ಅಲ್-ಅನ್ಆಮ್ · 90/165
ಅನುವಾದ ಉಚ್ಚಾರಣೆ — ಸೂರಾ ಅಲ್-ಅನ್ಆಮ್
أُولَٰئِكَ الَّذِينَ هَدَى اللَّهُ ۖ فَبِهُدَاهُمُ اقْتَدِهْ ۗ قُل لَّا أَسْأَلُكُمْ عَلَيْهِ أَجْرًا ۖ إِنْ هُوَ إِلَّا ذِكْرَىٰ لِلْعَالَمِينَ ۝٩٠
Ulaaa`ikal lazeena hadal laahu fabihudaahumuq tadih; qul laaa as`alukum `alaihi ajran in huwa illaa zikraa lil `aalameen
📖 ಕನ್ನಡ ಅರ್ಥ
ಅಲ್ಲಾಹನು ಸನ್ಮಾರ್ಗದಲ್ಲಿ ಸೇರಿಸಿದ್ದು ಇವರನ್ನೇ ಆಗಿದೆ. ಆದ್ದರಿಂದ ನೀವೂ ಇವರ ಮಾರ್ಗವನ್ನೇ ಅನುಸರಿಸಿ. ಮತ್ತು ಹೇಳಿರಿ: ಈ ಸಂದೇಶ ತಲುಪಿಸುವುದಕ್ಕಾಗಿ ನಾನು ನಿಮ್ಮಿಂದ ಯಾವುದೇ ಪ್ರತಿಫಲವನ್ನು ಬಯಸುವುದಿಲ್ಲ. ಇದು ಸರ್ವಲೋಕದವರೆಗೆ ಒಂದು ಉಪದೇಶವಾಗಿದೆ.

🎧 ಆಲಿಸಿ


📜 ಆಯತ್ 88-92 — ಸೂರಾ ಅಲ್-ಅನ್ಆಮ್

88ذَٰلِكَ هُدَى اللَّهِ يَهْدِي بِهِ مَن يَشَاءُ مِنْ عِبَادِهِ ۚ وَلَوْ أَشْرَكُوا لَحَبِطَ عَنْهُم مَّا كَانُوا يَعْمَلُونَ
ಇದು ಅಲ್ಲಾಹನ ಮಾರ್ಗದರ್ಶನವಾಗಿದೆ. ತನ್ಮೂಲಕ ಅವನು ತನ್ನ ದಾಸರ ಪೈಕಿ ತಾನಿಚ್ಛಿಸುವವರನ್ನು ಸತ್ಯ ಮಾರ್ಗದೆಡೆಗೆ ಮುನ್ನಡೆಸುತ್ತಾನೆ. ಇನ್ನು ಅವರು (ಆ ಪೈಗಂಬರರು) ಅಲ್ಲಾಹನಿಗೆ ಸಹಭಾಗಿಗಳನ್ನು ನಿಶ್ಚಯಿಸಿರುತ್ತಿದ್ದರೆ ಅವರ ಕರ್ಮಗಳೆಲ್ಲವೂ ನಿಷ್ಫಲವಾಗಿ ಬಿಡುತ್ತಿದ್ದವು.
89أُولَٰئِكَ الَّذِينَ آتَيْنَاهُمُ الْكِتَابَ وَالْحُكْمَ وَالنُّبُوَّةَ ۚ فَإِن يَكْفُرْ بِهَا هَٰؤُلَاءِ فَقَدْ وَكَّلْنَا بِهَا قَوْمًا لَّيْسُوا بِهَا بِكَافِرِينَ
ನಾವು (ಅಲ್ಲಾಹ್) ಗ್ರಂಥ, ಸುಜ್ಞಾನ ಮತ್ತು ಪ್ರವಾದಿತ್ವವನ್ನು ನೀಡಿದ್ದು ಇವರೇ ಆಗಿದ್ದಾರೆ. ಇನ್ನು ಇವರು (ಬಹುದೇವಾರಾಧಕರು) ಪ್ರವಾದಿತ್ವವನ್ನು ನಿಷೇಧಿಸಿದರೆ ನಾವು ಅದಕ್ಕಾಗಿ ಅವುಗಳನ್ನು ನಿಷೇಧಿಸದಂತಹ ಒಂದು ಜನತೆಯನ್ನು ನಿಶ್ಚಯಿಸಿದ್ದೇವೆ.
90أُولَٰئِكَ الَّذِينَ هَدَى اللَّهُ ۖ فَبِهُدَاهُمُ اقْتَدِهْ ۗ قُل لَّا أَسْأَلُكُمْ عَلَيْهِ أَجْرًا ۖ إِنْ هُوَ إِلَّا ذِكْرَىٰ لِلْعَالَمِينَ
ಅಲ್ಲಾಹನು ಸನ್ಮಾರ್ಗದಲ್ಲಿ ಸೇರಿಸಿದ್ದು ಇವರನ್ನೇ ಆಗಿದೆ. ಆದ್ದರಿಂದ ನೀವೂ ಇವರ ಮಾರ್ಗವನ್ನೇ ಅನುಸರಿಸಿ. ಮತ್ತು ಹೇಳಿರಿ: ಈ ಸಂದೇಶ ತಲುಪಿಸುವುದಕ್ಕಾಗಿ ನಾನು ನಿಮ್ಮಿಂದ ಯಾವುದೇ ಪ್ರತಿಫಲವನ್ನು ಬಯಸುವುದಿಲ್ಲ. ಇದು ಸರ್ವಲೋಕದವರೆಗೆ ಒಂದು ಉಪದೇಶವಾಗಿದೆ.
91وَمَا قَدَرُوا اللَّهَ حَقَّ قَدْرِهِ إِذْ قَالُوا مَا أَنزَلَ اللَّهُ عَلَىٰ بَشَرٍ مِّن شَيْءٍ ۗ قُلْ مَنْ أَنزَلَ الْكِتَابَ الَّذِي جَاءَ بِهِ مُوسَىٰ نُورًا وَهُدًى لِّلنَّاسِ ۖ تَجْعَلُونَهُ قَرَاطِيسَ تُبْدُونَهَا وَتُخْفُونَ كَثِيرًا ۖ وَعُلِّمْتُم مَّا لَمْ تَعْلَمُوا أَنتُمْ وَلَا آبَاؤُكُمْ ۖ قُلِ اللَّهُ ۖ ثُمَّ ذَرْهُمْ فِي خَوْضِهِمْ يَلْعَبُونَ
ಅಲ್ಲಾಹನು ಯಾವೊಬ್ಬ ಮನುಷ್ಯನಿಗೂ ಏನನ್ನು ಅವತೀರ್ಣಗೊಳಿಸಿಲ್ಲ ಎಂದು ಅವರು ಹೇಳಿದ ಸಂದರ್ಭವನ್ನು ಸ್ಮರಿಸಿರಿ ಅವರು ಅಲ್ಲಾಹನ ಮಹತ್ವವನ್ನು ಗ್ರಹಿಸುವಂತೆ ಗ್ರಹಿಸಲಿಲ್ಲ. ಹೇಳಿರಿ: ಹಾಗಾದರೆ ಜನರಿಗೆ ಪ್ರಕಾಶ ಮತ್ತು ಸನ್ಮಾರ್ಗವಾಗಿ ಮೂಸಾ ತಂದ ಗ್ರಂಥವನ್ನು ಅವತೀರ್ಣಗೊಳಿಸಿದ್ದು ಯಾರು? ಅದನ್ನು ನೀವು ವಿಭಿನ್ನ ಹಾಳೆಗಳಲ್ಲಿಟ್ಟು ಬಿಟ್ಟರಿ. ಅವುಗಳಲ್ಲಿ ಕೆಲವನ್ನು ಬಹಿರಂಗಪಡಿಸುತ್ತೀರಿ ಮತ್ತು ಹೆಚ್ಚಿನ ವಿಷಯಗಳನ್ನು ಬಚ್ಚಿಡುತ್ತೀರಿ. ಅದರ ಮೂಲಕ ನೀವಾಗಲೀ, ನಿಮ್ಮ ಪೂರ್ವಿಕರಾಗಲೀ ಅರಿತಿರದಂತಹ ವಿಚಾರಗಳನ್ನು (ಆ ಗ್ರಂಥದ ಮೂಲಕ) ನಿಮಗೆ ಕಲಿಸಿಕೊಡಲಾಗಿದೆ. ಹೇಳಿರಿ: ಅಲ್ಲಾಹನೇ ಅದನ್ನು ಅವತೀರ್ಣಗೊ ಳಿಸಿರುವನು. ನಂತರ ಅವರನ್ನು ಅವರ ವ್ಯರ್ಥಮಾತುಗಳಲ್ಲಿ ಆಟವಾಡುತ್ತಿರಲು ಬಿಟ್ಟು ಬಿಡಿರಿ.
92وَهَٰذَا كِتَابٌ أَنزَلْنَاهُ مُبَارَكٌ مُّصَدِّقُ الَّذِي بَيْنَ يَدَيْهِ وَلِتُنذِرَ أُمَّ الْقُرَىٰ وَمَنْ حَوْلَهَا ۚ وَالَّذِينَ يُؤْمِنُونَ بِالْآخِرَةِ يُؤْمِنُونَ بِهِ ۖ وَهُمْ عَلَىٰ صَلَاتِهِمْ يُحَافِظُونَ
ಮತ್ತು ಇದು ನಾವು ಅವತೀರ್ಣಗೊಳಿಸಿರುವ ಸಮೃದ್ಧಪೂರ್ಣ (ಮತ್ತೊಂದು) ಗ್ರಂಥವಾಗಿದೆ. ಹಾಗೂ ತನಗಿಂತ ಮುಂಚಿನ ಗ್ರಂಥಗಳನ್ನು ಸತ್ಯವೆಂದು ದೃಢೀಕರಿಸುತ್ತದೆ. ಇದು ನೀವು ಮಕ್ಕಾನಿವಾಸಿಗಳಿಗೆ ಮತ್ತು ಅದರ ಸುತ್ತ ಮುತ್ತಲಿನಲ್ಲಿರುವವರಿಗೆ ಮುನ್ನೆಚ್ಚರಿಕೆ ನೀಡಲೆಂದಾಗಿದೆ. ಮತ್ತು ಪರಲೋಕದಲ್ಲಿ ವಿಶ್ವಾಸ ವಿಡುವವರು ಇದರಲ್ಲಿ ವಿಶ್ವಾಸ ಇಡುತ್ತಾರೆ ಮತ್ತು ಅವರು ತಮ್ಮ ನಮಾಝ್‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.
ಅಲ್-ಅನ್ಆಮ್ಕುರಾನ್ ಸೂಚಿ
165ಆಯತ್
MeccanRevelation
90ಆಯತ್

ಅನುವಾದ — ಅಲ್-ಅನ್ಆಮ್ 90

ಸೂರಾ ಅಲ್-ಅನ್ಆಮ್ ಆಯತ್ 90 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನು ಸನ್ಮಾರ್ಗದಲ್ಲಿ ಸೇರಿಸಿದ್ದು ಇವರನ್ನೇ ಆಗಿದೆ. ಆದ್ದರಿಂದ ನೀವೂ ಇವರ ಮಾರ್ಗವನ್ನೇ ಅನುಸರಿಸಿ.…

ಸೂರಾ ಆಯತ್ 90/165 — ಸೂರಾ ಅಲ್-ಅನ್ಆಮ್ الأنعام (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅನ್ಆಮ್ ಆಲಿಸಿ, ಸೂರಾ ಅಲ್-ಅನ್ಆಮ್ ಅನುವಾದ, ಸೂರಾ ಅಲ್-ಅನ್ಆಮ್ mp3, ಸೂರಾ ಅಲ್-ಅನ್ಆಮ್ pdf. ಆಯತ್ 88–92. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers