ಅಲ್-ಆರಾಫ್ · 136/206
ಅನುವಾದ ಉಚ್ಚಾರಣೆ — ಸೂರಾ ಅಲ್-ಆರಾಫ್
فَانتَقَمْنَا مِنْهُمْ فَأَغْرَقْنَاهُمْ فِي الْيَمِّ بِأَنَّهُمْ كَذَّبُوا بِآيَاتِنَا وَكَانُوا عَنْهَا غَافِلِينَ ۝١٣٦
Fantaqamnaa minhum fa aghraqnaahum kazzaboo bi Aayaatinaa wa kaanoo `anhaa ghaafileen
📖 ಕನ್ನಡ ಅರ್ಥ
ಅನಂತರ ನಾವು ಅವರೊಂದಿಗೆ ಪ್ರತೀಕಾರ ಕ್ರಮವನ್ನೂ ಕೈಗೊಂಡೆವು; ಇದು ಅವರು ನಮ್ಮ ದೃಷ್ಟಾಂತಗಳನ್ನು ಧಿಕ್ಕರಿಸುತ್ತಿದ್ದುದ್ದರ ನಿಮಿತ್ತ ಮತ್ತು ಅವುಗಳ ಕುರಿತು ನಿರ್ಲಕ್ಷö್ಯತನ ತೋರುತ್ತಿದ್ದುದ್ದರ ನಿಮಿತ್ತ ನಾವು ಅವರನ್ನು ಸಮುದ್ರದಲ್ಲಿ ಮುಳಿಗಿಸಿ ಬಿಟ್ಟೆವು.

🎧 ಆಲಿಸಿ


📜 ಆಯತ್ 134-138 — ಸೂರಾ ಅಲ್-ಆರಾಫ್

134وَلَمَّا وَقَعَ عَلَيْهِمُ الرِّجْزُ قَالُوا يَا مُوسَى ادْعُ لَنَا رَبَّكَ بِمَا عَهِدَ عِندَكَ ۖ لَئِن كَشَفْتَ عَنَّا الرِّجْزَ لَنُؤْمِنَنَّ لَكَ وَلَنُرْسِلَنَّ مَعَكَ بَنِي إِسْرَائِيلَ
ಮತ್ತು ಶಿಕ್ಷೆಯು ಅವರಿಗೆ ಬಾಧಿಸಿದಾಗ ಅವರು ಹೇಳಿದರು: ಓ ಮೂಸಾ, ನಿಮ್ಮ ಪ್ರಭು ನಿಮ್ಮೊಂದಿಗೆ ಮಾಡಿದ ಕರಾರಿನ ಆಧಾರದಲ್ಲಿ ಅವನೊಂದಿಗೆ ನಮಗಾಗಿ ಪ್ರಾರ್ಥಿಸಿರಿ. ನೀವು ಈ ಶಿಕ್ಷೆಯನ್ನು ನಮ್ಮಿಂದ ಸರಿಸಿ ಬಿಟ್ಟರೆ ಖಂಡಿತವಾಗಿಯು ನಾವು ನಿಮ್ಮ ಮಾತಿನಂತೆ ಸತ್ಯವಿಶ್ವಾಸವಿಡುವೆವು ಮತ್ತು ಇಸ್ರಾಯೀಲ್ ಸಂತತಿಗಳನ್ನು ನಿಮ್ಮ ಜೊತೆ ಕಳುಹಿಸಿ ಕೊಡುವೆವು.
135فَلَمَّا كَشَفْنَا عَنْهُمُ الرِّجْزَ إِلَىٰ أَجَلٍ هُم بَالِغُوهُ إِذَا هُمْ يَنكُثُونَ
ಬಳಿಕ ಅವರು ತಲುಪಬೇಕಾದ ಒಂದು ಅವಧಿಯವರೆಗೆ ನಾವು ಅವರಿಂದ ಆ ಶಿಕ್ಷೆಯನ್ನು ಸರಿಸಿ ಬಿಟ್ಟರೆ ಕೂಡಲೇ ಅವರು ವಾಗ್ದಾನ ಉಲ್ಲಂಘಿಸತೊಡಗುತ್ತಾರೆ.
136فَانتَقَمْنَا مِنْهُمْ فَأَغْرَقْنَاهُمْ فِي الْيَمِّ بِأَنَّهُمْ كَذَّبُوا بِآيَاتِنَا وَكَانُوا عَنْهَا غَافِلِينَ
ಅನಂತರ ನಾವು ಅವರೊಂದಿಗೆ ಪ್ರತೀಕಾರ ಕ್ರಮವನ್ನೂ ಕೈಗೊಂಡೆವು; ಇದು ಅವರು ನಮ್ಮ ದೃಷ್ಟಾಂತಗಳನ್ನು ಧಿಕ್ಕರಿಸುತ್ತಿದ್ದುದ್ದರ ನಿಮಿತ್ತ ಮತ್ತು ಅವುಗಳ ಕುರಿತು ನಿರ್ಲಕ್ಷö್ಯತನ ತೋರುತ್ತಿದ್ದುದ್ದರ ನಿಮಿತ್ತ ನಾವು ಅವರನ್ನು ಸಮುದ್ರದಲ್ಲಿ ಮುಳಿಗಿಸಿ ಬಿಟ್ಟೆವು.
137وَأَوْرَثْنَا الْقَوْمَ الَّذِينَ كَانُوا يُسْتَضْعَفُونَ مَشَارِقَ الْأَرْضِ وَمَغَارِبَهَا الَّتِي بَارَكْنَا فِيهَا ۖ وَتَمَّتْ كَلِمَتُ رَبِّكَ الْحُسْنَىٰ عَلَىٰ بَنِي إِسْرَائِيلَ بِمَا صَبَرُوا ۖ وَدَمَّرْنَا مَا كَانَ يَصْنَعُ فِرْعَوْنُ وَقَوْمُهُ وَمَا كَانُوا يَعْرِشُونَ
ಅವರ ಸ್ಥಾನದಲ್ಲಿ ಅತ್ಯಂತ ದುರ್ಬಲರೆಂದು ಪರಿಗಣಿಸಲ್ಪಟ್ಟಿದ್ದ ಜನರನ್ನು ನಾವು ಸಮೃದ್ಧಿಯನ್ನಿರಿಸಿದ್ದ ಆ ಭೂಪ್ರದೇಶದ ಪೂರ್ವ ಮತ್ತು ಪಶ್ಚಿಮಗಳ ವಾರೀಸುದಾರರನ್ನಾಗಿ ಮಾಡಿಬಿಟ್ಟೆವು. ಈ ರೀತಿ ಇಸ್ರಾಯೀಲರಿಗೆ ನಿನ್ನ ಪ್ರಭುವಿನ ಉತ್ತಮ ವಾಗ್ದಾನವು ನೆರವೇರಿತು, ಏಕೆಂದರೆ ಅವರು ತಾಳ್ಮೆವಹಿಸಿದ್ದರು. ನಾವು ಫಿರ್‌ಔನ್ ಮತ್ತು ಅವನ ಜನತೆಯು ನಿರ್ಮಿಸಿದ ವಸ್ತುಗಳನ್ನೂ, ಮತ್ತು ಎತ್ತರ ಕಟ್ಟಡಗಳನ್ನೂ ಧ್ವಂಸಗೊಳಿಸಿಬಿಟ್ಟೆವು.
138وَجَاوَزْنَا بِبَنِي إِسْرَائِيلَ الْبَحْرَ فَأَتَوْا عَلَىٰ قَوْمٍ يَعْكُفُونَ عَلَىٰ أَصْنَامٍ لَّهُمْ ۚ قَالُوا يَا مُوسَى اجْعَل لَّنَا إِلَٰهًا كَمَا لَهُمْ آلِهَةٌ ۚ قَالَ إِنَّكُمْ قَوْمٌ تَجْهَلُونَ
ಮತ್ತು ನಾವು ಇಸ್ರಾಯೀಲ್ ಸಂತತಿಗಳನ್ನು ಸಮುದ್ರ ದಾಟಿಸಿ ರಕ್ಷಿಸಿದೆವು. ತರುವಾಯ ತಮ್ಮ ಕೆಲವು ವಿಗ್ರಹಗಳ ಮುಂದೆ ಉಪಾಸಕರಾಗಿ ಕೂತಿದ್ದ ಒಂದು ಜನತೆಯ ಮುಂದಿನಿAದ ಅವರು ಹಾದು ಹೋಗುವಾಗ ಹೇಳತೊಡಗಿದರು: ಓ ಮೂಸಾ, ಇವರಿಗೆ ಆರಾಧ್ಯರಿರುವಂತೆಯೇ ನಮಗೂ ಒಂದು ಆರಾಧ್ಯನನ್ನು ಮಾಡಿಕೊಡಿ. ಅವರು ಹೇಳಿದರು: ಖಂಡಿತವಾಗಿಯು ನೀವು ಅವಿವೇಕಿ ಜನರಾಗಿರುವಿರಿ.
ಅಲ್-ಆರಾಫ್ಕುರಾನ್ ಸೂಚಿ
206ಆಯತ್
MeccanRevelation
136ಆಯತ್

ಅನುವಾದ — ಅಲ್-ಆರಾಫ್ 136

ಸೂರಾ ಅಲ್-ಆರಾಫ್ ಆಯತ್ 136 - ಓದಿ, ಆಲಿಸಿ, ಅನುವಾದ, ಕನ್ನಡ : ಅನಂತರ ನಾವು ಅವರೊಂದಿಗೆ ಪ್ರತೀಕಾರ ಕ್ರಮವನ್ನೂ ಕೈಗೊಂಡೆವು; ಇದು ಅವರು ನಮ್ಮ ದೃಷ್ಟಾಂತಗಳನ್ನು…

ಸೂರಾ ಆಯತ್ 136/206 — ಸೂರಾ ಅಲ್-ಆರಾಫ್ الأعراف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಆರಾಫ್ ಆಲಿಸಿ, ಸೂರಾ ಅಲ್-ಆರಾಫ್ ಅನುವಾದ, ಸೂರಾ ಅಲ್-ಆರಾಫ್ mp3, ಸೂರಾ ಅಲ್-ಆರಾಫ್ pdf. ಆಯತ್ 134–138. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers