ಅನ್-ನಹ್ಲ್ · 60/128
ಅನುವಾದ ಉಚ್ಚಾರಣೆ — ಸೂರಾ ಅನ್-ನಹ್ಲ್
لِلَّذِينَ لَا يُؤْمِنُونَ بِالْآخِرَةِ مَثَلُ السَّوْءِ ۖ وَلِلَّهِ الْمَثَلُ الْأَعْلَىٰ ۚ وَهُوَ الْعَزِيزُ الْحَكِيمُ ٦٠
Transliteration
Lillazeena laa yu`minoona bil Aakhirati masalus saw`i wa lillaahil masalul a`laa; wa Huwal `Azeezul Hakeem
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ಪರಲೋಕದಲ್ಲಿ ವಿಶ್ವಾಸವಿಡದವರಿಗೇ ಕೆಟ್ಟ ಉಪಮೆ ಇರುವುದು ಅಲ್ಲಾಹನಿಗಂತು ಮಹೋನ್ನತವಾದ ಉಪಮೆಯಿದೆ ಮತ್ತು ಅವನು ಮಹಾ ಪ್ರಚಂಡನು, ಯುಕ್ತಿಪೂರ್ಣನು ಆಗಿರುವನು.
Additional reference in தமிழ்
🎧 ಆಲಿಸಿ
📜 ಆಯತ್ 58-62 — ಸೂರಾ ಅನ್-ನಹ್ಲ್
58وَإِذَا بُشِّرَ أَحَدُهُم بِالْأُنثَىٰ ظَلَّ وَجْهُهُ مُسْوَدًّا وَهُوَ كَظِيمٌ
ಅವರ ಪೈಕಿ ಯಾರಿಗಾದರು ಹೆಣ್ಣು ಮಗು ಹುಟ್ಟಿದ ಸುವಾರ್ತೆಯನ್ನು ಕೊಡಲಾದರೆ ಅವನ ಮುಖ ಕಳೆಗುಂದಿ ಬಿಡುತ್ತದೆ ಮತ್ತು ಅವನು ಒಳಗೊಳಗೇ ಕೊರಗುತ್ತಾನೆ.
59يَتَوَارَىٰ مِنَ الْقَوْمِ مِن سُوءِ مَا بُشِّرَ بِهِ ۚ أَيُمْسِكُهُ عَلَىٰ هُونٍ أَمْ يَدُسُّهُ فِي التُّرَابِ ۗ أَلَا سَاءَ مَا يَحْكُمُونَ
ಈ ಕೆಟ್ಟ ಸುದ್ದಿಯ ನಿಮಿತ್ತ ಅವನು ಜನರಿಂದ ತಲೆಮರೆಸಿಕೊಂಡು ತಿರುಗುತ್ತಾನೆ. ಈ ಅಪಮಾನದೊಂದಿಗೆ ತಾನು ಅದನ್ನು ಇರಿಸಿಕೊಳ್ಳಲೇ ಅಥವಾ ಮಣ್ಣಿನಲ್ಲಿ ಹೂತುಬಿಡಲೇ ಎಂದು ಯೋಚಿಸುತ್ತಾನೆ. ತಿಳಿಯಿರಿ! ಅವರು ಅದೆಂತಹ ಕೆಟ್ಟ ತೀರ್ಮಾನವನ್ನು ಕೈಗೊಳ್ಳುತ್ತಿದ್ದಾರೆ.
60لِلَّذِينَ لَا يُؤْمِنُونَ بِالْآخِرَةِ مَثَلُ السَّوْءِ ۖ وَلِلَّهِ الْمَثَلُ الْأَعْلَىٰ ۚ وَهُوَ الْعَزِيزُ الْحَكِيمُ
ಪರಲೋಕದಲ್ಲಿ ವಿಶ್ವಾಸವಿಡದವರಿಗೇ ಕೆಟ್ಟ ಉಪಮೆ ಇರುವುದು ಅಲ್ಲಾಹನಿಗಂತು ಮಹೋನ್ನತವಾದ ಉಪಮೆಯಿದೆ ಮತ್ತು ಅವನು ಮಹಾ ಪ್ರಚಂಡನು, ಯುಕ್ತಿಪೂರ್ಣನು ಆಗಿರುವನು.
61وَلَوْ يُؤَاخِذُ اللَّهُ النَّاسَ بِظُلْمِهِم مَّا تَرَكَ عَلَيْهَا مِن دَابَّةٍ وَلَٰكِن يُؤَخِّرُهُمْ إِلَىٰ أَجَلٍ مُّسَمًّى ۖ فَإِذَا جَاءَ أَجَلُهُمْ لَا يَسْتَأْخِرُونَ سَاعَةً ۖ وَلَا يَسْتَقْدِمُونَ
ಅಲ್ಲಾಹನು ಜನರನ್ನು ಅವರ ಅಕ್ರಮದ ನಿಮಿತ್ತ ಹಿಡಿಯುತ್ತಿದ್ದರೆ ಭೂಮುಖದ ಮೇಲೆ ಯಾವೊಂದು ಜೀವಿಯನ್ನೂ ಬಿಡುತ್ತಿರಲಿಲ್ಲ. ಆದರೆ ಅವನಂತು ಅವರಿಗೆ ಒಂದು ನಿಶ್ಚಿತ ಅವಧಿಯವರೆಗೆ ಕಾಲಾವಕಾಶ ನೀಡುತ್ತಾನೆ. ಕೊನೆಗೆ ಅವರ ಆ ನಿಶ್ಚಿತ ಅವಧಿಯು ಬಂದಾಗ ಅವರು ಒಂದು ಗಳಿಗೆಯಷ್ಟು ಹಿಂದೆಯೂ ಸರಿಯಲಾರರು ಮತ್ತು ಮುಂದೆಯೂ ಸರಿಯಲಾರರು.
62وَيَجْعَلُونَ لِلَّهِ مَا يَكْرَهُونَ وَتَصِفُ أَلْسِنَتُهُمُ الْكَذِبَ أَنَّ لَهُمُ الْحُسْنَىٰ ۖ لَا جَرَمَ أَنَّ لَهُمُ النَّارَ وَأَنَّهُم مُّفْرَطُونَ
ಅವರು ತಮಗೆ ಇಷ್ಟವಿಲ್ಲದ್ದನ್ನು ಅಲ್ಲಾಹನಿಗೆ ನಿಶ್ಚಯಿಸುತ್ತಾರೆ ಮತ್ತು ಅವರ ನಾಲಿಗೆಗಳು ತಮಗೇ ಪರಲೋಕದಲ್ಲಿ ಅತ್ಯುತ್ತಮವಾದುದಿದೆ ಎಂದು ಸುಳ್ಳು ವಾದಿಸುತ್ತಾರೆ. ಹಾಗಲ್ಲ! ವಾಸ್ತವದಲ್ಲಿ ಅವರಿಗೆ ನರಕಾಗ್ನಿಯಿದೆ ಮತ್ತು ಅವರು ನರಕವಾಸಿಗಳ ಮುಂದಾಳುಗಳಾಗಿರುತ್ತಾರೆ.
ಅನ್-ನಹ್ಲ್ಕುರಾನ್ ಸೂಚಿ
128ಆಯತ್
MeccanRevelation
60ಆಯತ್
ಅನುವಾದ — ಅನ್-ನಹ್ಲ್ 60
ಸೂರಾ ಅನ್-ನಹ್ಲ್ ಆಯತ್ 60 - ಓದಿ, ಆಲಿಸಿ, ಅನುವಾದ, ಕನ್ನಡ : ಪರಲೋಕದಲ್ಲಿ ವಿಶ್ವಾಸವಿಡದವರಿಗೇ ಕೆಟ್ಟ ಉಪಮೆ ಇರುವುದು ಅಲ್ಲಾಹನಿಗಂತು ಮಹೋನ್ನತವಾದ ಉಪಮೆಯಿದೆ ಮತ್ತು ಅವನು…ಸೂರಾ ಆಯತ್ 60/128 — ಸೂರಾ ಅನ್-ನಹ್ಲ್ النحل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಹ್ಲ್ ಆಲಿಸಿ, ಸೂರಾ ಅನ್-ನಹ್ಲ್ ಅನುವಾದ, ಸೂರಾ ಅನ್-ನಹ್ಲ್ mp3, ಸೂರಾ ಅನ್-ನಹ್ಲ್ pdf. ಆಯತ್ 58–62. ಕನ್ನಡ ಅರ್ಥ: தமிழ்.
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Monday, September 7, 2026
Don't forget us in your sincere prayers








