ಅಲ್-ಅನ್ಆಮ್ · 76/165
ಅನುವಾದ ಉಚ್ಚಾರಣೆ — ಸೂರಾ ಅಲ್-ಅನ್ಆಮ್
فَلَمَّا جَنَّ عَلَيْهِ اللَّيْلُ رَأَىٰ كَوْكَبًا ۖ قَالَ هَٰذَا رَبِّي ۖ فَلَمَّا أَفَلَ قَالَ لَا أُحِبُّ الْآفِلِينَ ۝٧٦
Falammaa janna `alaihil lailu ra aa kawkabaan qaala haaza Rabbee falammaaa afala qaala laaa uhibbul aafileen
📖 ಕನ್ನಡ ಅರ್ಥ
ತರುವಾಯ ರಾತ್ರಿಯ ಅಂಧಕಾರವು ಅವರನ್ನು ಆವರಿಸಿದಾಗ ಅವರು ಒಂದು ನಕ್ಷತ್ರವನ್ನು ಕಂಡು ( ವಾಸ್ತವಿಕತೆಯನ್ನು ತಿಳಿಸಲು) ಹೇಳಿದರು: ಇದು ನನ್ನ ಪ್ರಭು, ಆದರೆ ಅದು ಅಸ್ತಮಿಸಿದಾಗ ಅಸ್ತಮಿಸುವವರನ್ನು ನಾನು ಪ್ರೀತಿಸುವುದಿಲ್ಲ ಎಂದರು.

🎧 ಆಲಿಸಿ


📜 ಆಯತ್ 74-78 — ಸೂರಾ ಅಲ್-ಅನ್ಆಮ್

74۞ وَإِذْ قَالَ إِبْرَاهِيمُ لِأَبِيهِ آزَرَ أَتَتَّخِذُ أَصْنَامًا آلِهَةً ۖ إِنِّي أَرَاكَ وَقَوْمَكَ فِي ضَلَالٍ مُّبِينٍ
ಮತ್ತು ಇಬ್ರಾಹೀಮ್ ತಮ್ಮ ತಂದೆ ಅಝರ್‌ನೊಂದಿಗೆ ನೀವು ವಿಗ್ರಹಗಳನ್ನು ಆರಾಧ್ಯರನ್ನಾಗಿ ಮಾಡಿಕೊಂಡಿರುವಿರಾ? ನಿಸ್ಸಂದೇಹವಾಗಿಯು ನಾನು ನಿಮ್ಮನ್ನೂ, ನಿಮ್ಮ ಸಮುದಾಯವನ್ನೂ ಸ್ಪಷ್ಟ ಮಾರ್ಗ ಭ್ರಷ್ಟತೆಯಲ್ಲಿರುವುದಾಗಿ ಕಾಣುತ್ತಿದ್ದೇನೆಂದು ಹೇಳಿದ ಸಂದರ್ಭವನ್ನು ಸ್ಮರಿಸಿರಿ.
75وَكَذَٰلِكَ نُرِي إِبْرَاهِيمَ مَلَكُوتَ السَّمَاوَاتِ وَالْأَرْضِ وَلِيَكُونَ مِنَ الْمُوقِنِينَ
ಹೀಗೆ ಇಬ್ರಾಹೀಮರಿಗೆ ದೃಢವಿಶ್ವಾಸವಾಗಲೆಂದು ನಾವು ಆಕಾಶಗಳ ಮತ್ತು ಭೂಮಿಯ ಅಧಿಪತ್ಯವನ್ನು ತೋರಿಸಿಕೊಟ್ಟೆವು.
76فَلَمَّا جَنَّ عَلَيْهِ اللَّيْلُ رَأَىٰ كَوْكَبًا ۖ قَالَ هَٰذَا رَبِّي ۖ فَلَمَّا أَفَلَ قَالَ لَا أُحِبُّ الْآفِلِينَ
ತರುವಾಯ ರಾತ್ರಿಯ ಅಂಧಕಾರವು ಅವರನ್ನು ಆವರಿಸಿದಾಗ ಅವರು ಒಂದು ನಕ್ಷತ್ರವನ್ನು ಕಂಡು ( ವಾಸ್ತವಿಕತೆಯನ್ನು ತಿಳಿಸಲು) ಹೇಳಿದರು: ಇದು ನನ್ನ ಪ್ರಭು, ಆದರೆ ಅದು ಅಸ್ತಮಿಸಿದಾಗ ಅಸ್ತಮಿಸುವವರನ್ನು ನಾನು ಪ್ರೀತಿಸುವುದಿಲ್ಲ ಎಂದರು.
77فَلَمَّا رَأَى الْقَمَرَ بَازِغًا قَالَ هَٰذَا رَبِّي ۖ فَلَمَّا أَفَلَ قَالَ لَئِن لَّمْ يَهْدِنِي رَبِّي لَأَكُونَنَّ مِنَ الْقَوْمِ الضَّالِّينَ
ಅನಂತರ ಹೊಳೆಯುತ್ತಿರುವ ಚಂದ್ರನನ್ನು ಕಂಡಾಗ ಹೇಳಿದರು: ಇದು ನನ್ನ ಪ್ರಭು, ಆದರೆ ಅದು ಅಸ್ತಮಿಸಿದಾಗ (ತಮ್ಮ ಜನರಿಗೆ) ನನ್ನ ಪ್ರಭು ನನಗೆ ಸನ್ಮಾರ್ಗವನ್ನು ತೋರಿಸಿ ಕೊಡದಿದ್ದರೆ ಖಂಡಿತವಾಗಿಯು ನಾನು ಪಥಭ್ರಷ್ಟ ಜನರಲ್ಲಿ ಸೇರಿಬಿಡುವೆನು ಎಂದರು.
78فَلَمَّا رَأَى الشَّمْسَ بَازِغَةً قَالَ هَٰذَا رَبِّي هَٰذَا أَكْبَرُ ۖ فَلَمَّا أَفَلَتْ قَالَ يَا قَوْمِ إِنِّي بَرِيءٌ مِّمَّا تُشْرِكُونَ
ನಂತರ ಹೊಳೆಯುತ್ತಿರುವ ಸೂರ್ಯನನ್ನು ಕಂಡಾಗ ಅವರು (ತಮ್ಮ ಜನಾಂಗದವರಿಗೆ) ಹೇಳಿದರು: ಇದು ನನ್ನ ಪ್ರಭು, ಇದು ಅತ್ಯಂತ ದೊಡ್ಡದಿದೆ, ಅನಂತರ ಅದು ಕೂಡ ಅಸ್ತಮಿಸಿದಾಗ ನನ್ನ ಸಮುದಾಯವೆ, ನಿಸ್ಸಂದೇಹವಾಗಿಯೂ ನೀವು ಮಾಡುತ್ತಿರುವ ಬಹುದೇವಾರಾಧನೆಯಿಂದ ನಾನು ಸಂಬAಧ ಮುಕ್ತನಾಗಿದ್ದೇನೆಂದು ಹೇಳಿದರು.
ಅಲ್-ಅನ್ಆಮ್ಕುರಾನ್ ಸೂಚಿ
165ಆಯತ್
MeccanRevelation
76ಆಯತ್

ಅನುವಾದ — ಅಲ್-ಅನ್ಆಮ್ 76

ಸೂರಾ ಅಲ್-ಅನ್ಆಮ್ ಆಯತ್ 76 - ಓದಿ, ಆಲಿಸಿ, ಅನುವಾದ, ಕನ್ನಡ : ತರುವಾಯ ರಾತ್ರಿಯ ಅಂಧಕಾರವು ಅವರನ್ನು ಆವರಿಸಿದಾಗ ಅವರು ಒಂದು ನಕ್ಷತ್ರವನ್ನು ಕಂಡು (…

ಸೂರಾ ಆಯತ್ 76/165 — ಸೂರಾ ಅಲ್-ಅನ್ಆಮ್ الأنعام (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅನ್ಆಮ್ ಆಲಿಸಿ, ಸೂರಾ ಅಲ್-ಅನ್ಆಮ್ ಅನುವಾದ, ಸೂರಾ ಅಲ್-ಅನ್ಆಮ್ mp3, ಸೂರಾ ಅಲ್-ಅನ್ಆಮ್ pdf. ಆಯತ್ 74–78. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers