ಅಶ್-ಶೂರಾ · 50/53
ಅನುವಾದ ಉಚ್ಚಾರಣೆ — ಸೂರಾ ಅಶ್-ಶೂರಾ
أَوْ يُزَوِّجُهُمْ ذُكْرَانًا وَإِنَاثًا ۖ وَيَجْعَلُ مَن يَشَاءُ عَقِيمًا ۚ إِنَّهُ عَلِيمٌ قَدِيرٌ ۝٥٠
Aw yuzawwijuhum zukraananw wa inaasanw wa yaj`alu mai yashaaa`u `aqeemaa; innahoo `Aleemun Qadeer
📖 ಕನ್ನಡ ಅರ್ಥ
ಅಥವಾ ತಾನಿಚ್ಛಿಸುವವರಿಗೆ ಗಂಡು ಹೆಣ್ಣು ಎರಡನ್ನೂ, ಸೇರಿಸಿ ಕೊಡುತ್ತಾನೆ. ಮತ್ತು ತಾನಿಚ್ಛಿಸುವವರನ್ನು ಬಂಜೆಯಾಗಿ ಮಾಡುತ್ತಾನೆ. ಖಂಡಿತವಾಗಿಯು ಅವನು ಸರ್ವಜ್ಞನೂ, ಸರ್ವಶಕ್ತನೂ ಆಗಿದ್ದಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 48-52 — ಸೂರಾ ಅಶ್-ಶೂರಾ

48فَإِنْ أَعْرَضُوا فَمَا أَرْسَلْنَاكَ عَلَيْهِمْ حَفِيظًا ۖ إِنْ عَلَيْكَ إِلَّا الْبَلَاغُ ۗ وَإِنَّا إِذَا أَذَقْنَا الْإِنسَانَ مِنَّا رَحْمَةً فَرِحَ بِهَا ۖ وَإِن تُصِبْهُمْ سَيِّئَةٌ بِمَا قَدَّمَتْ أَيْدِيهِمْ فَإِنَّ الْإِنسَانَ كَفُورٌ
ಇನ್ನು ಅವರೇನಾದರೂ ವಿಮುಖರಾದರೆ ನಾವು ನಿಮ್ಮನ್ನು ಅವರ ಮೇಲ್ವಿಚಾರಕರಾಗಿ ಕಳುಹಿಸಿರುವುದಿಲ್ಲ. ನಿಮ್ಮ ಮೇಲೆ ಸಂದೇಶವನ್ನು ತಲುಪಿಸುವ ಹೊಣೆ ಮಾತ್ರವಿದೆ. ನಿಶ್ಚಯವಾಗಿಯೂ ನಾವು ಮನುಷ್ಯನಿಗೆ ನಮ್ಮ ಕೃಪೆಯಿಂದ ಸವಿಯನ್ನುಣಿಸಿದರೆ ಅವನು ಅದರ ನಿಮಿತ್ತ ಬೀಗುತ್ತಾನೆ. ಮತ್ತು ಅವರಿಗೆ ಅವರ ಕರ್ಮಗಳ ನಿಮಿತ್ತ ಯಾವುದಾದರೂ ಆಪತ್ತು ಬಾಧಿಸಿದರೆ ನಿಸ್ಸಂಶಯವಾಗಿಯೂ ಮನುಷ್ಯನು ಮಹಾ ಕೃತಘ್ನನಾಗಿ ಬಿಡುತ್ತಾನೆ.
49لِّلَّهِ مُلْكُ السَّمَاوَاتِ وَالْأَرْضِ ۚ يَخْلُقُ مَا يَشَاءُ ۚ يَهَبُ لِمَن يَشَاءُ إِنَاثًا وَيَهَبُ لِمَن يَشَاءُ الذُّكُورَ
ಆಕಾಶಗಳ ಮತ್ತು ಭೂಮಿಯ ಅಧಿಪತ್ಯವು ಅಲ್ಲಾಹನದ್ದಾಗಿದೆ. ಅವನು ತಾನಿಚ್ಛಿಸುವುದನ್ನು ಸೃಷ್ಟಿಸುತ್ತಾನೆ. ತಾನಿಚ್ಛಿಸುವವರಿಗೆ ಹೆಣ್ಣುಮಕ್ಕಳನ್ನು ದಯಪಾಲಿಸುತ್ತಾನೆ ಮತ್ತು ತಾನಿಚ್ಛಿಸುವವರಿಗೆ ಗಂಡು ಮಕ್ಕಳನ್ನು ನೀಡುತ್ತಾನೆ.
50أَوْ يُزَوِّجُهُمْ ذُكْرَانًا وَإِنَاثًا ۖ وَيَجْعَلُ مَن يَشَاءُ عَقِيمًا ۚ إِنَّهُ عَلِيمٌ قَدِيرٌ
ಅಥವಾ ತಾನಿಚ್ಛಿಸುವವರಿಗೆ ಗಂಡು ಹೆಣ್ಣು ಎರಡನ್ನೂ, ಸೇರಿಸಿ ಕೊಡುತ್ತಾನೆ. ಮತ್ತು ತಾನಿಚ್ಛಿಸುವವರನ್ನು ಬಂಜೆಯಾಗಿ ಮಾಡುತ್ತಾನೆ. ಖಂಡಿತವಾಗಿಯು ಅವನು ಸರ್ವಜ್ಞನೂ, ಸರ್ವಶಕ್ತನೂ ಆಗಿದ್ದಾನೆ.
51۞ وَمَا كَانَ لِبَشَرٍ أَن يُكَلِّمَهُ اللَّهُ إِلَّا وَحْيًا أَوْ مِن وَرَاءِ حِجَابٍ أَوْ يُرْسِلَ رَسُولًا فَيُوحِيَ بِإِذْنِهِ مَا يَشَاءُ ۚ إِنَّهُ عَلِيٌّ حَكِيمٌ
ಅಲ್ಲಾಹನು ಯಾವೊಬ್ಬ ದಾಸನೊಂದಿಗೆ ಮಾತನಾಡುವುದು ಅಸಂಭವವಾಗಿದೆ. ಆದರೆ ದಿವ್ಯವಾಣಿಯ ಮೂಲಕ ಅಥವಾ ತೆರೆಯ ಹಿಂದಿನಿAದ ಅಥವಾ ಒಬ್ಬ ದೂತನನ್ನು ಕಳುಹಿಸುವುದರ ಮೂಲಕ ಆ ದೂತನು ಅಲ್ಲಾಹನ ಅಪ್ಪಣೆ ಪ್ರಕಾರ ಅವನು ಉದ್ದೇಶಿಸಿರುವುದರ ಸಂದೇಶ ಕೊಡುತ್ತಾನೆ. ನಿಸ್ಸಂಶಯವಾಗಿಯು ಅವನು ಉನ್ನತನೂ, ಯುಕ್ತಿಪೂರ್ಣನೂ ಆಗಿದ್ದಾನೆ.
52وَكَذَٰلِكَ أَوْحَيْنَا إِلَيْكَ رُوحًا مِّنْ أَمْرِنَا ۚ مَا كُنتَ تَدْرِي مَا الْكِتَابُ وَلَا الْإِيمَانُ وَلَٰكِن جَعَلْنَاهُ نُورًا نَّهْدِي بِهِ مَن نَّشَاءُ مِنْ عِبَادِنَا ۚ وَإِنَّكَ لَتَهْدِي إِلَىٰ صِرَاطٍ مُّسْتَقِيمٍ
ಇದೇ ಪ್ರಕಾರ ನಾವು ನಮ್ಮ ಅಪ್ಪಣೆಯಿಂದ ನಿಮ್ಮೆಡೆಗೆ ರೂಹನ್ನು (ಕುರ್‌ಆನ್) ಅವತೀರ್ಣಗೊಳಿಸಿದೆವು. ಇದಕ್ಕೆ ಮೊದಲು ನೀವು ಗ್ರಂಥವೇನೆAದು, ಸತ್ಯವಿಶ್ವಾಸವೇನೆಂದು ತಿಳಿದಿರಲಿಲ್ಲ. ಆದರೆ ನಾವದನ್ನು ಒಂದು ಪ್ರಕಾಶವನ್ನಾಗಿ ಮಾಡಿದೆವು. ಅದರ ಮೂಲಕ ನಮ್ಮ ದಾಸರ ಪೈಕಿ ನಾವಿಚ್ಛಿಸುವವರಿಗೆ ಸನ್ಮಾರ್ಗ ನೀಡುತ್ತೇವೆ. ಖಂಡಿತವಾಗಿಯು ನೀವು ಸನ್ಮಾರ್ಗದೆಡೆಗೆ ಮಾರ್ಗದರ್ಶನ ನೀಡುತ್ತಿರುವಿರಿ.
ಅಶ್-ಶೂರಾಕುರಾನ್ ಸೂಚಿ
53ಆಯತ್
MeccanRevelation
50ಆಯತ್

ಅನುವಾದ — ಅಶ್-ಶೂರಾ 50

ಸೂರಾ ಅಶ್-ಶೂರಾ ಆಯತ್ 50 - ಓದಿ, ಆಲಿಸಿ, ಅನುವಾದ, ಕನ್ನಡ : ಅಥವಾ ತಾನಿಚ್ಛಿಸುವವರಿಗೆ ಗಂಡು ಹೆಣ್ಣು ಎರಡನ್ನೂ, ಸೇರಿಸಿ ಕೊಡುತ್ತಾನೆ. ಮತ್ತು ತಾನಿಚ್ಛಿಸುವವರನ್ನು ಬಂಜೆಯಾಗಿ…

ಸೂರಾ ಆಯತ್ 50/53 — ಸೂರಾ ಅಶ್-ಶೂರಾ الشورى (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶೂರಾ ಆಲಿಸಿ, ಸೂರಾ ಅಶ್-ಶೂರಾ ಅನುವಾದ, ಸೂರಾ ಅಶ್-ಶೂರಾ mp3, ಸೂರಾ ಅಶ್-ಶೂರಾ pdf. ಆಯತ್ 48–52. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers