅಲ್-ಬಕರಾ · 88/286
ಅನುವಾದ ಉಚ್ಚಾರಣೆ — ಸೂರಾ ಅಲ್-ಬಕರಾ
وَقَالُوا قُلُوبُنَا غُلْفٌ ۚ بَل لَّعَنَهُمُ اللَّهُ بِكُفْرِهِمْ فَقَلِيلًا مَّا يُؤْمِنُونَ ۝٨٨
Wa qaaloo quloobunaa ghulf; bal la`anahumul laahu bikufrihim faqaleelam maa yu`minoon
📖 ಕನ್ನಡ ಅರ್ಥ
ಮತ್ತು (ಯಹೂದರಿಗೆ ಮುಹಮ್ಮದ್(ಸ)ರವರಲ್ಲಿ) ವಿಶ್ವಾಸವಿಡಿರಿ ಎನ್ನಲಾದಾಗ ಅವರು ಹೇಳುತ್ತಾರೆ; ನಮ್ಮ ಹೃದಯಗಳು ಮುಚ್ಚಲಾಗಿವೆ (ಹಾಗಾಗಿ ನಮಗೆ ಅರ್ಥವಾಗುತ್ತಿಲ್ಲ) ಹಾಗಲ್ಲ ಅವರ ಸತ್ಯನಿಷೇಧದ ನಿಮಿತ್ತ ಅಲ್ಲಾಹನು ಅವರನ್ನು ಶಪಿಸಿದ್ದಾನೆ. ಅವರ ವಿಶ್ವಾಸವು ಅತ್ಯಲ್ಪವೇ ಆಗಿದೆ.

🎧 ಆಲಿಸಿ


📜 ಆಯತ್ 86-90 — ಸೂರಾ ಅಲ್-ಬಕರಾ

86أُولَٰئِكَ الَّذِينَ اشْتَرَوُا الْحَيَاةَ الدُّنْيَا بِالْآخِرَةِ ۖ فَلَا يُخَفَّفُ عَنْهُمُ الْعَذَابُ وَلَا هُمْ يُنصَرُونَ
ಅವರೇ ಪರಲೋಕದ ಬದಲಿಗೆ ಇಹಲೋಕ ಜೀವನವನ್ನು ಖರೀದಿಸಿಕೊಂಡವರು. ಅವರ ಯಾತನೆಯಲ್ಲಿ ಸ್ವಲ್ಪವೂ ಹಗುರಗೊಳಿಸಲಾಗದು ಮತ್ತು ಅವರಿಗೆ ಯಾವ ಸಹಾಯವೂ ದೊರಕಲಾರದು.
87وَلَقَدْ آتَيْنَا مُوسَى الْكِتَابَ وَقَفَّيْنَا مِن بَعْدِهِ بِالرُّسُلِ ۖ وَآتَيْنَا عِيسَى ابْنَ مَرْيَمَ الْبَيِّنَاتِ وَأَيَّدْنَاهُ بِرُوحِ الْقُدُسِ ۗ أَفَكُلَّمَا جَاءَكُمْ رَسُولٌ بِمَا لَا تَهْوَىٰ أَنفُسُكُمُ اسْتَكْبَرْتُمْ فَفَرِيقًا كَذَّبْتُمْ وَفَرِيقًا تَقْتُلُونَ
ನಾವು (ಪೈಗಂಬರ್) ಮೂಸಾರಿಗೆ(ಅ) ಗ್ರಂಥವನ್ನು (ತೌರಾತ್) ದಯಪಾಲಿಸಿದೆವು ಹಾಗೂ ಅವರ ನಂತರ ಅನೇಕ ಸಂದೇಶವಾಹಕರನ್ನು ಕಳುಹಿಸಿದೆವು. ಮರ್ಯಮಳ ಪುತ್ರ ಈಸಾರವರಿಗೆ ಸುಸ್ಪಷ್ಟ ಪುರಾವೆಗಳನ್ನು ದಯಪಾಲಿಸಿದೆವು ಹಾಗೂ ಅವರನ್ನು ನಾವು ಪವಿತ್ರಾತ್ಮನ ಮೂಲಕ ಬಲಪಡಿಸಿದೆವು. ಆದರೆ ನಿಮ್ಮ ಇಚ್ಛೆಗಳಿಗೆ ವಿರುದ್ಧವಾದುದ್ದನ್ನು ಸಂದೇಶವಾಹಕರು ನಿಮ್ಮ ಬಳಿ ತಂದಾಗ ನೀವು ಕೂಡಲೇ ದರ್ಪತೋರಿದಿರಿ. ಹಾಗೆಯೇ ಅವರಲ್ಲಿ ಕೆಲವರನ್ನು ನೀವು ಸುಳ್ಳಾಗಿಸಿದಿರಿ. ಇನ್ನು ಕೆಲವರನ್ನು ವಧಿಸಿದಿರಿ.
88وَقَالُوا قُلُوبُنَا غُلْفٌ ۚ بَل لَّعَنَهُمُ اللَّهُ بِكُفْرِهِمْ فَقَلِيلًا مَّا يُؤْمِنُونَ
ಮತ್ತು (ಯಹೂದರಿಗೆ ಮುಹಮ್ಮದ್(ಸ)ರವರಲ್ಲಿ) ವಿಶ್ವಾಸವಿಡಿರಿ ಎನ್ನಲಾದಾಗ ಅವರು ಹೇಳುತ್ತಾರೆ; ನಮ್ಮ ಹೃದಯಗಳು ಮುಚ್ಚಲಾಗಿವೆ (ಹಾಗಾಗಿ ನಮಗೆ ಅರ್ಥವಾಗುತ್ತಿಲ್ಲ) ಹಾಗಲ್ಲ ಅವರ ಸತ್ಯನಿಷೇಧದ ನಿಮಿತ್ತ ಅಲ್ಲಾಹನು ಅವರನ್ನು ಶಪಿಸಿದ್ದಾನೆ. ಅವರ ವಿಶ್ವಾಸವು ಅತ್ಯಲ್ಪವೇ ಆಗಿದೆ.
89وَلَمَّا جَاءَهُمْ كِتَابٌ مِّنْ عِندِ اللَّهِ مُصَدِّقٌ لِّمَا مَعَهُمْ وَكَانُوا مِن قَبْلُ يَسْتَفْتِحُونَ عَلَى الَّذِينَ كَفَرُوا فَلَمَّا جَاءَهُم مَّا عَرَفُوا كَفَرُوا بِهِ ۚ فَلَعْنَةُ اللَّهِ عَلَى الْكَافِرِينَ
ಅವರ ಬಳಿಯಿರುವ ಗ್ರಂಥವನ್ನು (ತೌರಾತ್) ಸತ್ಯವೆಂದು ದೃಢೀಕರಿಸುವ ಗ್ರಂಥವು (ಕುರ್‌ಆನ್) ಅಲ್ಲಾಹನ ವತಿಯಿಂದ ಅವರ ಬಳಿಗೆ ಬಂದಾಗ, (ಅವರು ಅದನ್ನು ನಿರಾಕರಿಸಿಬಿಟ್ಟರು) ಅವರಾದರೂ ಇದಕ್ಕೆ ಮೊದಲು (ಈ ಗ್ರಂಥದ ಮೂಲಕ) ಸತ್ಯನಿಷೇಧಿಸಿದವರ ವಿರುದ್ಧ ವಿಜಯಕ್ಕಾಗಿ ಹಾತೊರೆಯುತ್ತಿದ್ದರು. ಹಾಗೆÀಯೇ ಅವರು ಅರಿತುಕೊಂಡಿದ್ದ ಗ್ರಂಥವು ಅವರ ಬಳಿಗೆ ಬಂದಾಗ ಅದನ್ನು ನಿಷೇಧಿಸಿ ಬಿಟ್ಟರು. ಸತ್ಯನಿಷೇಧಿಗಳ ಮೇಲೆ ಅಲ್ಲಾಹನ ಶಾಪವಿರಲಿ.
90بِئْسَمَا اشْتَرَوْا بِهِ أَنفُسَهُمْ أَن يَكْفُرُوا بِمَا أَنزَلَ اللَّهُ بَغْيًا أَن يُنَزِّلَ اللَّهُ مِن فَضْلِهِ عَلَىٰ مَن يَشَاءُ مِنْ عِبَادِهِ ۖ فَبَاءُوا بِغَضَبٍ عَلَىٰ غَضَبٍ ۚ وَلِلْكَافِرِينَ عَذَابٌ مُّهِينٌ
ಎಷ್ಟೊಂದು ಕೆಟ್ಟವಸ್ತುವಿಗಾಗಿ ಅವರು ತಮ್ಮನ್ನು ಮಾರಿಕೊಂಡಿದ್ದಾರೆ. ಅಲ್ಲಾಹನು ತನ್ನ ಅನುಗ್ರಹವನ್ನು ತಾನಿಚ್ಚಿಸಿದ ದಾಸನ ಮೇಲೆ ಅವತೀರ್ಣಗೊಳಿಸಿದನು ಎಂಬ ಅಸೂಯೆಯಿಂದ ಅಲ್ಲಾಹನು ಅವತೀರ್ಣಗೊಳಿಸಿದ ಗ್ರಂಥವನ್ನು ಧಿಕ್ಕರಿಸಿಬಿಟ್ಟಿದ್ದಾರೆ. ಆದುದರಿಂದ ಅವರು (ಯಹೂದಿಗಳು)ಕ್ರೋಧದ ಮೇಲೆ ಇನ್ನಷ್ಟು ಕ್ರೋಧಕ್ಕೆ ಪಾತ್ರರಾದರು ಮತ್ತು ಸತ್ಯನಿಷೇಧಿಗಳಿಗೆ ಅಪಮಾನಕರ ಯಾತನೆಯಿದೆ.
ಅಲ್-ಬಕರಾಕುರಾನ್ ಸೂಚಿ
286ಆಯತ್
MedinanRevelation
88ಆಯತ್

ಅನುವಾದ — ಅಲ್-ಬಕರಾ 88

ಸೂರಾ ಅಲ್-ಬಕರಾ ಆಯತ್ 88 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು (ಯಹೂದರಿಗೆ ಮುಹಮ್ಮದ್(ಸ)ರವರಲ್ಲಿ) ವಿಶ್ವಾಸವಿಡಿರಿ ಎನ್ನಲಾದಾಗ ಅವರು ಹೇಳುತ್ತಾರೆ; ನಮ್ಮ ಹೃದಯಗಳು ಮುಚ್ಚಲಾಗಿವೆ…

ಸೂರಾ ಆಯತ್ 88/286 — ಸೂರಾ ಅಲ್-ಬಕರಾ البقرة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬಕರಾ ಆಲಿಸಿ, ಸೂರಾ ಅಲ್-ಬಕರಾ ಅನುವಾದ, ಸೂರಾ ಅಲ್-ಬಕರಾ mp3, ಸೂರಾ ಅಲ್-ಬಕರಾ pdf. ಆಯತ್ 86–90. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers