ಆಲ್-ಇಮ್ರಾನ್ · 83/200
ಅನುವಾದ ಉಚ್ಚಾರಣೆ — ಸೂರಾ ಆಲ್-ಇಮ್ರಾನ್
أَفَغَيْرَ دِينِ اللَّهِ يَبْغُونَ وَلَهُ أَسْلَمَ مَن فِي السَّمَاوَاتِ وَالْأَرْضِ طَوْعًا وَكَرْهًا وَإِلَيْهِ يُرْجَعُونَ ۝٨٣
Afaghaira deenil laahi yabghoona wa lahooo aslama man fis samaawaati wal ardi taw`anw wa karhanw wa ilaihi yurja`oon
📖 ಕನ್ನಡ ಅರ್ಥ
ಅವರು ಅಲ್ಲಾಹನ ಧರ್ಮದ ಹೊರತು ಬೇರೆ ಧರ್ಮವನ್ನು ಹುಡುಕುತ್ತಿದ್ದಾರೆಯೇ? ವಸ್ತುತಃ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವವರೆಲ್ಲರೂ ಸ್ವ-ಇಚ್ಛೆಯಿಂದ ಅಥವಾ ಅನಿವಾರ್ಯತೆಯಿಂದ ಅವನಿಗೆ ವಿಧೇಯರಾಗಿದ್ದಾರೆ. ಎಲ್ಲರೂ ಅವನೆಡೆಗೇ ಮರಳಿಸಲಾಗುವರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 81-85 — ಸೂರಾ ಆಲ್-ಇಮ್ರಾನ್

81وَإِذْ أَخَذَ اللَّهُ مِيثَاقَ النَّبِيِّينَ لَمَا آتَيْتُكُم مِّن كِتَابٍ وَحِكْمَةٍ ثُمَّ جَاءَكُمْ رَسُولٌ مُّصَدِّقٌ لِّمَا مَعَكُمْ لَتُؤْمِنُنَّ بِهِ وَلَتَنصُرُنَّهُ ۚ قَالَ أَأَقْرَرْتُمْ وَأَخَذْتُمْ عَلَىٰ ذَٰلِكُمْ إِصْرِي ۖ قَالُوا أَقْرَرْنَا ۚ قَالَ فَاشْهَدُوا وَأَنَا مَعَكُم مِّنَ الشَّاهِدِينَ
ಅಲ್ಲಾಹನು ಪ್ರವಾದಿಗಳೊಂದಿಗೆ ಕರಾರನ್ನು ಪಡೆದ ಸಂದರ್ಭವನ್ನು ಸ್ಮರಿಸಿರಿ. ನಾನು ನಿಮಗೆ ಗ್ರಂಥ ಮತ್ತು ಸುಜ್ಞಾನವನ್ನು ನೀಡಿ ಅನಂತರ ನಿಮ್ಮ ಬಳಿಯಿರುವುದನ್ನು ಸತ್ಯವೆಂದು ದೃಢಪಡಿಸುವ ಓರ್ವ ಸಂದೇಶವಾಹಕನನ್ನು ನಿಮ್ಮ ಬಳಿಗೆ ಬಂದರೆ ನೀವು ಅವನಲ್ಲಿ ವಿಶ್ವಾಸವನ್ನಿಡುವುದು ಹಾಗೂ ಅವನಿಗೆ ಸಹಾಯವನ್ನು ನೀಡುವುದು ನಿಮ್ಮ ಮೇಲೆ ಕಡ್ಡಾಯವಾಗಿದೆ. ತರುವಾಯ ಅಲ್ಲಾಹನು ಹೇಳಿದನು: ನೀವದನ್ನು ಒಪ್ಪಿಕೊಂಡು ಆ ವಿಷಯದಲ್ಲಿ ನನ್ನ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವಿರಾ? ಅವರೆಲ್ಲರೂ ಹೇಳಿದರು: ನಾವು ಒಪ್ಪಿಕೊಂಡೆವು, ಅವನು ಹೇಳಿದನು: ಹಾಗಾದರೆ ನೀವು ಸಾಕ್ಷಿಗಳಾಗಿರಿ ಮತ್ತು ಸ್ವತಃ ನಾನೂ ನಿಮ್ಮೊಂದಿಗೆ ಸಾಕ್ಷಿಗಳಲ್ಲಿ ಸೇರುವೆನು.
82فَمَن تَوَلَّىٰ بَعْدَ ذَٰلِكَ فَأُولَٰئِكَ هُمُ الْفَاسِقُونَ
ಅದರ ನಂತರವೂ ಯಾರು ವಿಮುಖರಾಗುತ್ತಾರೋ ಅವರೇ ಧಿಕ್ಕಾರಿಗಳಾಗಿದ್ದಾರೆ.
83أَفَغَيْرَ دِينِ اللَّهِ يَبْغُونَ وَلَهُ أَسْلَمَ مَن فِي السَّمَاوَاتِ وَالْأَرْضِ طَوْعًا وَكَرْهًا وَإِلَيْهِ يُرْجَعُونَ
ಅವರು ಅಲ್ಲಾಹನ ಧರ್ಮದ ಹೊರತು ಬೇರೆ ಧರ್ಮವನ್ನು ಹುಡುಕುತ್ತಿದ್ದಾರೆಯೇ? ವಸ್ತುತಃ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವವರೆಲ್ಲರೂ ಸ್ವ-ಇಚ್ಛೆಯಿಂದ ಅಥವಾ ಅನಿವಾರ್ಯತೆಯಿಂದ ಅವನಿಗೆ ವಿಧೇಯರಾಗಿದ್ದಾರೆ. ಎಲ್ಲರೂ ಅವನೆಡೆಗೇ ಮರಳಿಸಲಾಗುವರು.
84قُلْ آمَنَّا بِاللَّهِ وَمَا أُنزِلَ عَلَيْنَا وَمَا أُنزِلَ عَلَىٰ إِبْرَاهِيمَ وَإِسْمَاعِيلَ وَإِسْحَاقَ وَيَعْقُوبَ وَالْأَسْبَاطِ وَمَا أُوتِيَ مُوسَىٰ وَعِيسَىٰ وَالنَّبِيُّونَ مِن رَّبِّهِمْ لَا نُفَرِّقُ بَيْنَ أَحَدٍ مِّنْهُمْ وَنَحْنُ لَهُ مُسْلِمُونَ
ಹೇಳಿರಿ: ಅಲ್ಲಾಹನಲ್ಲೂ, ನಮ್ಮ ಮೇಲೆ ಅವತೀರ್ಣಗೊಳಿಸಲಾಗಿರುವುದರಲ್ಲೂ ಮತ್ತು ಇಬ್ರಾಹೀಮ್ ಇಸ್ಮಾಯೀಲ್, ಇಸ್‌ಹಾಕ್, ಯಾಕೂಬ್ ಮತ್ತು ಅವರ ಸಂತತಿಗಳಿಗೆ ಅವತೀರ್ಣಗೊಳಿಸಲಾಗಿರುವುದರಲ್ಲೂ, ಮೂಸಾ, ಈಸಾರಿಗೆ ಹಾಗೂ ಸಕಲ ಪೈಗಂಬರರಿಗೆ ತಮ್ಮ ಪ್ರಭುವಿನ ವತಿಯಿಂದ ನೀಡಲಾಗಿರುವುದರಲ್ಲೂ ನಾವು ವಿಶ್ವಾಸವಿಟ್ಟಿರುವೆವು. ಅವರ ಪೈಕಿ ಯಾರ ನಡುವೆಯೂ ನಾವು ತಾರತಮ್ಯ ಮಾಡುವುದಿಲ್ಲ. ನಾವು ಅಲ್ಲಾಹನಿಗೆ ವಿಧೇಯರಾಗಿದ್ದೇವೆ.
85وَمَن يَبْتَغِ غَيْرَ الْإِسْلَامِ دِينًا فَلَن يُقْبَلَ مِنْهُ وَهُوَ فِي الْآخِرَةِ مِنَ الْخَاسِرِينَ
ಯಾರಾದರೂ ಇಸ್ಲಾಮ್ (ಅಲ್ಲಾಹನಿಗೆ ಶರಣಾಗತಿ)ನ ಹೊರತು ಬೇರೆ ಧರ್ಮವನ್ನು ಬಯಸಿದರೆ ಅದನ್ನು ಅವನಿಂದ ಎಂದಿಗೂ ಸ್ವೀಕರಿಸಲಾಗದು ಮತ್ತು ಅವನು ಪರಲೋಕದಲ್ಲಿ ನಷ್ಟ ಹೊಂದಿದವರಲ್ಲಿ ಸೇರುವನು.
ಆಲ್-ಇಮ್ರಾನ್ಕುರಾನ್ ಸೂಚಿ
200ಆಯತ್
MedinanRevelation
83ಆಯತ್

ಅನುವಾದ — ಆಲ್-ಇಮ್ರಾನ್ 83

ಸೂರಾ ಆಲ್-ಇಮ್ರಾನ್ ಆಯತ್ 83 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಅಲ್ಲಾಹನ ಧರ್ಮದ ಹೊರತು ಬೇರೆ ಧರ್ಮವನ್ನು ಹುಡುಕುತ್ತಿದ್ದಾರೆಯೇ? ವಸ್ತುತಃ ಆಕಾಶಗಳಲ್ಲಿ ಮತ್ತು…

ಸೂರಾ ಆಯತ್ 83/200 — ಸೂರಾ ಆಲ್-ಇಮ್ರಾನ್ آل عمران (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಆಲ್-ಇಮ್ರಾನ್ ಆಲಿಸಿ, ಸೂರಾ ಆಲ್-ಇಮ್ರಾನ್ ಅನುವಾದ, ಸೂರಾ ಆಲ್-ಇಮ್ರಾನ್ mp3, ಸೂರಾ ಆಲ್-ಇಮ್ರಾನ್ pdf. ಆಯತ್ 81–85. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers