ಅಲ್-ಆರಾಫ್ · 190/206
ಅನುವಾದ ಉಚ್ಚಾರಣೆ — ಸೂರಾ ಅಲ್-ಆರಾಫ್
فَلَمَّا آتَاهُمَا صَالِحًا جَعَلَا لَهُ شُرَكَاءَ فِيمَا آتَاهُمَا ۚ فَتَعَالَى اللَّهُ عَمَّا يُشْرِكُونَ ۝١٩٠
Falammaaa aataahumaa saalihan ja`alaa lahoo shurakaaa`a feemaaa aataahumaa; fata`aalal laahu `ammaa yushrikoon
📖 ಕನ್ನಡ ಅರ್ಥ
ಆದರೆ ಅಲ್ಲಾಹನು ಅವರಿಗೆ ಉತ್ತಮ ಸಂತತಿಯನ್ನು ನೀಡಿದಾಗ, ಅವನು ದಯಪಾಲಿಸಿರುವುದರಲ್ಲಿ ಅವರು ಅಲ್ಲಾಹನಿಗೆ ಸಹಭಾಗಿಗಳನ್ನು ನಿಶ್ಚಯಿಸತೊಡಗಿದರು. ಮತ್ತು ಅಲ್ಲಾಹನು ಅವರು ನಿಶ್ಚಯಿಸುತ್ತಿರುವ ಸಹಭಾಗಿತ್ವದಿಂದ ಅತ್ತುö್ಯನ್ನತನಾಗಿದ್ದಾನೆ.

🎧 ಆಲಿಸಿ


📜 ಆಯತ್ 188-192 — ಸೂರಾ ಅಲ್-ಆರಾಫ್

188قُل لَّا أَمْلِكُ لِنَفْسِي نَفْعًا وَلَا ضَرًّا إِلَّا مَا شَاءَ اللَّهُ ۚ وَلَوْ كُنتُ أَعْلَمُ الْغَيْبَ لَاسْتَكْثَرْتُ مِنَ الْخَيْرِ وَمَا مَسَّنِيَ السُّوءُ ۚ إِنْ أَنَا إِلَّا نَذِيرٌ وَبَشِيرٌ لِّقَوْمٍ يُؤْمِنُونَ
ಹೇಳಿರಿ: ಅಲ್ಲಾಹನು ಇಚ್ಛಿಸುವುದರ ಹೊರತು ನಾನು ಸ್ವತಃ ನನಗೂ ಯಾವುದೇ ಪ್ರಯೋಜನವನ್ನುಂಟು ಮಾಡುವ ಅಥವಾ ಹಾನಿಯನ್ನುಂಟು ಮಾಡುವ ಅಧಿಕಾರವನ್ನು ಹೊಂದಿಲ್ಲ; ಮತ್ತು ನಾನು ಅದೃಷ್ಯಜ್ಞಾನವನ್ನು ಹೊಂದಿರುತ್ತಿದ್ದರೆ ಸಾಕಷ್ಟು ಒಳಿತುಗಳನ್ನು ಗಳಿಸುತ್ತಿದ್ದೆನು ಮತ್ತು ಯಾವುದೇ ನಷ್ಟ ನನಗುಂಟಾಗುತ್ತಿರಲಿಲ್ಲ. ನಾನು ಕೇವಲ ಒಬ್ಬ ಮುನ್ನೆಚ್ಚರಿಕೆ ನೀಡುವವನು ಮತ್ತು ವಿಶ್ವಾಸವಿಡುವ ಜನರಿಗೆ ಶುಭವಾರ್ತೆ ನೀಡುವವನು ಆಗಿದ್ದೇನೆ.
189۞ هُوَ الَّذِي خَلَقَكُم مِّن نَّفْسٍ وَاحِدَةٍ وَجَعَلَ مِنْهَا زَوْجَهَا لِيَسْكُنَ إِلَيْهَا ۖ فَلَمَّا تَغَشَّاهَا حَمَلَتْ حَمْلًا خَفِيفًا فَمَرَّتْ بِهِ ۖ فَلَمَّا أَثْقَلَت دَّعَوَا اللَّهَ رَبَّهُمَا لَئِنْ آتَيْتَنَا صَالِحًا لَّنَكُونَنَّ مِنَ الشَّاكِرِينَ
ಅವನೇ ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದವನು ಮತ್ತು ಅದರಿಂದಲೇ ಅದರ ಜೋಡಿಯನ್ನುಂಟು ಮಾಡಿದನು. ಇದು ಆಕೆಯೊಂದಿಗೆ ಅವನು ಮನಃ ಶಾಂತಿಯನ್ನು ಪಡೆಯಲೆಂದಾಗಿದೆ. ನಂತರ ಪತಿಯು ಪತ್ನಿಯನ್ನು ಸಮೀಪಿಸಿದಾಗ ಅವಳಿಗೆ ಹಗುರವಾದ ಗರ್ಭವು ನಿಂತಿತು. ನಂತರ ಅವಳು ಅದನ್ನು ಹೊತ್ತುಕೊಂಡು ನಡೆದಾಡಿದಳು. ತದನಂತರ ಅವಳಿಗೆ ಭಾರವು ಹೆಚ್ಚಾದಾಗ ಪತಿ-ಪತ್ನಿಯರಿಬ್ಬರೂ ತಮ್ಮ ಒಡೆಯನಾದ ಅಲ್ಲಾಹನೊಂದಿಗೆ ನೀನು ನಮಗೆ ಉತ್ತಮ ಹಾಗೂ ಆರೋಗ್ಯವಂತ ಸಂತತಿಯನ್ನು ಕರುಣಿಸಿದರೆ ನಾವು ಕೃತಜ್ಞತೆ ತೋರುವೆವು ಎಂದು ಪ್ರಾರ್ಥಿಸಿದರು.
190فَلَمَّا آتَاهُمَا صَالِحًا جَعَلَا لَهُ شُرَكَاءَ فِيمَا آتَاهُمَا ۚ فَتَعَالَى اللَّهُ عَمَّا يُشْرِكُونَ
ಆದರೆ ಅಲ್ಲಾಹನು ಅವರಿಗೆ ಉತ್ತಮ ಸಂತತಿಯನ್ನು ನೀಡಿದಾಗ, ಅವನು ದಯಪಾಲಿಸಿರುವುದರಲ್ಲಿ ಅವರು ಅಲ್ಲಾಹನಿಗೆ ಸಹಭಾಗಿಗಳನ್ನು ನಿಶ್ಚಯಿಸತೊಡಗಿದರು. ಮತ್ತು ಅಲ್ಲಾಹನು ಅವರು ನಿಶ್ಚಯಿಸುತ್ತಿರುವ ಸಹಭಾಗಿತ್ವದಿಂದ ಅತ್ತುö್ಯನ್ನತನಾಗಿದ್ದಾನೆ.
191أَيُشْرِكُونَ مَا لَا يَخْلُقُ شَيْئًا وَهُمْ يُخْلَقُونَ
ಏನನ್ನೂ ಸೃಷ್ಟಿಸಲಾಗದ, ಸ್ವತಃ ಸೃಷ್ಟಿಸಲ್ಪಟ್ಟವರನ್ನು ಅವರು ಅಲ್ಲಾಹನಿಗೆ ಸಹಭಾಗಿಯಾಗಿ ನಿಶ್ಚಯಿಸುತ್ತಿದ್ದಾರೆಯೇ?
192وَلَا يَسْتَطِيعُونَ لَهُمْ نَصْرًا وَلَا أَنفُسَهُمْ يَنصُرُونَ
ಅವರು ಅವರಿಗೆ ಯಾವುದೇ ಸಹಾಯ ಮಾಡಲು ಸಾಧ್ಯವಿಲ್ಲ. ಮತ್ತು ಸ್ವತಃ ತಮಗೂ ಅವರು ಸಹಾಯ ಮಾಡಿಕೊಳ್ಳಲಾರರು.
ಅಲ್-ಆರಾಫ್ಕುರಾನ್ ಸೂಚಿ
206ಆಯತ್
MeccanRevelation
190ಆಯತ್

ಅನುವಾದ — ಅಲ್-ಆರಾಫ್ 190

ಸೂರಾ ಅಲ್-ಆರಾಫ್ ಆಯತ್ 190 - ಓದಿ, ಆಲಿಸಿ, ಅನುವಾದ, ಕನ್ನಡ : ಆದರೆ ಅಲ್ಲಾಹನು ಅವರಿಗೆ ಉತ್ತಮ ಸಂತತಿಯನ್ನು ನೀಡಿದಾಗ, ಅವನು ದಯಪಾಲಿಸಿರುವುದರಲ್ಲಿ ಅವರು ಅಲ್ಲಾಹನಿಗೆ…

ಸೂರಾ ಆಯತ್ 190/206 — ಸೂರಾ ಅಲ್-ಆರಾಫ್ الأعراف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಆರಾಫ್ ಆಲಿಸಿ, ಸೂರಾ ಅಲ್-ಆರಾಫ್ ಅನುವಾದ, ಸೂರಾ ಅಲ್-ಆರಾಫ್ mp3, ಸೂರಾ ಅಲ್-ಆರಾಫ್ pdf. ಆಯತ್ 188–192. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers