ಅಲ್-ಅನ್ಆಮ್ · 149/165
ಅನುವಾದ ಉಚ್ಚಾರಣೆ — ಸೂರಾ ಅಲ್-ಅನ್ಆಮ್
قُلْ فَلِلَّهِ الْحُجَّةُ الْبَالِغَةُ ۖ فَلَوْ شَاءَ لَهَدَاكُمْ أَجْمَعِينَ ۝١٤٩
Qul falillaahil hujjatul baalighatu falaw shaaa`a lahadaakum ajma`een
📖 ಕನ್ನಡ ಅರ್ಥ
ಹೇಳಿರಿ: ನಿಮ್ಮ ನೆಪಗಳ ಎದುರು ಪರಿಪೂರ್ಣ ಪುರಾವೆಯು ಅಲ್ಲಾಹನದ್ದಾಗಿದೆ. ಅವನು ಇಚ್ಛಿಸುತ್ತಿದ್ದರೆ ನಿಮ್ಮೆಲ್ಲರನ್ನು ಸನ್ಮಾರ್ಗಕ್ಕೆ ಸೇರಿಸುತ್ತಿದ್ದನು (ಇದು ಅವನ ಯುಕ್ತಿಗೆ ವಿರುದ್ಧವಾಗಿದೆ).

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 147-151 — ಸೂರಾ ಅಲ್-ಅನ್ಆಮ್

147فَإِن كَذَّبُوكَ فَقُل رَّبُّكُمْ ذُو رَحْمَةٍ وَاسِعَةٍ وَلَا يُرَدُّ بَأْسُهُ عَنِ الْقَوْمِ الْمُجْرِمِينَ
ಇನ್ನು ಅವರು ನಿಮ್ಮನ್ನು ನಿರಾಕರಿಸುವುದಾದರೆ ಹೇಳಿರಿ: ನಿಮ್ಮ ಪ್ರಭು ವಿಶಾಲವಾದ ಕರುಣೆಯುಳ್ಳವನಾಗಿದ್ದಾನೆ ಮತ್ತು ಅವನ ಶಿಕ್ಷೆಯನ್ನು ಅಕ್ರಮಿಗಳಾದ ಜನರಿಂದ ಸರಿಸಲಾಗದು.
148سَيَقُولُ الَّذِينَ أَشْرَكُوا لَوْ شَاءَ اللَّهُ مَا أَشْرَكْنَا وَلَا آبَاؤُنَا وَلَا حَرَّمْنَا مِن شَيْءٍ ۚ كَذَٰلِكَ كَذَّبَ الَّذِينَ مِن قَبْلِهِمْ حَتَّىٰ ذَاقُوا بَأْسَنَا ۗ قُلْ هَلْ عِندَكُم مِّنْ عِلْمٍ فَتُخْرِجُوهُ لَنَا ۖ إِن تَتَّبِعُونَ إِلَّا الظَّنَّ وَإِنْ أَنتُمْ إِلَّا تَخْرُصُونَ
ಬಹುದೇವಾರಾಧಕರು ಹೇಳುವರು: ಅಲ್ಲಾಹನು ಇಚ್ಛಿಸುತ್ತಿದ್ದರೆ ನಾವಾಗಲೀ, ನಮ್ಮ ಪೂರ್ವಿಕರಾಗಲೀ ದೇವಸಹಭಾಗಿತ್ವ ಮಾಡುತ್ತಿರಲಿಲ್ಲ ಮತ್ತು ನಾವು ಯಾವ ವಸ್ತುವನ್ನು ನಿಷಿದ್ಧವೆಂದು ಹೇಳುತ್ತಿರಲಿಲ್ಲ. ಇದೇ ರೀತಿ ಇವರ ಮುಂಚಿನವರು ನಿರಾಕಸಿದ್ದರು ಹಾಗೆಯೇ ನಮ್ಮ ಶಿಕ್ಷೆಯನ್ನು ಅವರು ಆಸ್ಪಾದಿಸಿಕೊಂಡರು. ಹೇಳಿರಿ: ನಿಮ್ಮ ಬಳಿ ಯಾವುದಾದರೂ ಪುರಾವೆಯಿದೆಯೇ? ಹಾಗಿದ್ದರೆ ಅದನ್ನು ನಮ್ಮೆದುರಿಗೆ ಪ್ರಕಟಗೊಳಿಸಿರಿ. ನೀವು ಊಹಾಪೋಹಗಳನ್ನು ಮಾತ್ರ ಅನುಸರಿಸುತ್ತಿರುವಿರಿ ಮತ್ತು ಸುಳ್ಳು ಹೇಳುತ್ತಿರುವಿರಿ.
149قُلْ فَلِلَّهِ الْحُجَّةُ الْبَالِغَةُ ۖ فَلَوْ شَاءَ لَهَدَاكُمْ أَجْمَعِينَ
ಹೇಳಿರಿ: ನಿಮ್ಮ ನೆಪಗಳ ಎದುರು ಪರಿಪೂರ್ಣ ಪುರಾವೆಯು ಅಲ್ಲಾಹನದ್ದಾಗಿದೆ. ಅವನು ಇಚ್ಛಿಸುತ್ತಿದ್ದರೆ ನಿಮ್ಮೆಲ್ಲರನ್ನು ಸನ್ಮಾರ್ಗಕ್ಕೆ ಸೇರಿಸುತ್ತಿದ್ದನು (ಇದು ಅವನ ಯುಕ್ತಿಗೆ ವಿರುದ್ಧವಾಗಿದೆ).
150قُلْ هَلُمَّ شُهَدَاءَكُمُ الَّذِينَ يَشْهَدُونَ أَنَّ اللَّهَ حَرَّمَ هَٰذَا ۖ فَإِن شَهِدُوا فَلَا تَشْهَدْ مَعَهُمْ ۚ وَلَا تَتَّبِعْ أَهْوَاءَ الَّذِينَ كَذَّبُوا بِآيَاتِنَا وَالَّذِينَ لَا يُؤْمِنُونَ بِالْآخِرَةِ وَهُم بِرَبِّهِمْ يَعْدِلُونَ
ಹೇಳಿರಿ: ಅಲ್ಲಾಹನು ಇವೆಲ್ಲವನ್ನು ನಿಷಿದ್ಧಗೊಳಿಸಿದ್ದಾನೆ ಎಂಬುದಕ್ಕೆ ಸಾಕ್ಷö್ಯವಹಿಸುವ ನಿಮ್ಮ ಸಾಕ್ಷಿಗಳನ್ನು ತನ್ನಿರಿ. ಇನ್ನು ಅವರು ಸಾಕ್ಷö್ಯವಹಿಸಿದರೆ ನೀವು ಅವರೊಂದಿಗೆ ಸಾಕ್ಷö್ಯವನ್ನು ನೀಡಬೇಡಿರಿ ಮತ್ತು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸುವ ಪರಲೋಕದಲ್ಲಿ ವಿಶ್ವಾಸವಿಡದವರ ಮತ್ತು ನಿಮ್ಮ ಪ್ರಭುವಿನೊಂದಿಗೆ ಇತರರನ್ನು ಸಮಾನರನ್ನಾಗಿ ನಿಶ್ಚಯಿಸುವವರ ಸ್ವೇಚ್ಛೆಗಳನ್ನು ಅನುಸರಿಸಬೇಡಿರಿ.
151۞ قُلْ تَعَالَوْا أَتْلُ مَا حَرَّمَ رَبُّكُمْ عَلَيْكُمْ ۖ أَلَّا تُشْرِكُوا بِهِ شَيْئًا ۖ وَبِالْوَالِدَيْنِ إِحْسَانًا ۖ وَلَا تَقْتُلُوا أَوْلَادَكُم مِّنْ إِمْلَاقٍ ۖ نَّحْنُ نَرْزُقُكُمْ وَإِيَّاهُمْ ۖ وَلَا تَقْرَبُوا الْفَوَاحِشَ مَا ظَهَرَ مِنْهَا وَمَا بَطَنَ ۖ وَلَا تَقْتُلُوا النَّفْسَ الَّتِي حَرَّمَ اللَّهُ إِلَّا بِالْحَقِّ ۚ ذَٰلِكُمْ وَصَّاكُم بِهِ لَعَلَّكُمْ تَعْقِلُونَ
ಹೇಳಿರಿ ಬನ್ನಿರಿ ನಿಮ್ಮ ಪ್ರಭು ನಿಮ್ಮ ಮೇಲೆ ನಿಷಿದ್ಧಗೊಳಿಸಿರುವುದನ್ನು ನಾನು ನಿಮಗೆ ಓದಿ ತಿಳಿಸುತ್ತೇನೆ. ನೀವು ಅಲ್ಲಾಹನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ನಿಶ್ಚಯಿಸಬಾರದು, ಮಾತಾಪಿತರೊಂದಿಗೆ ಸದ್ವರ್ತನೆ ತೋರಬೇಕು. ದಾರಿದ್ರö್ಯದಿಂದಾಗಿ ನಿಮ್ಮ ಮಕ್ಕಳನ್ನು ಕೊಲ್ಲಬಾರದು. ನಿಮಗೂ, ಅವರಿಗೂ ಆಹಾರ ನೀಡುವವರು ನಾವಾಗಿದ್ದೇವೆ ಮತ್ತು ಪ್ರತ್ಯಕ್ಷವಾದ, ಪರೋಕ್ಷವಾದ ನಿರ್ಲಜ್ಜೆಯ ಕೃತ್ಯಗಳ ಬಳಿ ಸುಳಿಯಬೇಡಿರಿ. ಅಲ್ಲಾಹನು ಕೊಲ್ಲುವುದನ್ನು ನಿಷಿದ್ಧಗೊಳಿಸಿರುವ ಜೀವವನ್ನು ನ್ಯಾಯಬದ್ಧವಾಗಿಯಲ್ಲದೇ ಕೊಲ್ಲಬೇಡಿರಿ. ಅವನು ನಿಮಗೆ ನೀವು ಅರಿತುಕೊಳ್ಳಲೆಂದು ಈ ಆದೇಶವನ್ನು ನೀಡಿದ್ದಾನೆ.
ಅಲ್-ಅನ್ಆಮ್ಕುರಾನ್ ಸೂಚಿ
165ಆಯತ್
MeccanRevelation
149ಆಯತ್

ಅನುವಾದ — ಅಲ್-ಅನ್ಆಮ್ 149

ಸೂರಾ ಅಲ್-ಅನ್ಆಮ್ ಆಯತ್ 149 - ಓದಿ, ಆಲಿಸಿ, ಅನುವಾದ, ಕನ್ನಡ : ಹೇಳಿರಿ: ನಿಮ್ಮ ನೆಪಗಳ ಎದುರು ಪರಿಪೂರ್ಣ ಪುರಾವೆಯು ಅಲ್ಲಾಹನದ್ದಾಗಿದೆ. ಅವನು ಇಚ್ಛಿಸುತ್ತಿದ್ದರೆ ನಿಮ್ಮೆಲ್ಲರನ್ನು…

ಸೂರಾ ಆಯತ್ 149/165 — ಸೂರಾ ಅಲ್-ಅನ್ಆಮ್ الأنعام (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅನ್ಆಮ್ ಆಲಿಸಿ, ಸೂರಾ ಅಲ್-ಅನ್ಆಮ್ ಅನುವಾದ, ಸೂರಾ ಅಲ್-ಅನ್ಆಮ್ mp3, ಸೂರಾ ಅಲ್-ಅನ್ಆಮ್ pdf. ಆಯತ್ 147–151. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers