ಅಲ್-ಅನ್ಆಮ್ · 58/165
ಅನುವಾದ ಉಚ್ಚಾರಣೆ — ಸೂರಾ ಅಲ್-ಅನ್ಆಮ್
قُل لَّوْ أَنَّ عِندِي مَا تَسْتَعْجِلُونَ بِهِ لَقُضِيَ الْأَمْرُ بَيْنِي وَبَيْنَكُمْ ۗ وَاللَّهُ أَعْلَمُ بِالظَّالِمِينَ ۝٥٨
Qul law anna `indee maa tasta`jiloona bihee laqudiyal amru bainee wa bainakum; wallaahu a`lamu bizzaalimeen
📖 ಕನ್ನಡ ಅರ್ಥ
ಹೇಳಿರಿ: ನೀವು ಆತುರಪಡುತ್ತಿರುವ ಆ ಯಾತನೆಯು ನನ್ನ ಬಳಿಯಿರುತ್ತಿದ್ದರೆ ನನ್ನ ಮತ್ತು ನಿಮ್ಮ ಮಧ್ಯೆ ಈಗಾಗಲೇ ತೀರ್ಪು ಆಗಿಬಿಡುತ್ತಿತ್ತು ಮತ್ತು ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 56-60 — ಸೂರಾ ಅಲ್-ಅನ್ಆಮ್

56قُلْ إِنِّي نُهِيتُ أَنْ أَعْبُدَ الَّذِينَ تَدْعُونَ مِن دُونِ اللَّهِ ۚ قُل لَّا أَتَّبِعُ أَهْوَاءَكُمْ ۙ قَدْ ضَلَلْتُ إِذًا وَمَا أَنَا مِنَ الْمُهْتَدِينَ
ಹೇಳಿರಿ: ಅಲ್ಲಾಹನ ಹೊರತು ನೀವು ಕರೆದು ಪ್ರಾರ್ಥಿಸುತ್ತಿರುವವರನ್ನು ಆರಾಧಿಸುವುದನ್ನು ನನಗೆ ನಿಷೇಧಿಸಲಾಗಿದೆ. ಹೇಳಿರಿ: ನಾನು ನಿಮ್ಮ ಸ್ವೇಚ್ಛೆಗಳನ್ನು ಅನುಸರಿಸುವುದಿಲ್ಲ. ಹಾಗೆ ಮಾಡಿದರೆ ನಾನು ಮಾರ್ಗ ಭ್ರಷ್ಟನಾಗುವೆನು ಮತ್ತು ಸನ್ಮಾರ್ಗ ಪ್ರಾಪ್ತರಲ್ಲಿ ಸೇರಿದವನಾಗಲಾರನು.
57قُلْ إِنِّي عَلَىٰ بَيِّنَةٍ مِّن رَّبِّي وَكَذَّبْتُم بِهِ ۚ مَا عِندِي مَا تَسْتَعْجِلُونَ بِهِ ۚ إِنِ الْحُكْمُ إِلَّا لِلَّهِ ۖ يَقُصُّ الْحَقَّ ۖ وَهُوَ خَيْرُ الْفَاصِلِينَ
ಹೇಳಿರಿ: ಖಂಡಿತವಾಗಿಯು ನಾನು ನನ್ನ ಪ್ರಭುವಿನ ಕಡೆಯ ಸ್ಪಷ್ಟ ಆಧಾರದ ಮೇಲಿರುವೆನು. ನೀವದನ್ನು ನಿರಾಕರಿಸುವಿರಿ. ನೀವು ಯಾವುದಕ್ಕಾಗಿ (ಯಾತನೆಗಾಗಿ) ಆತುರಪಡುತ್ತೀರೋ ಅದು ನನ್ನ ಬಳಿಯಿಲ್ಲ. ಆಜ್ಞಾಧಿಕಾರವು ಅಲ್ಲಾಹನಿಗೆ ಮಾತ್ರವಿದೆ. ಅವನು ಸತ್ಯವನ್ನು ವಿವರಿಸಿ ಕೊಡುತ್ತಾನೆ. ಮತ್ತು ಅವನು ತೀರ್ಪು ನೀಡವವರಲ್ಲಿ ಅತ್ಯುತ್ತಮನಾಗಿದ್ದಾನೆ.
58قُل لَّوْ أَنَّ عِندِي مَا تَسْتَعْجِلُونَ بِهِ لَقُضِيَ الْأَمْرُ بَيْنِي وَبَيْنَكُمْ ۗ وَاللَّهُ أَعْلَمُ بِالظَّالِمِينَ
ಹೇಳಿರಿ: ನೀವು ಆತುರಪಡುತ್ತಿರುವ ಆ ಯಾತನೆಯು ನನ್ನ ಬಳಿಯಿರುತ್ತಿದ್ದರೆ ನನ್ನ ಮತ್ತು ನಿಮ್ಮ ಮಧ್ಯೆ ಈಗಾಗಲೇ ತೀರ್ಪು ಆಗಿಬಿಡುತ್ತಿತ್ತು ಮತ್ತು ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ.
59۞ وَعِندَهُ مَفَاتِحُ الْغَيْبِ لَا يَعْلَمُهَا إِلَّا هُوَ ۚ وَيَعْلَمُ مَا فِي الْبَرِّ وَالْبَحْرِ ۚ وَمَا تَسْقُطُ مِن وَرَقَةٍ إِلَّا يَعْلَمُهَا وَلَا حَبَّةٍ فِي ظُلُمَاتِ الْأَرْضِ وَلَا رَطْبٍ وَلَا يَابِسٍ إِلَّا فِي كِتَابٍ مُّبِينٍ
ಮತ್ತು ಅಗೋಚರದ ಕೀಲಿ ಕೈಗಳು ಅಲ್ಲಾಹನ ಬಳಿ ಮಾತ್ರವಿದೆ. ಅಲ್ಲಾಹನ ಹೊರತು ಇನ್ನಾರೂ ಅವುಗಳನ್ನು ಅರಿಯಲಾರರು. ನೆಲ, ಜಲದಲ್ಲಿರುವ ಸಕಲ ವಸ್ತುಗಳನ್ನು ಅವನು ಅರಿಯುತ್ತಾನೆ. ಅವನು ಅರಿಯದೆ ಒಂದು ಎಲೆಯು ಉದುರದು ಮತ್ತು ಭೂಮಿಯ ಅಂಧಕಾರಗಳಲ್ಲಿ ಹುದುಗಿರುವ ಒಂದು ಧಾನ್ಯವಾಗಿರಿಲಿ, ಹಸಿಯೋ ಒಣವೋ ಆಗಿರುವ ವಸ್ತುವಾಗಿರಲಿ ಅವನ ಬಳಿ ಇರುವ ಸ್ಪಷ್ಟವಾದ ಒಂದು ಗ್ರಂಥದಲ್ಲಿ ಉಲ್ಲೇಖವಿದೆ.
60وَهُوَ الَّذِي يَتَوَفَّاكُم بِاللَّيْلِ وَيَعْلَمُ مَا جَرَحْتُم بِالنَّهَارِ ثُمَّ يَبْعَثُكُمْ فِيهِ لِيُقْضَىٰ أَجَلٌ مُّسَمًّى ۖ ثُمَّ إِلَيْهِ مَرْجِعُكُمْ ثُمَّ يُنَبِّئُكُم بِمَا كُنتُمْ تَعْمَلُونَ
ಮತ್ತು ಅವನೇ ರಾತ್ರಿಯಲ್ಲಿ ನಿಮ್ಮ ಆತ್ಮಗಳನ್ನು ವಶಪಡಿಸಿಕೊಳ್ಳುತ್ತಾನೆ. ಮತ್ತು ಹಗಲಿನಲ್ಲಿ ನೀವು ಮಾಡಿದ್ದನ್ನೆಲ್ಲ ಅವನು ಅರಿಯುತ್ತಾನೆ. ನಂತರ ಅವನು ನೀವು (ಆಯಸ್ಸಿನ) ನಿಶ್ಚಿತಾವಧಿ ಪೂರ್ತಿಗೊಳಿಸಲೆಂದು ನಿಮ್ಮನ್ನು ಮರುದಿನ ಹಗಲಿನಲ್ಲಿ ಎಚ್ಚರಗೊಳಿಸುತ್ತಾನೆ. ನಂತರ ಅವನೆಡೆಗೇ ನಿಮ್ಮ ಮರಳುವಿಕೆಯಿದೆ. ಅನಂತರ ಅವನು ನೀವು ಮಾಡುತ್ತಿದ್ದುದೆಲ್ಲವನ್ನು ನಿಮಗೆ ತಿಳಿಸಿ ಕೊಡುವನು.
ಅಲ್-ಅನ್ಆಮ್ಕುರಾನ್ ಸೂಚಿ
165ಆಯತ್
MeccanRevelation
58ಆಯತ್

ಅನುವಾದ — ಅಲ್-ಅನ್ಆಮ್ 58

ಸೂರಾ ಅಲ್-ಅನ್ಆಮ್ ಆಯತ್ 58 - ಓದಿ, ಆಲಿಸಿ, ಅನುವಾದ, ಕನ್ನಡ : ಹೇಳಿರಿ: ನೀವು ಆತುರಪಡುತ್ತಿರುವ ಆ ಯಾತನೆಯು ನನ್ನ ಬಳಿಯಿರುತ್ತಿದ್ದರೆ ನನ್ನ ಮತ್ತು ನಿಮ್ಮ…

ಸೂರಾ ಆಯತ್ 58/165 — ಸೂರಾ ಅಲ್-ಅನ್ಆಮ್ الأنعام (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅನ್ಆಮ್ ಆಲಿಸಿ, ಸೂರಾ ಅಲ್-ಅನ್ಆಮ್ ಅನುವಾದ, ಸೂರಾ ಅಲ್-ಅನ್ಆಮ್ mp3, ಸೂರಾ ಅಲ್-ಅನ್ಆಮ್ pdf. ಆಯತ್ 56–60. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers