ಅಲ್-ಅಂಬಿಯಾ · 42/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
قُلْ مَن يَكْلَؤُكُم بِاللَّيْلِ وَالنَّهَارِ مِنَ الرَّحْمَٰنِ ۗ بَلْ هُمْ عَن ذِكْرِ رَبِّهِم مُّعْرِضُونَ ۝٤٢
Qul mai yakla `ukum billaili wannahaari minar Rahmaan; bal hum `an zikri Rabbihim mu`ridoon
📖 ಕನ್ನಡ ಅರ್ಥ
ಹಗಲು, ರಾತ್ರಿಯಲ್ಲಿ ನಿಮ್ಮನ್ನು ಪರಮ ದಯಾಮಯನಾದ ಅಲ್ಲಾಹನಿಂದ ರಕ್ಷಿಸುವವನಾರು? ಎಂದು ನೀವು ಅವರೊಂದಿಗೆ ಕೇಳಿರಿ. ನಿಜವಾಗಿಯೂ ಅವರು ತಮ್ಮ ಪ್ರಭುವಿನ ಸ್ಮರಣೆಯಿಂದ ವಿಮುಖರಾಗಿದ್ದಾರೆ.

🎧 ಆಲಿಸಿ


📜 ಆಯತ್ 40-44 — ಸೂರಾ ಅಲ್-ಅಂಬಿಯಾ

40بَلْ تَأْتِيهِم بَغْتَةً فَتَبْهَتُهُمْ فَلَا يَسْتَطِيعُونَ رَدَّهَا وَلَا هُمْ يُنظَرُونَ
ಪ್ರಳಯ ಸಮಯವು ಹಠಾತ್ತನೆ ಅವರ ಬಳಿಗೆ ಬಂದೆರಗುವುದು ಮತ್ತು ಅವರನ್ನು ದಿಗ್ಭಾçಂತಗೊಳಿಸುವುದು. ಅನಂತರ ಅವರು ಅದನ್ನು ತಡೆಯಲಾರರು ಮತ್ತು ಅವರಿಗೆ ಕಾಲಾವಕಾಶವೂ ನೀಡಲಾಗದು.
41وَلَقَدِ اسْتُهْزِئَ بِرُسُلٍ مِّن قَبْلِكَ فَحَاقَ بِالَّذِينَ سَخِرُوا مِنْهُم مَّا كَانُوا بِهِ يَسْتَهْزِئُونَ
ಓ ಪ್ರವಾದಿ ನಿಮಗಿಂತ ಮುಂಚಿನ ಸಂದೇಶವಾಹಕರೊAದಿಗೂ ಪರಿಹಾಸ್ಯ ಮಾಡಲಾಗಿತ್ತು. ಆದರೆ ಅವರಿಗೆ ಪರಿಹಾಸ್ಯ ಮಾಡುತ್ತಿದ್ದುದ್ದೇ ಆವರಿಸಿ ಬಿಟ್ಟಿತು.
42قُلْ مَن يَكْلَؤُكُم بِاللَّيْلِ وَالنَّهَارِ مِنَ الرَّحْمَٰنِ ۗ بَلْ هُمْ عَن ذِكْرِ رَبِّهِم مُّعْرِضُونَ
ಹಗಲು, ರಾತ್ರಿಯಲ್ಲಿ ನಿಮ್ಮನ್ನು ಪರಮ ದಯಾಮಯನಾದ ಅಲ್ಲಾಹನಿಂದ ರಕ್ಷಿಸುವವನಾರು? ಎಂದು ನೀವು ಅವರೊಂದಿಗೆ ಕೇಳಿರಿ. ನಿಜವಾಗಿಯೂ ಅವರು ತಮ್ಮ ಪ್ರಭುವಿನ ಸ್ಮರಣೆಯಿಂದ ವಿಮುಖರಾಗಿದ್ದಾರೆ.
43أَمْ لَهُمْ آلِهَةٌ تَمْنَعُهُم مِّن دُونِنَا ۚ لَا يَسْتَطِيعُونَ نَصْرَ أَنفُسِهِمْ وَلَا هُم مِّنَّا يُصْحَبُونَ
ಏನು! ಅವರಿಗೆ ನಮ್ಮ ಹೊರತು ವಿಪತ್ತುಗಳಿಂದ ತಡೆಯುವಂತಹ ಇತರೆ ದೇವರುಗಳಿದ್ದಾರೆಯೇ? ಅವರು ಸ್ವತಃ ತಮಗೂ ಸಹಾಯ ಮಡಲಾರರು ಮತ್ತು ಅವರಿಗೆ ನಮ್ಮ ಕಡೆಯಿಂದ ಸಹಾಯವು ನೀಡಲಾಗದು.
44بَلْ مَتَّعْنَا هَٰؤُلَاءِ وَآبَاءَهُمْ حَتَّىٰ طَالَ عَلَيْهِمُ الْعُمُرُ ۗ أَفَلَا يَرَوْنَ أَنَّا نَأْتِي الْأَرْضَ نَنقُصُهَا مِنْ أَطْرَافِهَا ۚ أَفَهُمُ الْغَالِبُونَ
ವಾಸ್ತವದಲ್ಲಿ ನಾವು ಅವರಿಗೂ, ಅವರ ಪೂರ್ವಿಕರಿಗೂ ಐಹಿಕ ಸುಖಭೂಗವನ್ನು ನೀಡಿರುತ್ತೇವೆ. ಕೊನೆಗೆ ಅವರ ಮೇಲೆ ಆಯುಷ್ಯವು ಸುಧೀರ್ಘವಾಯಿತು. ನಾವು ಭೂಮಿಯನ್ನು ಅದರ ಅಂಚುಗಳಿAದ ಕಿರಿದಾಗಿಸುತ್ತಾ ಬರುತ್ತಿರುವುದನ್ನು ಅವರು ಕಾಣುತ್ತಿಲ್ಲವೇ? ಇನ್ನು ಅವರೇ ಮೇಲುಗೈ ಸಾಧಿಸುವರೇ?
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
42ಆಯತ್

ಅನುವಾದ — ಅಲ್-ಅಂಬಿಯಾ 42

ಸೂರಾ ಅಲ್-ಅಂಬಿಯಾ ಆಯತ್ 42 - ಓದಿ, ಆಲಿಸಿ, ಅನುವಾದ, ಕನ್ನಡ : ಹಗಲು, ರಾತ್ರಿಯಲ್ಲಿ ನಿಮ್ಮನ್ನು ಪರಮ ದಯಾಮಯನಾದ ಅಲ್ಲಾಹನಿಂದ ರಕ್ಷಿಸುವವನಾರು? ಎಂದು ನೀವು ಅವರೊಂದಿಗೆ…

ಸೂರಾ ಆಯತ್ 42/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 40–44. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers