ಯೂನುಸ್ · 69/109
ಅನುವಾದ ಉಚ್ಚಾರಣೆ — ಸೂರಾ ಯೂನುಸ್
قُلْ إِنَّ الَّذِينَ يَفْتَرُونَ عَلَى اللَّهِ الْكَذِبَ لَا يُفْلِحُونَ ۝٦٩
Qul innal lazeena yaftaroona `alal laahil kaziba laa yuflihoon
📖 ಕನ್ನಡ ಅರ್ಥ
ಅಲ್ಲಾಹನ ಮೇಲೆ ಸುಳ್ಳು ಸೃಷ್ಟಿಸಿ ಹೇಳುತ್ತಿರುವವರು ಯಶಸ್ವಿಯಾಗಲಾರರು.

🎧 ಆಲಿಸಿ


📜 ಆಯತ್ 67-71 — ಸೂರಾ ಯೂನುಸ್

67هُوَ الَّذِي جَعَلَ لَكُمُ اللَّيْلَ لِتَسْكُنُوا فِيهِ وَالنَّهَارَ مُبْصِرًا ۚ إِنَّ فِي ذَٰلِكَ لَآيَاتٍ لِّقَوْمٍ يَسْمَعُونَ
ಮತ್ತು ಅವನೇ ರಾತ್ರಿಯನ್ನು ನಿಮಗಾಗಿ ವಿಶ್ರಾಂತಿ ಪಡೆಯಲೆಂದು ಮತ್ತು ಹಗಲನ್ನು (ಕೆಲಸ ಕಾರ್ಯಗಳಿಗಾಗಿ) ಪ್ರಕಾಶಮಾನವಾಗಿಯು ಮಾಡಿರುವನು. ನಿಶ್ಚಯವಾಗಿಯು ಇದರಲ್ಲಿ ಆಲಿಸುವ ಜನರಿಗೆ ನಿದರ್ಶನಗಳಿವೆ.
68قَالُوا اتَّخَذَ اللَّهُ وَلَدًا ۗ سُبْحَانَهُ ۖ هُوَ الْغَنِيُّ ۖ لَهُ مَا فِي السَّمَاوَاتِ وَمَا فِي الْأَرْضِ ۚ إِنْ عِندَكُم مِّن سُلْطَانٍ بِهَٰذَا ۚ أَتَقُولُونَ عَلَى اللَّهِ مَا لَا تَعْلَمُونَ
ಅಲ್ಲಾಹನು ಸಂತಾನವನ್ನು ಹೊಂದಿರುತ್ತಾನೆAದು ಅವರು ಆರೋಪಿಸುತ್ತಾರೆ. ಅವನಾದರೂ ಅದೆಷ್ಟೋ ಪರಮ ಪಾವನನು ನಿರಪೇಕ್ಷಕನು ಆಗಿರುವನು. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನ ಅಧಿಪತ್ಯದಲ್ಲಿದೆ. ಈ ವಿಚಾರದಲ್ಲಿ ನಿಮ್ಮ ಬಳಿ ಆಧಾರವೇನೂ ಇಲ್ಲ. ನೀವು ಅರಿಯದಿದ್ದನ್ನು ಅಲ್ಲಾಹನ ಮೇಲೆ ಹೇಳುತ್ತಿರುವಿರಾ ?
69قُلْ إِنَّ الَّذِينَ يَفْتَرُونَ عَلَى اللَّهِ الْكَذِبَ لَا يُفْلِحُونَ
ಅಲ್ಲಾಹನ ಮೇಲೆ ಸುಳ್ಳು ಸೃಷ್ಟಿಸಿ ಹೇಳುತ್ತಿರುವವರು ಯಶಸ್ವಿಯಾಗಲಾರರು.
70مَتَاعٌ فِي الدُّنْيَا ثُمَّ إِلَيْنَا مَرْجِعُهُمْ ثُمَّ نُذِيقُهُمُ الْعَذَابَ الشَّدِيدَ بِمَا كَانُوا يَكْفُرُونَ
ಇಹಲೋಕದಲ್ಲಿ ಅತ್ಯಲ್ಪ ಸುಖ ಭೋಗವಿರುವುದು. ಅನಂತರ ಅವರಿಗೆ ನಮ್ಮೆಡೆಗೇ ಮರಳಬೇಕಾಗಿದೆ. ತರುವಾಯ ನಾವು ಅವರ ಸತ್ಯನಿಷೇಧದ ನಿಮಿತ್ತ ಕಠಿಣ ಯಾತನೆಯ ಸವಿಯನ್ನುಣಿಸುವೆವು.
71۞ وَاتْلُ عَلَيْهِمْ نَبَأَ نُوحٍ إِذْ قَالَ لِقَوْمِهِ يَا قَوْمِ إِن كَانَ كَبُرَ عَلَيْكُم مَّقَامِي وَتَذْكِيرِي بِآيَاتِ اللَّهِ فَعَلَى اللَّهِ تَوَكَّلْتُ فَأَجْمِعُوا أَمْرَكُمْ وَشُرَكَاءَكُمْ ثُمَّ لَا يَكُنْ أَمْرُكُمْ عَلَيْكُمْ غُمَّةً ثُمَّ اقْضُوا إِلَيَّ وَلَا تُنظِرُونِ
(ಓ ಪೈಗಂಬರರೇ) ತಾವು ಅವರಿಗೆ ನೂಹ್‌ರವರ ವೃತ್ತಾಂತವನ್ನು ಓದಿ ಹೇಳಿರಿ. ಅವರು ತಮ್ಮ ಜನಾಂಗಕ್ಕೆ ಹೇಳಿದ ಸಂದರ್ಭ; ಓ ನನ್ನ ಜನಾಂಗವೇ, ನಿಮ್ಮ ನಡುವೆ ನನ್ನ ಇರುವಿಕೆಯು ಮತ್ತು ಅಲ್ಲಾಹನ ಸೂಕ್ತಿಗಳ ಮೂಲಕ ನಿಮ್ಮನ್ನು ಎಚ್ಚರಗೊಳಿಸುವುದು ನಿಮಗೆ ಭಾರವೆನಿಸುವುದಾದರೆ ನಾನಂತು ಅಲ್ಲಾಹನ ಮೇಲೆ ಭರವಸೆಯಿಟ್ಟಿದ್ದೇನೆ. ನೀವು ನಿಮ್ಮ ಸಹಭಾಗಿ ದೇವರುಗಳೊಂದಿಗೆ ನಿಮ್ಮ ಯೋಜನೆಯನ್ನು ದೃಢಪಡಿಸಿರಿ. ಆಮೇಲೆ ನಿಮ್ಮ ಆ ಯೋಜನೆಯ ಯಾವ ಅಂಶವು ನಿಮ್ಮಿಂದ ಅಡಗಿರದಿರಲಿ. ಅನಂತರ ನನ್ನ ವಿರುದ್ಧ ಕಾರ್ಯಾಚರಣೆಗಿಳಿಯಿರಿ ಹಾಗು ನನಗೆ ಕಾಲಾವಕಾಶವನ್ನೂ ನೀಡಬೇಡಿರಿ.
ಯೂನುಸ್ಕುರಾನ್ ಸೂಚಿ
109ಆಯತ್
MeccanRevelation
69ಆಯತ್

ಅನುವಾದ — ಯೂನುಸ್ 69

ಸೂರಾ ಯೂನುಸ್ ಆಯತ್ 69 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನ ಮೇಲೆ ಸುಳ್ಳು ಸೃಷ್ಟಿಸಿ ಹೇಳುತ್ತಿರುವವರು ಯಶಸ್ವಿಯಾಗಲಾರರು.

ಸೂರಾ ಆಯತ್ 69/109 — ಸೂರಾ ಯೂನುಸ್ يونس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯೂನುಸ್ ಆಲಿಸಿ, ಸೂರಾ ಯೂನುಸ್ ಅನುವಾದ, ಸೂರಾ ಯೂನುಸ್ mp3, ಸೂರಾ ಯೂನುಸ್ pdf. ಆಯತ್ 67–71. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers